Sarfaraz Khan Video: ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 9 ರನ್‌ಗ ಳ ಸೋಲನ್ನು ಅನುಭವಿಸಿದೆ. ಆದರೆ ಆ ತಂಡದ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್ ಅವರ ಅದ್ಭುತ ಶಾಟ್ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದೆ. ಸ್ವತಃ ಸೂರ್ಯಕುಮಾರ್ ಯಾದವ್ ಕೂಡ ಬೆಚ್ಚಿ ಬೀಳುವಂತೆ ಸರ್ಫರಾಜ್ ಖಾನ್ ನೆಲದ ಮೇಲೆ ಮಲಗಿ ಅದ್ಬುತ ಬೌಂಡರಿ ಬಾರಿಸಿದ್ದಾರೆ.
ಸೂರ್ಯಕುಮಾರ್ ಯಾದವ್ ಅವರನ್ನು ಮಿಸ್ಟರ್ 360 ಡಿಗ್ರಿ ಎಂದು ಕರೆಯಲಾಗುತ್ತದೆ. ಇದಕ್ಕೆ ಕಾರಣ ಅವರು ಮೈದಾನದ ಸುತ್ತಲೂ ಬೌಂಡರಿ ಮತ್ತು ಸಿಕ್ಸರ್ ಗಳ ಮಳೆಗರೆಯುತ್ತಾ ರನ್ ಲೂಟಿ ಮಾಡುವುದು. ಆದರೆ ಇದೀಗ ಸೂರ್ಯಕುಮಾರ್ ಯಾದವ್ ಗಿಂತ ಸರ್ಫರಾಜ್ ಖಾನ್ ಅದ್ಭುತ ಶಾಟ್ ಒಂದನ್ನು ಬಾರಿಸಿದ್ದಾರೆ.
ಇದನ್ನೂ ಓದಿ: Rohit Sharma: IPLನಿಂದ ಅರ್ಧಕ್ಕೆ ಹೊರ ಹೋಗುತ್ತಾರಾ ರೋಹಿತ್ ಶರ್ಮಾ! ಕೋಚ್ ಹೇಳಿದ್ದೇನು ಗೊತ್ತಾ?
ನೆಲದ ಮೇಲೆ ಮಲಗಿ ಅದ್ಭುತ ಶಾಟ್:
ಸರ್ಫರಾಜ್ ಖಾನ್ ಬಾರಿಸಿರುವ ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್ ನ 17 ನೇ ಓವರ್ ನಲ್ಲಿ, ಸನ್ ರೈಸರ್ಸ್ ಹೈದರಾಬಾದ್ ವೇಗದ ಬೌಲರ್ ಟಿ ನಟರಾಜನ್ ಅವರ ಅತ್ಯಂತ ಮಾರಕವಾದ ನಾಲ್ಕನೇ ಎಸೆತಕ್ಕೆ ಬ್ಯಾಟ್ ಬೀಸಿದ್ದಾರೆ. ನೆಲದ ಮೇಲೆ ಮಲಗಿಕೊಂಡು ಸರ್ಫರಾಜ್ ಖಾನ್ ವಿಕೆಟ್ ಕೀಪರ್ ಮೇಲೆ ಬೌಂಡರಿ ಸಿಡಿಸಿದರು. ಈ ಶಾಟ್ ಮೂಲಕ ಸರ್ಫರಾಜ್ ಖಾನ್ ಅವರು ಸೂರ್ಯಕುಮಾರ್ ಯಾದವ್ ಅವರಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ ಎಂದು ಹೇಳುವಂತಾಗಿದೆ. ಆದರೆ ಸರ್ಫರಾಜ್ ಖಾನ್ ಕೇವಲ 9 ರನ್ ಗಳಿಸಲಷ್ಟೇ ಶಕ್ತರಾದರು.
