ಕಿವೀಸ್ ಕಿವಿ ಹಿಂಡಿದ ಭಾರತ: ಸರಣಿ ಕ್ಲೀನ್‌ಸ್ವೀಪ್ ಬಳಿಕ ರಾಹುಲ್ ದ್ರಾವಿಡ್ ಹೇಳಿದ್ದೇನು?

ಸರಣಿ ಕ್ಲೀನ್ ಸ್ವೀಪ್ ಖುಷಿಯ ಮಧ್ಯೆ ಬ್ಲೂ ಬಾಯ್ಸ್ ಗೆ ರಾಹುಲ್ ಕಿವಿಮಾತು ಹೇಳಿದ್ದು, ನ್ಯೂಜಿಲೆಂಡ್(New Zealand) ಆಟಗಾರರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Written by - Puttaraj K Alur | Last Updated : Nov 22, 2021, 11:52 AM IST
  • ನ್ಯೂಜಿಲೆಂಡ್ ವಿರುದ್ಧ ಟಿ-20 ಸರಣಿ ಕ್ಲೀನ್‌ಸ್ವೀಪ್ ಮಾಡಿದ ಟೀಂ ಇಂಡಿಯಾ
  • ಕೋಚ್ ಆಗಿ ಫುಲ್ ಮಾರ್ಕ್ಸ್ ಪಡೆದುಕೊಂಡ ‘ಗೋಡೆ’ ಖ್ಯಾತಿಯ ರಾಹುಲ್ ದ್ರಾವಿಡ್
  • ಸಂಭ್ರಮಿಸುವುದು ಬೇಡ, ನಮ್ಮ ಕಾಲು ನೆಲದ ಮೇಲಿರಲಿ ಎಂದು ಆಟಗಾರರಿಗೆ ಸಲಹೆ
ಕಿವೀಸ್ ಕಿವಿ ಹಿಂಡಿದ ಭಾರತ: ಸರಣಿ ಕ್ಲೀನ್‌ಸ್ವೀಪ್ ಬಳಿಕ ರಾಹುಲ್ ದ್ರಾವಿಡ್ ಹೇಳಿದ್ದೇನು?   title=
ನ್ಯೂಜಿಲೆಂಡ್ ಆಟಗಾರರ ಬಗ್ಗೆ ದ್ರಾವಿಡ್ ಮೆಚ್ಚುಗೆ

ನವದೆಹಲಿ: ‘ಗೋಡೆ’ ಖ್ಯಾತಿಯ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಸರಣಿ ಕ್ಲೀನ್‌ಸ್ವೀಪ್ ಸಾಧನೆ ಮಾಡಿದೆ. ಐಸಿಸಿ ಟಿ-20 ವಿಶ್ವಕಪ್ (T20 World Cup 2021)ನಲ್ಲಿ ಲೀಗ್ ಹಂತದಲ್ಲಿಯೇ ಹೊರಬಿದ್ದು ಭಾರೀ ಮುಖಭಂಗ ಅನುಭವಿಸಿದ್ದ ಭಾರತ ತಂಡ ಕಿವೀಸ್ ಕಿವಿ ಹಿಂಡುವಲ್ಲಿ ಯಶಸ್ವಿಯಾಗಿದೆ. ಹಿಟ್ ಮ್ಯಾನ್ ರೋಹಿತ್ ಶರ್ಮಾ (Rohit Sharma)ನಾಯಕತ್ವದಲ್ಲಿ ನಡೆದ ಮೊದಲ ಟಿ-20 ಸರಣಿಯಲ್ಲಿ ಟೀಂ ಇಂಡಿಯಾ ಭರ್ಜರಿ ಯಶಸ್ಸು ಗಳಿಸಿದೆ. ನೂತನ ಕೋಚ್ ರಾಹುಲ್ ದ್ರಾವಿಡ್ (Rahul Dravid) ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಮಹತ್ತರ ಸಾಧನೆ ಮಾಡಿದೆ.

ಕೋಚ್ ಆದ ಮೊದಲ ಸವಾಲಿನಲ್ಲಿಯೇ ರಾಹುಲ್ ದ್ರಾವಿಡ್ ಫುಲ್ ಮಾರ್ಕ್ಸ್ ಪಡೆದುಕೊಂಡಿದ್ದಾರೆ. ಅನೇಕ ಮಾಜಿ ಆಟಗಾರರು ‘ಗೋಡೆ’ಯ ಮಾರ್ಗದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸರಣಿ ಕ್ಲೀನ್ ಸ್ವೀಪ್ ಖುಷಿಯ ಮಧ್ಯೆ ಬ್ಲೂ ಬಾಯ್ಸ್ ಗೆ ರಾಹುಲ್ ಕಿವಿಮಾತು ಹೇಳಿದ್ದು, ನ್ಯೂಜಿಲೆಂಡ್(New Zealand) ಆಟಗಾರರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Team India: ಒಂದು ಪಂದ್ಯದಲ್ಲಿ ‘ಮ್ಯಾನ್ ಆಫ್ ದಿ ಮ್ಯಾಚ್’ ಆಗಿದ್ದ ಈ ಆಟಗಾರನ ಕೆರಿಯರ್ ಜಡೇಜಾರಿಂದಾಗಿ ಹಾಳಾಗಿದೆಯಂತೆ!

