ನವದೆಹಲಿ: ಚೀನಾದ ಗುವಾಂಗ್ಝೌನಲ್ಲಿ ನಡೆದ ಬಿಡಬ್ಲುಎಫ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ನಲ್ಲಿ ಥೈಲ್ಯಾಂಡ್ ನ ರಾಚ್ಸಾಕ್ ಇಥಾನ್ ಅವರನ್ನು 21-16, 25-23 ಅಂತರದಲ್ಲಿ ಸೆಮಿಫೈನಲ್ ಪಂದ್ಯದಲ್ಲಿ ಸೆದೆಬಡೆಯುವ ಮೂಲಕ ಎರಡನೇ ಬಾರಿಗೆ ಫೈನಲ್ ತಲುಪಿದ್ದಾರೆ.
ಚೀನಾದ ಗುವಾಂಗ್ಝೌನಲ್ಲಿ ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಫೈನಲ್ಸ್ನಲ್ಲಿ ಎರಡನೇ ಬಾರಿಗೆ ಪಿವಿ ಸಿಂಧು ಪ್ರಶಸ್ತಿಯನ್ನು ಗೆದ್ದಿದ್ದಾರೆ. 21-16, 25-23ರಲ್ಲಿ ಥಾಯ್ಲೆಂಡ್ನ ರಾಚ್ಸಾಕ್ ಇಥಾನ್ ಅವರನ್ನು ಸೆಮಿಫೈನಲ್ನಲ್ಲಿ ಗೆದ್ದು ಭಾರತದ ಟೈಟಲ್ ಸುತ್ತನ್ನು ತಲುಪಿದರು. ಇನ್ನೊಂದೆಡೆ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸಮೀರ್ ವರ್ಮಾ ಅವರು ಶಿ ಯುಕಿ ವಿರುದ್ದ ಸೋಲನ್ನು ಅನುಭವಿಸಿದರು.
ಥೈಲ್ಯಾಂಡ್ ಆಟಗಾರ್ತಿಯನ್ನು ಕೇವಲ 54 ನಿಮಿಷದಲ್ಲಿ ಸೋಲಿಸುವುದರ ಮೂಲಕ ಫೈನಲ್ ಪ್ರವೇಶಿಸಿದರು.ಈ ಟೂರ್ನಿಯುದ್ದಕ್ಕೂ ಸೋಲದೆ ಮುನ್ನುಗ್ಗಿರುವ ಸಿಂಧು ಈಗ ಜಪಾನಿನ ನೊಜೊಮಿ ಒಕುಹಾರಾ ರನ್ನು ಭಾನುವಾರದ ಫೈನಲ್ ಪಂದ್ಯದಲ್ಲಿ ಎದುರಿಸಲಿದ್ದಾರೆ.