ಬರ್ಮಿಂಗ್ಹ್ಯಾಮ್: ಭಾರತ ಮೊದಲ ಟೆಸ್ಟ್ ನಲ್ಲಿ ಇಂಗ್ಲೆಂಡ್ ವಿರುದ್ಧ 31 ರನ್ ಗಳ ಸೋಲನ್ನು ಅನುಭವಿಸಿದೆ. ಕೊಹ್ಲಿ ಅರ್ಧಶತಕವನ್ನು ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರೆಲ್ಲರೂ ಬೇಗನೆ ವಿಕೆಟ್ ಒಪ್ಪಿಸಿದರು.ಆ ಮೂಲಕ ಭಾರತಕ್ಕೆ ಮೊದಲ ಟೆಸ್ಟ್ ಪಂದ್ಯ ಗೆಲ್ಲುವ ಅವಕಾಶವನ್ನು ತಪ್ಪಿಸಿಕೊಂಡಿತು.
ಮೊದಲ ಟೆಸ್ಟ್ ಎರಡು ಇನ್ನಿಂಗ್ಸ್ ನಲ್ಲಿ ಅಮೋಘ ಪ್ರದರ್ಶನ ನೀಡಿದ ಕೊಹ್ಲಿಗೆ ಉಳಿದ ಯಾವ ಆಟಗಾರನು ಸಹಿತ ಸಾತ್ ನೀಡಲಿಲ್ಲ ಆ ಮೂಲಕ ಎರಡು ಇನಿಂಗ್ಸ್ ನಲ್ಲಿನ ಏಕಾಂಗಿ ಹೋರಾಟ ವ್ಯರ್ಥವೆನಿಸಿತು.ಒಟ್ಟು ಐದು ಟೆಸ್ಟ್ ಪಂದ್ಯಗಳಲ್ಲಿ ಈಗ ಮೊದಲ ಟೆಸ್ಟ್ ಗೆಲ್ಲುವುದರ ಮೂಲಕ 1-0 ಅಂತರದ ಮುನ್ನಡೆ ಸಾಧಿಸಿದೆ.
ಇಂಗ್ಲೆಂಡ ನೀಡಿದ 194 ರನ್ ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡವು ದ್ವೀತಿಯ ಇನ್ನಿಂಗ್ಸ್ ನಲ್ಲಿ 162 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಪದ ಕೊಹ್ಲಿ(51) ಮತ್ತು ಹಾರ್ದಿಕ್ ಪಾಂಡ್ಯ(31) ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಯಾರು ಅಷ್ಟು ಪರಿಣಾಮಕಾರಿಯಾಗಿ ಆಡಲಿಲ್ಲ.ಇಂಗ್ಲೆಂಡ್ ಬೆನ್ ಸ್ಟೋಕ್ಸ್ (4), ಜೇಮ್ಸ್ ಆಂಡೆರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ತಲಾ ಎರಡು ಮತ್ತು ಆದಿಲ್ ರಶೀದ್ ಒಂದು ವಿಕೆಟ್ ಕಬಳಿಸುವ ಮೂಲಕ ಭಾರತದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.