WTC ಪಾಯಿಂಟ್ ಟೇಬಲ್‌ನಲ್ಲಿ ಭಾರೀ ಬದಲಾವಣೆ! ಟೆಸ್ಟ್‌ ಚಾಂಪಿಯನ್ಶಿಪ್‌ ಫೈನಲ್ ತಲುಪಬೇಕಾದ್ರೆ ಟೀಂ ಇಂಡಿಯಾ ಏನು ಮಾಡಬೇಕು? ಎಷ್ಟು ಪಂದ್ಯ ಗೆಲ್ಲಬೇಕು?

WTC Point Table:

Written by - Bhavishya Shetty | Last Updated : Dec 30, 2024, 02:02 PM IST
    • ಮೆಲ್ಬೋರ್ನ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ 184 ರನ್‌ಗಳ ಸೋಲು
    • ಸರಣಿಯ ಕೊನೆಯ ಪಂದ್ಯ ಜನವರಿ 3 ರಿಂದ ಸಿಡ್ನಿಯಲ್ಲಿ ನಡೆಯಲಿದೆ
    • ಡಬ್ಲ್ಯುಟಿಸಿ ಫೈನಲ್‌ ತಲುಪುವ ಭಾರತದ ಭರವಸೆಗೆ ದೊಡ್ಡ ಹೊಡೆತ
WTC ಪಾಯಿಂಟ್ ಟೇಬಲ್‌ನಲ್ಲಿ ಭಾರೀ ಬದಲಾವಣೆ! ಟೆಸ್ಟ್‌ ಚಾಂಪಿಯನ್ಶಿಪ್‌ ಫೈನಲ್ ತಲುಪಬೇಕಾದ್ರೆ ಟೀಂ ಇಂಡಿಯಾ ಏನು ಮಾಡಬೇಕು? ಎಷ್ಟು ಪಂದ್ಯ ಗೆಲ್ಲಬೇಕು? title=
WTC Point Table

World Test Championship Points Table: ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಸೋಮವಾರ ಮೆಲ್ಬೋರ್ನ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ 184 ರನ್‌ಗಳ ಸೋಲನ್ನು ಎದುರಿಸಬೇಕಾಯಿತು. ಇದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (ಡಬ್ಲ್ಯುಟಿಸಿ) ಫೈನಲ್‌ಗೆ ತಲುಪುವ ಭಾರತದ ಭರವಸೆಗೆ ದೊಡ್ಡ ಹೊಡೆತವನ್ನು ನೀಡಿದೆ. ಈ ಗೆಲುವಿನಿಂದ ಆಸ್ಟ್ರೇಲಿಯಾ ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಸರಣಿಯ ಕೊನೆಯ ಪಂದ್ಯ ಜನವರಿ 3 ರಿಂದ ಸಿಡ್ನಿಯಲ್ಲಿ ನಡೆಯಲಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ 2-2 ಅಂತರದಲ್ಲಿ ಸರಣಿಯನ್ನು ಅಂತ್ಯಗೊಳಿಸುವ ತವಕದಲ್ಲಿದೆ

ಇದನ್ನೂ ಓದಿ: "ಮಳೆಯಂತೇ ಬಾ... ಬೆಳಕಂತೇ ಬಾ..." ಎಂದು ರಚ್ಚುಗಾಗಿ ಹಾಡಿದ ಶ್ರೀನಗರ ಕಿಟ್ಟಿ! 

ಮೆಲ್ಬೋರ್ನ್‌ ಟೆಸ್ಟ್‌ ಸೋಲಿನ ಬಳಿಕ, ಭಾರತವು ಶೇಕಡಾ 55.89 ಅಂಕಗಳೊಂದಿಗೆ World Test Championship Points Tableನಲ್ಲಿ ಮೂರನೇ ಸ್ಥಾನದಲ್ಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಮೊದಲ ಸ್ಥಾನದಲ್ಲಿದೆ. 2 ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಫೈನಲ್‌ಗೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. 58.89 PCT ಯೊಂದಿಗೆ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ನಾಲ್ಕನೇ ಸ್ಥಾನದಲ್ಲಿದ್ದು, ಶ್ರೀಲಂಕಾ ಐದನೇ ಸ್ಥಾನದಲ್ಲಿದೆ.

WTC ಫೈನಲ್‌ಗೆ ಅರ್ಹತೆ ಪಡೆಯಲು, ಭಾರತವು ಆಸ್ಟ್ರೇಲಿಯಾ ವಿರುದ್ಧದ ತನ್ನ ಅಂತಿಮ ಪಂದ್ಯವನ್ನು ಗೆಲ್ಲಬೇಕಾಗಿದೆ. ಇದಷ್ಟೇ ಅಲ್ಲ, ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಆಸ್ಟ್ರೇಲಿಯಾ ಸೋಲಬೇಕು. ಆಸ್ಟ್ರೇಲಿಯಾಗೆ ಅತಿಥ್ಯ ವಹಿಸುವ ಶ್ರೀಲಂಕಾ 1–0 ಅಥವಾ 2–0 ಅಂತರದ ಜಯ ಸಾಧಿಸಿದರೆ ಮಾತ್ರ ಭಾರತಕ್ಕೆ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ ಪ್ರವೇಶಿಸುವ ಅದೃಷ್ಟ ಒಲಿಯಲಿದೆ.

ಈ ಲೆಕ್ಕಾಚಾರದ ಹೊರತಾಗಿ ಆಸ್ಟ್ರೇಲಿಯಾ ಮುಂದಿನ ಪಂದ್ಯದಲ್ಲಿ ಭಾರತದ ವಿರುದ್ಧ ಸೋತು, ಶ್ರೀಲಂಕಾ ಎದುರು 2–0 ಅಂತರದಿಂದ ಗೆದ್ದರೆ, ಫೈನಲ್‌ಗೆ ತಲುಪಲಿದೆ.

ಇದನ್ನೂ ಓದಿ: ಟೀಸರ್‌ನಲ್ಲೆ ಪ್ರೇಕ್ಷಕರ ಹುಚ್ಚೆಬ್ಬಿಸಿದ ‘ಕರಾವಳಿ’: ಮೈ ಜುಮ್ಮೆನಿಸುವಂತಿದೆ ‘ಪ್ರತಿಷ್ಠೆಯ ಪಿಚಾಚಿ’!  

ಡಬ್ಲ್ಯುಟಿಸಿ ಫೈನಲ್‌ ಪಂದ್ಯವು ಇಂಗ್ಲೆಂಡ್‌ನ ಐತಿಹಾಸಿಕ ಲಾರ್ಡ್ಸ್‌ ಮೈದಾನದಲ್ಲಿ 2025ರ ಜೂನ್‌ 11ರಂದು ಆರಂಭವಾಗಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News