ನವದೆಹಲಿ: ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಮೊದಲ ಅರ್ಹತಾ ಸುತ್ತಿನ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಾಲ್ಕು ವಿಕೆಟ್ ಗಳ ಮೂಲಕ ಭರ್ಜರಿ ಜಯವನ್ನು ಸಾಧಿಸುವ ಮೂಲಕ ಐಪಿಎಲ್ 2021 ರ ಟೂರ್ನಿಯಲ್ಲಿ ಫೈನಲ್ ಗೆ ಲಗ್ಗೆ ಇಟ್ಟಿದೆ.
ಇದನ್ನೂ ಓದಿ: IPL 2021, CSK vs DC: ಇಂದು ಮೊದಲ ಕ್ವಾಲಿಫೈಯರ್, ಫೈನಲ್ ಗಾಗಿ ‘ಗುರು-ಶಿಷ್ಯ’ರ ಕಾಳಗ..!
What a game of cricket that was! #CSK, they are now in Friday's Final of #VIVOIPL pic.twitter.com/eiDV9Bwjm8
— IndianPremierLeague (@IPL) October 10, 2021
ಮೊದಲು ಟಾಸ್ ಗೆದ್ದ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವು ಫೀಲ್ಡಿಂಗ್ ನ್ನು ಆಯ್ದುಕೊಂಡಿತು. ಇನ್ನೊಂದೆಡೆಗೆ ಮೊದಲು ಬ್ಯಾಟಿಂಗ್ ಆರಂಭಿಸಿದ ದೆಹಲಿ ತಂಡವು ಪೃಥ್ವಿ ಷಾ 60, ರಿಶಬ್ ಪಂತ್,51 ಹಾಗೂ ಹ್ಯಾತ್ಮಾರ್ 37 ರನ್ ಗಳ ನೆರವಿನಿಂದಾಗಿ 20 ಓವರ್ ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 172 ರನ್ ಗಳ ಗುರಿಯನ್ನು ನೀಡಿತು.
ಇದನ್ನೂ ಓದಿ: IPL 2021: ಲೀಗ್ ಹಂತದಲ್ಲಿ ಇದುವರೆಗೆ ಅಧಿಕ ರನ್ ಗಳಿಸಿರುವ ಐದು ಆಟಗಾರರಿವರು
ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಋತುರಾಜ್ ಗಾಯಕ್ವಾಡ್ ಅವರ 70 ಹಾಗೂ ರಾಬಿನ್ ಉತ್ತಪ್ಪ ಅವರ 63 ರನ್ ಗಳಿಂದಾಗಿ 19.4 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 173 ರನ್ ಗಳಿಸುವ ಮೂಲಕ ಫೈನಲ್ ಗೆ ಲಗ್ಗೆ ಇಟ್ಟಿತು.
.@Ruutu1331 is adjudged Man of the Match for his brilliant knock of 70 as #CSK win by 4 wickets in #Qualifier1.#VIVOIPL pic.twitter.com/vrqD35NAFn
— IndianPremierLeague (@IPL) October 10, 2021
ಇನ್ನೊಂದೆಡೆಗೆ ಲೀಗ್ ಹಂತದಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ತಾನದಲ್ಲಿದ್ದ ದೆಹಲಿ ತಂಡವು ಈಗ ಚೆನ್ನೈ ತಂಡದ ವಿರುದ್ಧ ಸೋಲನ್ನು ಅನುಭವಿಸುವ ಮೂಲಕ ಪ್ರಶಸ್ತಿ ಗೆಲ್ಲುವ ಅದರ ಕನಸ್ಸು ಭಗ್ನಗೊಂಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy