ಚಾಂಪಿಯನ್ಸ್‌ ಟ್ರೋಫಿ ಕುರಿತು ಪಾಕ್‌ ನೀಡಿದ ಆ ಷರತ್ತನ್ನು ಖಡಾಖಂಡಿತವಾಗಿ ತಿರಸ್ಕರಿಸಿದ ಬಿಸಿಸಿಐ: ಪಾಕಿಸ್ತಾನಕ್ಕೆ ತೀವ್ರ ಮುಖಭಂಗ

Champions Trophy 2025: ವರದಿಯ ಪ್ರಕಾರ, "ಭಾರತದಲ್ಲಿ ಯಾವುದೇ ಭದ್ರತಾ ಬೆದರಿಕೆ ಇಲ್ಲ, ಆದ್ದರಿಂದ ಈ ಮಾದರಿಯನ್ನು ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ" ಎಂದು ಬಿಸಿಸಿಐ ಹೇಳಿದೆ.

Written by - Bhavishya Shetty | Last Updated : Dec 4, 2024, 07:32 PM IST
    • ಪಾಕಿಸ್ತಾನ ತಂಡವು ಭಾರತಕ್ಕೆ ಭೇಟಿ ನೀಡುವುದಿಲ್ಲ ಎಂಬುದು ಇದರಲ್ಲಿರುವ ಷರತ್ತಾಗಿತ್ತು
    • ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ-ಮಾರ್ಚ್‌ನಲ್ಲಿ ಆರಂಭವಾಗಲಿದೆ.
    • ಪ್ರಸ್ತುತ ವೇಳಾಪಟ್ಟಿಯ ಬಗ್ಗೆ ಐಸಿಸಿ ಯಾವುದೇ ನಿಲುವು ತೆಗೆದುಕೊಂಡಿಲ್ಲ.
ಚಾಂಪಿಯನ್ಸ್‌ ಟ್ರೋಫಿ ಕುರಿತು ಪಾಕ್‌ ನೀಡಿದ ಆ ಷರತ್ತನ್ನು ಖಡಾಖಂಡಿತವಾಗಿ ತಿರಸ್ಕರಿಸಿದ ಬಿಸಿಸಿಐ: ಪಾಕಿಸ್ತಾನಕ್ಕೆ ತೀವ್ರ ಮುಖಭಂಗ title=
Champions Trophy 2025

Champions Trophy Update: ಚಾಂಪಿಯನ್ಸ್ ಟ್ರೋಫಿ 2025ಗಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವಂತೆ ತೋರುತ್ತಿದೆ. ನವೆಂಬರ್ 29 ರಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪಂದ್ಯಾವಳಿಯ ವೇಳಾಪಟ್ಟಿಯ ಬಗ್ಗೆ ಸಭೆ ನಡೆಸಿತು. ನಂತರ ಪಾಕಿಸ್ತಾನ ಪಾಲುದಾರಿಕೆ ಮಾದರಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಲು ಸಿದ್ಧವಾಗಿದೆ ಎಂಬ ಅಪ್ಡೇಟ್‌ ಲಭ್ಯವಾಗಿತ್ತು.

ಇದನ್ನೂ ಓದಿ:ಟೀಂ ಇಂಡಿಯಾಗೆ ಬಲವಾಗಿ ನಿಂತ ವೈಭವ್ ಸೂರ್ಯವಂಶಿ.. ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ UAE ವಿರುದ್ಧ ಗೆಲುವು ತಂದು ಕೊಟ್ಟ ಯುವ ಆಟಗಾರ!  

ಇದರಲ್ಲಿ, ಯಾವುದೇ ಐಸಿಸಿ ಟೂರ್ನಮೆಂಟ್‌ಗಾಗಿ ಪಾಕಿಸ್ತಾನ ತಂಡವು ಭಾರತಕ್ಕೆ ಭೇಟಿ ನೀಡುವುದಿಲ್ಲ ಎಂಬುದು ಇದರಲ್ಲಿರುವ ಷರತ್ತಾಗಿತ್ತು. ಆದರೆ ಈ ಷರತ್ತನ್ನು ಬಿಸಿಸಿಐ ತಿರಸ್ಕರಿಸಿದೆ. ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ-ಮಾರ್ಚ್‌ನಲ್ಲಿ ಆರಂಭವಾಗಲಿದೆ. ಆದರೆ ಪ್ರಸ್ತುತ ವೇಳಾಪಟ್ಟಿಯ ಬಗ್ಗೆ ಐಸಿಸಿ ಯಾವುದೇ ನಿಲುವು ತೆಗೆದುಕೊಂಡಿಲ್ಲ.

