Shikhar Dhawan : ಎರಡನೇ ಪಂದ್ಯ ರದ್ದಾದ ಬಳಿಕ ಅಪಾಯದಲ್ಲಿದೆ ಶಿಖರ್ ಧವನ್ ನಾಯಕತ್ವ

ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದರೆ ಸರಣಿ 1-1ಕ್ಕೆ ಸಮ. ಆದರೆ, ಭಾರತ ತಂಡ ಈ ಪಂದ್ಯದಲ್ಲಿ ಸೋತರೆ ನಾಯಕ ಶಿಖರ್ ಧವನ್ ಹೆಸರಿನಲ್ಲಿ ಕೆಟ್ಟ ದಾಖಲೆ ದಾಖಲಾಗಲಿದೆ. ಹೌದು.. ಆ ದಾಖಲೆ ಯಾವುದು ಇಲ್ಲಿದೆ ನೋಡಿ...

Written by - Channabasava A Kashinakunti | Last Updated : Nov 27, 2022, 05:40 PM IST
  • ಎರಡನೇ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾಗಿದೆ
  • ಮೂರನೇ ಏಕದಿನ ಪಂದ್ಯ ನ. 30 ರಂದು ಕ್ರೈಸ್ಟ್‌ಚರ್ಚ್‌ನಲ್ಲಿ
  • ಈ ಪಂದ್ಯದಲ್ಲಿ ಸೋತರೆ ನಾಯಕ ಧವನ್ ಹೆಸರಿನಲ್ಲಿ ಕೆಟ್ಟ ದಾಖಲೆ
Shikhar Dhawan : ಎರಡನೇ ಪಂದ್ಯ ರದ್ದಾದ ಬಳಿಕ ಅಪಾಯದಲ್ಲಿದೆ ಶಿಖರ್ ಧವನ್ ನಾಯಕತ್ವ title=

India vs New Zealand ODI Series : ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಅಲ್ಲದೆ, ಮೊದಲ ಪಂದ್ಯದ ಕೂಡ ಟೀಂ ಇಂಡಿಯಾ 7 ವಿಕೆಟ್‌ಗಳಿಂದ ಸೊತ್ತಿದೆ. ಈಗ ಮೂರನೇ ಏಕದಿನ ಪಂದ್ಯ ನವೆಂಬರ್ 30 ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದರೆ ಸರಣಿ 1-1ಕ್ಕೆ ಸಮ. ಆದರೆ, ಭಾರತ ತಂಡ ಈ ಪಂದ್ಯದಲ್ಲಿ ಸೋತರೆ ನಾಯಕ ಶಿಖರ್ ಧವನ್ ಹೆಸರಿನಲ್ಲಿ ಕೆಟ್ಟ ದಾಖಲೆ ದಾಖಲಾಗಲಿದೆ. ಹೌದು.. ಆ ದಾಖಲೆ ಯಾವುದು ಇಲ್ಲಿದೆ ನೋಡಿ...

ಮೂರನೇ ಏಕದಿನ ಪಂದ್ಯದಲ್ಲಿ ಧವನ್ ವಿಶ್ವಾಸಾರ್ಹತೆ!

ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಶಿಖರ್ ಧವನ್ ನಾಯಕತ್ವದಲ್ಲಿ ಟೀಂ ಇಂಡಿಯಾ ಕಳೆದ ಮೂರು ಏಕದಿನ ಸರಣಿಗಳಲ್ಲಿ ಸತತ ಗೆಲುವು ದಾಖಲಿಸಿದೆ. ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋತರೆ 2-0 ಅಂತರದಲ್ಲಿ ಸರಣಿ ಸೋತರೆ, ಧವನ್ ನಾಯಕತ್ವದಲ್ಲಿ ಚೊಚ್ಚಲ ಬಾರಿಗೆ ಭಾರತ ತಂಡ ಸರಣಿ ಸೋಲನುಭವಿಸಿದಂತಾಗುತ್ತದೆ, ತಮ್ಮ ಗೆಲುವಿನ ದಾಖಲೆಯನ್ನು ಉಳಿಸಲು, ಧವನ್ ಮೂರನೇ ODI ಅನ್ನು ಯಾವುದೇ ಕಾರಣಕ್ಕೆ ಗೆಲ್ಲಲೇಬೇಕಾದ ನಿವಾರ್ಯತೆ ಇದೆ.

ಇದನ್ನೂ ಓದಿ : Virat Kohli : ಕೊಹ್ಲಿ ನಿವೃತ್ತಿ ಪ್ಲಾನ್? ಈ ಪೋಸ್ಟ್ ನೋಡಿ ಭಯಭೀತರಾದ ಫ್ಯಾನ್ಸ್

ಧವನ್ ನಾಯಕತ್ವದಲ್ಲಿ ಭಾರತದ ODI ಪ್ರದರ್ಶನ

ಶ್ರೀಲಂಕಾ vs ಭಾರತ: ಟೀಮ್ ಇಂಡಿಯಾ 2-1, 2021 ರಲ್ಲಿ ಗೆದ್ದಿದೆ

ವೆಸ್ಟ್ ಇಂಡೀಸ್ vs ಭಾರತ: ಟೀಮ್ ಇಂಡಿಯಾ 3-0, 2022 ರಲ್ಲಿ ಗೆದ್ದಿದೆ

ಭಾರತ vs ದಕ್ಷಿಣ ಆಫ್ರಿಕಾ: ಟೀಮ್ ಇಂಡಿಯಾ 2-1, 2022 ರಲ್ಲಿ ಗೆದ್ದಿತು

ಮಳೆ ಕಾರಣದಿಂದ ಎರಡನೇ ODI ರದ್ದು 

ಎರಡನೇ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ನ್ಯೂಜಿಲೆಂಡ್ ಪ್ರವಾಸದಲ್ಲಿ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ, ಯುವ ಆಟಗಾರರು ಉತ್ತಮ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಪಡೆಯಲು ಹಾತೊರೆಯುತ್ತಿದ್ದಾರೆ. ಭಾರತವು 2023 ರ ODI ವಿಶ್ವಕಪ್ ಅನ್ನು ಆಯೋಜಿಸುತ್ತಿದೆ. ಯುವ ಆಟಗಾರರ ಹೆಗಲ ಮೇಲೆ ದೊಡ್ಡ ಹೊರೆ ಇದೆ. ಕಿವೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶುಭಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಅದ್ಭುತ ಇನ್ನಿಂಗ್ಸ್ ಆಡಿದರು. ಹಾಗೆ, ಉಮ್ರಾನ್ ಮಲಿಕ್ ಬೌಲಿಂಗ್ ಮೂಲಕ ಎಲ್ಲರ ಮನ ಗೆದ್ದಿದ್ದಾರೆ.

ಇದನ್ನೂ ಓದಿ : IND vs NZ : ಭಾರತ vs ನ್ಯೂಜಿಲ್ಯಾಂಡ್ ಎರಡನೇ ಪಂದ್ಯ ರದ್ದು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News