— binu (@sachhikhabars) April 29, 2023
ಸರ್ಫರಾಜ್ ಖಾನ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬೆಂಕಿಯಂತೆ ವೈರಲ್ ಆಗುತ್ತಿದೆ. ಅಭಿಷೇಕ್ ಶರ್ಮಾ ಅವರ ಆಲ್ ರೌಂಡರ್ ಆಟ ಮತ್ತು ಕೊನೆಯ ಓವರ್ ನಲ್ಲಿ ಹೆನ್ರಿಚ್ ಕ್ಲಾಸೆನ್ ಅವರ ಆಕ್ರಮಣಕಾರಿ ಬ್ಯಾಟಿಂಗ್‌ನಿಂದಾಗಿ ಸನ್ ರೈಸರ್ಸ್ ಹೈದರಾಬಾದ್ ಡೆಲ್ಲಿ ಕ್ಯಾಪಿಟಲ್ಸ್ ಅನ್ನು 9 ರನ್‌ಗಳಿಂದ ಸೋಲಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್, ಅಭಿಷೇಕ್ ಶರ್ಮಾ ಅವರ 36 ಎಸೆತಗಳಲ್ಲಿ 67 ರನ್ ಮತ್ತು ಕ್ಲಾಸೆನ್ ಅವರ 27 ಎಸೆತಗಳಲ್ಲಿ ಅಜೇಯ 53 ರನ್‌ಗಳ ಆಧಾರದ ಮೇಲೆ ಆರು ವಿಕೆಟ್‌ಗಳಿಗೆ 197 ರನ್ ಗಳಿಸಿತು, ಇದು ಪ್ರಸಕ್ತ ಋತುವಿನಲ್ಲಿ ಈ ಮೈದಾನದ ಗರಿಷ್ಠ ಸ್ಕೋರ್ ಆಗಿದೆ. ಸನ್ ರೈಸರ್ಸ್ ಹೈದರಾಬಾದ್ ಪರ ಅಬ್ದುಲ್ ಸಮದ್ 21 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 28 ರನ್ ಗಳಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ಹೀನಾಯ ಸೋಲು:
ಮಿಚೆಲ್ ಮಾರ್ಷ್ ಅವರ ಆಲ್‌ರೌಂಡ್ ಆಟ ಮತ್ತು ಫಿಲ್ ಸಾಲ್ಟ್ ಅವರೊಂದಿಗೆ ಎರಡನೇ ವಿಕೆಟ್‌ಗೆ 66 ಎಸೆತಗಳ 112 ರನ್ ಜೊತೆಯಾಟವು ಡೆಲ್ಲಿ ತಂಡಕ್ಕೆ ಲಾಭ ತಂದುಕೊಡಲಿಲ್ಲ. 20 ಓವರ್ ಗಳಲ್ಲಿ ಆರು ವಿಕೆಟ್ ಗೆ 188 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಲ್ಕು ಓವರ್ ಗಳಲ್ಲಿ 27 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದ ಮಾರ್ಷ್ ಬ್ಯಾಟಿಂಗ್ ನಲ್ಲಿ 39 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 63 ರನ್ ಗಳಿಸಿದರು. ಕೊನೆಯ ಓವರ್ ನಲ್ಲಿ ಅಕ್ಷರ್ ಪಟೇಲ್ 14 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ ಅಜೇಯ 29 ರನ್ ಗಳಿಸಿದರು.
ಇದನ್ನೂ ಓದಿ: Team India: ಟೀಂ ಇಂಡಿಯಾದ ಈ ಇಬ್ಬರು ಖಿಲಾಡಿಗಳ ಕ್ರಿಕೆಟ್ ಜೀವನ ಅಂತ್ಯ! IPLನಿಂದಲೂ ಶೀಘ್ರವೇ ನಿವೃತ್ತಿ
ಈ ಗೆಲುವಿನ ಜೊತೆಗೆ ಸನ್‌ರೈಸರ್ಸ್ ಹೈದರಾಬಾದ್ ತಂಡವು ಏಪ್ರಿಲ್ 24 ರಂದು ಈ ತಂಡದ ಸೋಲಿಗೆ ಸೇಡು ತೀರಿಸಿಕೊಂಡಿತು. ಇದು ಹೈದರಾಬಾದ್ ಗೆ ಎಂಟು ಪಂದ್ಯಗಳಲ್ಲಿ ಮೂರನೇ ಗೆಲುವು, ದೆಹಲಿಗೆ ಎಂಟು ಪಂದ್ಯಗಳಲ್ಲಿ ಇದು ಆರನೇ ಸೋಲು. ಸನ್ ರೈಸರ್ಸ್ ಪರ ಮಾಯಾಂಕ್ ಮಾರ್ಕಂಡೇ ನಾಲ್ಕು ಓವರ್ ಗಳಲ್ಲಿ 20 ರನ್ ನೀಡಿ ಎರಡು ವಿಕೆಟ್ ಪಡೆದರು. ಭುವನೇಶ್ವರ್ ಕುಮಾರ್, ಅಕಿಲ್ ಹುಸೇನ್, ಟಿ ನಟರಾಜನ್ ಮತ್ತು ಅಭಿಷೇಕ್ ಶರ್ಮಾ ತಲಾ ಒಂದು ವಿಕೆಟ್ ಕಬಳಿಸಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.