Gautam Gambhir Video: Virat Kohli ಬಳಿಕ ಈ ಆಟಗಾರನ ಜೊತೆಗೆ ಗೌತಿಯ ಆನ್ ಫೀಲ್ಡ್ ದೋಸ್ತಿ ವಿಡಿಯೋ ವೈರಲ್!

IPL 2024: KKR vs CSK ಪಂದ್ಯದಲ್ಲಿ ಚೆನ್ನೈ ತಂಡದ ಗೆಲುವಿನ ಬಳಿಕ ಗೌತಮ್ ಗಂಭೀರ್ ಮಹೇಂದ್ರ ಸಿಂಗ್ ಧೋನಿ ಅವರನ್ನು ಅಪ್ಪಿಕೊಂಡು ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ.  

Written by - Nitin Tabib | Last Updated : Apr 10, 2024, 05:10 PM IST
  • ಚೆನ್ನೈ ಸೂಪರ್ ಕಿಂಗ್ಸ್ ಕೇವಲ 17.4 ಓವರ್‌ಗಳಲ್ಲಿ ಗುರಿಯನ್ನು ತಲುಪಿದೆ.
  • ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ.
  • ವಾಸ್ತವದಲ್ಲಿ, CSK ಗೆಲುವಿನ ನಂತರ, ಗೌತಮ್ ಗಂಭೀರ್ ಮಹೇಂದ್ರ ಸಿಂಗ್ ಧೋನಿ ಅವರನ್ನು ತಬ್ಬಿಕೊಂಡು ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ.
Gautam Gambhir Video: Virat Kohli ಬಳಿಕ ಈ ಆಟಗಾರನ ಜೊತೆಗೆ ಗೌತಿಯ ಆನ್ ಫೀಲ್ಡ್ ದೋಸ್ತಿ ವಿಡಿಯೋ ವೈರಲ್!  title=

Gautam Gambhir MS Dhoni Viral Video: IPL 2024 ರ 22 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು 7 ವಿಕೆಟ್‌ಗಳಿಂದ ಮಣಿಸಿದೆ. ಋತುವಿನಲ್ಲಿ ಸತತ ಎರಡು ಸೋಲುಗಳ ನಂತರ CSK ಮತ್ತೊಮ್ಮೆ ಗೆಲುವಿನ ದಾರಿಯನ್ನು ತುಳಿದಿದೆ, ಇದು KKR ಗೆ ಮೊದಲ ಸೋಲಾಗಿದೆ. ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ 9 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಲಷ್ಟೇ ಶಕ್ತವಾಯಿತು.

ಚೆನ್ನೈ ಸೂಪರ್ ಕಿಂಗ್ಸ್ ಕೇವಲ 17.4 ಓವರ್‌ಗಳಲ್ಲಿ ಗುರಿಯನ್ನು ತಲುಪಿದೆ. ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ. ವಾಸ್ತವದಲ್ಲಿ, CSK ಗೆಲುವಿನ ನಂತರ, ಗೌತಮ್ ಗಂಭೀರ್ ಮಹೇಂದ್ರ ಸಿಂಗ್ ಧೋನಿ ಅವರನ್ನು ತಬ್ಬಿಕೊಂಡು ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಮಾಹಿ ಮೇಲೆ ಉಕ್ಕಿ ಹರಿದ ಗೌತಿ ಪ್ರೀತಿ
ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿಗೆ 3 ರನ್ ಬೇಕಿತ್ತು, ಆಗ ಮಹೇಂದ್ರ ಸಿಂಗ್ ಧೋನಿ ಕ್ರೀಸ್ ಗೆ ಬಂದಿದ್ದಾರೆ. ಧೋನಿ 3 ಎಸೆತಗಳಲ್ಲಿ ಕೇವಲ ಒಂದು ರನ್ ಗಳಿಸಿ ನಾಟ್ ಔಟ್ ಆಗಿ ಉಳಿದಿದ್ದಾರೆ, ನಂತರ ರುತುರಾಜ್ ಗಾಯಕ್ವಾಡ್ ವಿನ್ನಿಂಗ್ ಶಾಟ್ ಹೊಡೆಯುವ ಮೂಲಕ ತಂಡಕ್ಕೆ ಜಯ ತಂದುಕೊಟ್ಟಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ನಂತರ ಎಂಎಸ್ ಧೋನಿ ಮತ್ತು ಗೌತಮ್ ಗಂಭೀರ್ ಮಧ್ಯೆ ಮೈದಾನದಲ್ಲಿ ವಿಶೇಷ ಕ್ಷಣ ಕಂಡುಬಂದಿದೆ. ಇಬ್ಬರೂ ಆಟಗಾರರು ಪರಸ್ಪರ ಹಸ್ತಲಾಘವ ಮಾಡಿ, ಪ್ರೀತಿಯಿಂದ ಅಪ್ಪಿಕೊಂಡು ನಗುತ್ತಾ ಮಾತನಾಡುತ್ತಿರುವುದು ಕಂಡು ಬಂತು.

