ನವದೆಹಲಿ: ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ಶುಕ್ರವಾರ 50 ಟೆಸ್ಟ್ ವಿಕೆಟ್‌ಗಳನ್ನು ಕಬಳಿಸಿದ ಅತಿ ವೇಗದ ಭಾರತದ ಬೌಲರ್ ಎನಿಸಿಕೊಂಡರು. ಆಂಟಿಗುವಾದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಂದು ಅವರು ವೆಸ್ಟ್ ಇಂಡೀಸ್ ವಿರುದ್ಧ ಈ ಸಾಧನೆ ಮಾಡಿದ್ದಾರೆ.
Fastest Indians to 50 Test wickets:
🔸 R Ashwin ➜ 9 matches
🔸 Anil Kumble ➜ 10 matches
🔸 Narendra Hirwani ➜ 11 matches
🔸 Harbhajan Singh ➜ 11 matches
🔸 JASPRIT BUMRAH ➜ 11 matches 👏#WIvIND pic.twitter.com/fXKIxeJ7LJ— ICC (@ICC) August 24, 2019
ವೆಸ್ಟ್ ವಿಂಡೀಸ್ ಇನ್ನಿಂಗ್ಸ್‌ನ 30 ನೇ ಓವರ್‌ನಲ್ಲಿ ಡ್ಯಾರೆನ್ ಬ್ರಾವೋ ಅವರನ್ನು ಬುಮ್ರಾ ಔ ಟ್ ಮಾಡಿ ತಮ್ಮ 50 ನೇ ಟೆಸ್ಟ್ ವಿಕೆಟ್ ದಾಖಲಿಸಿದರು. ಆ ಮೂಲಕ ಅವರು ಕೇವಲ 11ನೇ ಪಂದ್ಯದಲ್ಲಿ ಈ ಸಾಧನೆ ಮಾಡುವ ಮೂಲಕ ವೇಗಿ ವೆಂಟಕೇಶ್ ಪ್ರಸಾದ್ ಮತ್ತು ಮೊಹಮ್ಮದ್ ಶಮಿ ಅವರನ್ನು ಹಿಂದಿಕ್ಕಿದ್ದಾರೆ. ಈ ಇಬ್ಬರು 13 ಟೆಸ್ಟ್ ಪಂದ್ಯಗಳಲ್ಲಿ ಈ ಮೈಲಿಗಲ್ಲು ತಲುಪಿದ್ದರು.
ಆಲ್‌ರೌಂಡರ್ ರವೀಂದ್ರ ಜಡೇಜಾ 58 ರನ್ ಗಳಿಸಿ ಇಶಾಂತ್ ಶರ್ಮಾ ಅವರೊಂದಿಗೆ 60 ರನ್ ಜೊತೆಯಾಟದ ಮೂಲಕ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ ಭಾರತವು 297 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.ಇನ್ನೊಂದೆಡೆ ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡವು ಮೊದಲ ಇನ್ನಿಂಗ್ಸ್ ನಲ್ಲಿ ಎಂಟು ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿದೆ. ಭಾರತದ ಪರ ಇಶಾಂತ್ ಐದು ವಿಕೆಟ್‌ಗಳನ್ನು ಕಬಳಿಸುವ ಮೂಲಕ ವೆಸ್ಟ್ ಇಂಡೀಸ್ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.