ಹೌದು, ಟಿ-20 ವಿಶ್ವಕಪ್ ಮುಗಿದ ಬೆನ್ನಲ್ಲೇ ಶುರುವಾದ ಭಾರತ-ನ್ಯೂಜಿಲೆಂಡ್ (India vs New Zealand) ನಡುವಣ ಟಿ-20 ಸರಣಿ ಉಭಯ ತಂಡಗಳಿಗೆ ದೊಡ್ಡ ಸವಾಲು ಆಗಿತ್ತು. ಲೀಗ್ ಹಂತದ 2ನೇ ಪಂದ್ಯದಲ್ಲಿ ಭಾರತದ ವಿರುದ್ಧ 8 ವಿಕೆಟ್ ‍ಗಳ ಜಯ ಸಾಧಿಸಿದ್ದ ಕೇನ್ ವಿಲಿಯಮ್ಸನ್ ಪಡೆ ಫೈನಲ್ ನಲ್ಲಿ ಆಂಗ್ಲರ ಆಸ್ಟ್ರೇಲಿಯಾ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು. ಟಿ-20 ಸರಣಿ ಆಡಲು ಉಭಯ ತಂಡಗಳಲ್ಲಿ ಗಮನಾರ್ಹ ಬದಲಾವಣೆ ಮಾಡಲಾಗಿತ್ತು. ಆದರೆ ಅಂತಿಮವಾಗಿ ಟೀಂ ಇಂಡಿಯಾ ಆಟಗಾರರು ಕಿವೀಸ್ ವಿರುದ್ಧಅತ್ಯುತ್ತಮ ಪ್ರದರ್ಶನ ತೋರುವ ಮೂಲಕ 3-0 ಅಂತರದಿಂದ ಸರಣಿ ಕ್ಲೀನ್ ಸ್ವೀಪ್ ಮಾಡಿದೆ.

ಸರಣಿ ಗೆದ್ದ ಖುಷಿಯಲ್ಲಿ ಮಾತನಾಡಿರುವ ದ್ರಾವಿಡ್(India Head Coach Rahul Dravid), ಟಿ-20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲಿಯೇ ಟಿ-20 ಸರಣಿ ಆಡುವುದು ನ್ಯೂಜಿಲೆಂಡ್ ತಂಡಕ್ಕೆ ಕಷ್ಟವಾಗಿತ್ತು ಎಂದು ಹೇಳಿದ್ದಾರೆ. ಸರಣಿ ಕ್ಲೀನ್ ‍ಸ್ವೀಪ್ ಸಾಧನೆಗೆ ನಾವು ದೊಡ್ಡ ಸಂಭ್ರಮ ಮಾಡುವ ಅಗತ್ಯವಿಲ್ಲ. ನಮ್ಮ ಕಾಲು ನೆಲದ ಮೇಲಿಯೇ ಇರಲಿ ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ. ‘ಸರಣಿ ಗೆಲುವು ಸಾಧಿಸಿರುವುದು ಉತ್ತಮ ಸಂಗತಿ. ತಂಡದ ಪ್ರತಿಯೊಬ್ಬ ಆಟಗಾರನೂ ಅತ್ಯುತ್ತಮ ಪ್ರದರ್ಶನ ನೀಡಿದ್ದಾನೆ. ನಾವು ವಾಸ್ತವದ ಬಗ್ಗೆ ಅರಿತುಕೊಳ್ಳಬೇಕಾಗಿದೆ. ಹೆಚ್ಚು ಸಂಭ್ರಮಿಸುವ ಬದಲು ನಮ್ಮ ಕಾಲು ನೆಲದ ಮೇಲಿರಬೇಕು. ಏಕೆಂದರೆ ಟಿ-20 ವಿಶ್ವಕಪ್ ಮುಗಿಸಿದ ಕೇವಲ 3 ದಿನಗಳಲ್ಲಿ ಇಲ್ಲಿಗೆ ಬಂದು ಮತ್ತೊಂದು ಸರಣಿ ಆಡುವುದು ಎದುರಾಳಿ ತಂಡಕ್ಕೆ ಸುಲಭದ ಮಾತಲ್ಲ. ನ್ಯೂಜಿಲೆಂಡ್(New Zealand) ಆಟಗಾರರ ಶ್ರಮವನ್ನು ನಿಜಕ್ಕೂ ಪ್ರಶಂಶಿಸಬೇಕು. ಈ ಸರಣಿಯಿಂದ ನಾವು ಹಲವಾರು ವಿಚಾರಗಳನ್ನು ಕಲಿತಿದ್ದೇವೆ’ ಅಂತಾ ದ್ರಾವಿಡ್ ಹೇಳಿದ್ದಾರೆ.

ಇದನ್ನೂ ಓದಿ: T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ವಿಶ್ವದಾಖಲೆ ನಿರ್ಮಿಸಿದ ರೋಹಿತ್ ಶರ್ಮಾ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.   

Trending News