ಇದನ್ನೂ ನೋಡಿ-IPL 2024: ಪತ್ನಿ ಧನಶ್ರೀಯ ಹಾಟ್ ಅವತಾರ ನೋಡಿ, ಕಕ್ಕಾಬಿಕ್ಕಿಯಾದ ಸ್ಪಿನ್ ಮಾಂತ್ರಿಕ!

IPL 2024 ರ ಈ ಋತುವಿನಲ್ಲಿ, ಅಭಿಮಾನಿಗಳು ಇಂತಹ ವಿಶೇಷ ಮತ್ತು ಅನಿರೀಕ್ಷಿತ ಕ್ಷಣಗಳಿಗೆ ಸಾಕ್ಷಿಯಾಗುತ್ತಿದ್ದಾರೆ. ಆರ್‌ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯದ ವೇಳೆ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಪರಸ್ಪರ ತಬ್ಬಿಕೊಂಡು ಅಭಿನಂದಿಸಿದ್ದು ಕೂಡ ಇಲ್ಲಿ ಉಲ್ಲೇಖನೀಯ.

ಇದನ್ನೂ ಓದಿ-IPL 2024: 'ಅಲ್ಲಿ ಆಕೆ ಕ್ಯಾಪ್ಟನ್ ನಾನು ಆಕೆಗೆ ಹೆದರುತ್ತೇನೆ', ಹೀಗಂತ ರೋಹಿತ್ ಹೇಳಿದ್ದು ಯಾರ ಬಗ್ಗೆ?

ತವರಿನಲ್ಲಿ ಮುಂದುವರೆದ ಸಿಎಸ್ ಕೆ ಪ್ರಾಬಲ್ಯ
ಕೋಲ್ಕತ್ತಾ ನೈಟ್ ರೈಡರ್ಸ್
ತಂಡವನ್ನು ಸೋಲಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತವರು ನೆಲ ಚೆಪಾಕ್‌ನಲ್ಲಿ ಈ ಋತುವಿನಲ್ಲಿ ಮೂರನೇ ಗೆಲುವು ದಾಖಲಿಸಿದೆ. ರವೀಂದ್ರ ಜಡೇಜಾ ಮತ್ತು ತುಷಾರ್ ದೇಶಪಾಂಡೆ ಅವರ ಅದ್ಭುತ ಬೌಲಿಂಗ್‌ನಿಂದಾಗಿ ಕೆಕೆಆರ್ ತಂಡ ಸೋಲನ್ನು ಅನುಭವಿಸಿದೆ. ಇಬ್ಬರೂ ಬೌಲರ್‌ಗಳು ತಲಾ 3-3 ವಿಕೆಟ್‌ ಪಡೆದಿದ್ದಾರೆ. ಸುನಿಲ್ ನಾರಾಯಣ್ (27), ಆಂಗ್ಕ್ರಿಶ್ ರಘುವಂಶಿ (24), ಆಂಡ್ರೆ ರಸೆಲ್ (10) ಮತ್ತು ರಿಂಕು ಸಿಂಗ್ (9) ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ನಾಯಕ ರುತುರಾಜ್ ಗಾಯಕ್ವಾಡ್ ಅವರ ಅಜೇಯ 67 ರನ್‌ಗಳ ಬಲದಿಂದ ಸಿಎಸ್‌ಕೆ ಗೆಲುವು ದಾಖಲಿಸಿದೆ.

ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News