ಇನ್ನೊಂದೆಡೆ 2026 ರ ಟಿ20 ವಿಶ್ವಕಪ್ ವೇಳೆ ಪಾಕಿಸ್ತಾನವು ಭಾರತದಲ್ಲಿ ಯಾವುದೇ ಪಂದ್ಯವನ್ನು ಆಡುವುದಿಲ್ಲ. ಆ ಸಂದರ್ಭದಲ್ಲೂ ಹೈಬ್ರಿಡ್‌ ಮಾದರಿಯನ್ನು ಅನುಸರಿಸಬೇಕು" ಎಂದು ಷರತ್ತು ಹಾಕಿತ್ತು. ಆದರೆ ಸುದ್ದಿ ಸಂಸ್ಥೆ, ದಿ ಟೆಲಿಗ್ರಾಫ್‌ ವರದಿಯ ಪ್ರಕಾರ, ಬಿಸಿಸಿಐ ಈಗ ಅಂತಹ ವ್ಯವಸ್ಥೆಯನ್ನು ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. "ಭಾರತದಲ್ಲಿ ಯಾವುದೇ ಭದ್ರತಾ ಭೀತಿ ಇಲ್ಲ. ಹೀಗಾಗಿ ಹೈಬ್ರಿಡ್‌ ಮಾದರಿಯಲ್ಲಿ ಟಿ20 ವಿಶ್ವಕಪ್‌ ನಡೆಸುವುದಿಲ್ಲ" ಎಂಬುದನ್ನು ವಾದಿಸಿದೆ ಬಿಸಿಸಿಐ.

ಬಿಸಿಸಿಐ ನಿರಾಕರಿಸಿದ ಬಳಿಕ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಗಾಬರಿಗೊಂಡಂತೆ ಕಂಡುಬಂದಿದೆ. ಮಾಧ್ಯಮ ವರದಿಗಳ ಪ್ರಕಾರ, ಐಸಿಸಿ ಹೈಬ್ರಿಡ್ ಮಾದರಿಯನ್ನು ಒಪ್ಪಿಕೊಳ್ಳುವಂತೆ ಪಿಸಿಬಿಗೆ ಮನವರಿಕೆ ಮಾಡಿದೆ, ಆದರೆ ಪಾಕಿಸ್ತಾನವು ಅಚಲವಾಗಿದೆ. ಈಗ ಪಾಲುದಾರಿಕೆ ಮಾದರಿಯ ಚರ್ಚೆ ಬಂದಾಗ, ದಿ ಟೆಲಿಗ್ರಾಫ್ ವರದಿಯ ಪ್ರಕಾರ, ಬಿಸಿಸಿಐ ಅದನ್ನು ತಿರಸ್ಕರಿಸಿದೆ.

ಇದನ್ನೂ ಓದಿ: ಕರ್ನಾಟಕದ ʼನಂದಿನಿʼಗೆ ಉತ್ತರ ಭಾರತದಲ್ಲಿ ಸಂಕಷ್ಟ: ಹಾಲು ಗ್ರಾಹಕರ ಕೈ ಸೇರದಂತೆ ನಿರಂತರ ಅಡ್ಡಗಾಲು

ವರದಿಯ ಪ್ರಕಾರ, "ಭಾರತದಲ್ಲಿ ಯಾವುದೇ ಭದ್ರತಾ ಬೆದರಿಕೆ ಇಲ್ಲ, ಆದ್ದರಿಂದ ಈ ಮಾದರಿಯನ್ನು ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ" ಎಂದು ಬಿಸಿಸಿಐ ಹೇಳಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News