T20 World Cup: ಅಫ್ಘನ್ ವಿರುದ್ಧ ಅಬ್ಬರಿಸಿದ ಈ ಆಟಗಾರನಿಗೆ ಟಿ20 ವಿಶ್ವಕಪ್’ನಲ್ಲಿ ಸ್ಥಾನ ಫಿಕ್ಸ್!

Rinku Singh in T20 World Cup 2024: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಸರಣಿಯ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ ತಂಡ 4 ವಿಕೆಟ್‌ಗೆ 212 ರನ್ ಗಳಿಸಿತ್ತು. ಈ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ರಿಂಕು ಸಿಂಗ್ ಬ್ಯಾಟಿಂಗ್ ಮೂಲಕ ವಿಧ್ವಂಸಕತೆ ಸೃಷ್ಟಿಸಿದ್ದರು.

Written by - Bhavishya Shetty | Last Updated : Jan 18, 2024, 01:15 PM IST
    • ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಸರಣಿ
    • ಅಫ್ಘಾನಿಸ್ತಾನ ವಿರುದ್ಧದ T20 ಸರಣಿಯಲ್ಲಿ ಪ್ರಬಲ ಪ್ರದರ್ಶನ
    • ರಿಂಕು 39 ಎಸೆತಗಳಲ್ಲಿ 2 ಬೌಂಡರಿ ಹಾಗೂ 6 ಸಿಕ್ಸರ್ ಸಿಡಿಸಿದರು.
T20 World Cup: ಅಫ್ಘನ್ ವಿರುದ್ಧ ಅಬ್ಬರಿಸಿದ ಈ ಆಟಗಾರನಿಗೆ ಟಿ20 ವಿಶ್ವಕಪ್’ನಲ್ಲಿ ಸ್ಥಾನ ಫಿಕ್ಸ್!  title=
India vs Afghanistan

Rinku Singh in T20 World Cup 2024: ರಿಂಕು ಸಿಂಗ್… ಈ ಹೆಸರು ಮುಂದೊಂದು ದಿನ ಟೀಂ ಇಂಡಿಯಾದ ಭವಿಷ್ಯ ಬರೆಯೋದ್ರಲ್ಲಿ ಎರಡು ಮಾತಿಲ್ಲ. ಇವರು ಅಫ್ಘಾನಿಸ್ತಾನ ವಿರುದ್ಧದ T20 ಸರಣಿಯಲ್ಲಿ ಪ್ರಬಲ ಪ್ರದರ್ಶನ ನೀಡಿ, ಟಿ20 ವಿಶ್ವಕಪ್’ನಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳುವ ತವಕದಲ್ಲಿದ್ದಾರೆ.

ಇದನ್ನೂ ಓದಿ: ಮಿಡ್ ವೀಕ್ ಎಲಿಮಿನೇಷನ್: ರಾತ್ರೋರಾತ್ರಿ ಬಿಗ್ ಬಾಸ್’ನಿಂದ ಎಲಿಮಿನೇಟ್ ಆದ್ರು ಈ ಪ್ರಬಲ ಸ್ಪರ್ಧಿ

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಸರಣಿಯ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ ತಂಡ 4 ವಿಕೆಟ್‌ಗೆ 212 ರನ್ ಗಳಿಸಿತ್ತು. ಈ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ರಿಂಕು ಸಿಂಗ್ ಬ್ಯಾಟಿಂಗ್ ಮೂಲಕ ವಿಧ್ವಂಸಕತೆ ಸೃಷ್ಟಿಸಿದ್ದರು. ರೋಹಿತ್ 121 ರನ್ ಗಳಿಸಿದರೆ, ರಿಂಕು 69 ರನ್ ಗಳ ಬಿರುಗಾಳಿ ಪ್ರದರ್ಶನ ನೀಡಿದ್ರು. ಇನ್ನು ಇವರಿಬ್ಬರು 5ನೇ ವಿಕೆಟ್‌’ಗೆ 190 ರನ್‌ಗಳ ಅಜೇಯ ಜೊತೆಯಾಟ ನಡೆಸಿದ್ದು, ಇದು ಟಿ20ಯಲ್ಲಿ ಯಾವುದೇ ವಿಕೆಟ್‌’ಗೆ ಭಾರತದ ಅತ್ಯುತ್ತಮ ಜೊತೆಯಾಟವಾಗಿದೆ.

ರೋಹಿತ್ 69 ಎಸೆತಗಳಲ್ಲಿ 11 ಬೌಂಡರಿ ಹಾಗೂ 8 ಸಿಕ್ಸರ್ ಸಿಡಿಸಿದರೆ, ರಿಂಕು 39 ಎಸೆತಗಳಲ್ಲಿ 2 ಬೌಂಡರಿ ಹಾಗೂ 6 ಸಿಕ್ಸರ್ ಸಿಡಿಸಿದರು.

ಟಿ20 ವಿಶ್ವಕಪ್‌’ನಲ್ಲಿ ಸ್ಥಾನ ಖಚಿತ?

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟಿ20 ಮಾದರಿಗೆ ಮರಳುವುದರೊಂದಿಗೆ ರಿಂಕು ಸಿಂಗ್ ಸ್ಥಾನಕ್ಕೆ ಅಪಾಯ ಎದುರಾಗಿತ್ತು. ಆದರೆ, ಟಿ20 ವಿಶ್ವಕಪ್‌’ಗೂ ಮುನ್ನ ನಡೆದ ಭಾರತದ ಕೊನೆಯ ಟಿ20 ಪಂದ್ಯದಲ್ಲಿ ರಿಂಕು ಸಿಂಗ್ ತಮ್ಮ ಪವರ್‌ಹಿಟಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಭಾರತ 4 ವಿಕೆಟ್ ಕಳೆದುಕೊಂಡ ನಂತರ ಬ್ಯಾಟಿಂಗ್‌’ಗೆ ಬಂದ ರಿಂಕು ನಿಧಾನಗತಿಯ ಆರಂಭವನ್ನು ಮಾಡಿದ್ದರು. ಆದರೆ ಅಫ್ಘನ್ ಬೌಲರ್ ಕರೀಂ ಜನತ್ ಅವರ ಕೊನೆಯ ಓವರ್‌ನಲ್ಲಿ ರಿಂಕು ತಮ್ಮ 6 ಸಿಕ್ಸರ್‌’ಗಳಲ್ಲಿ 3 ಸಿಕ್ಸರ್‌ಗಳನ್ನು ಬಾರಿಸಿದ್ದರು. ಇದು ಹ್ಯಾಟ್ರಿಕ್ ಸಿಕ್ಸರ್ ಆಗಿದೆ.

ಇದನ್ನೂ ಓದಿ: ಧೋನಿಯ ಶ್ರೇಷ್ಠ ದಾಖಲೆ ಬ್ರೇಕ್: ಇನ್ಮುಂದೆ ಭಾರತದ ಅತ್ಯಂತ ಯಶಸ್ವಿ T20 ನಾಯಕ ರೋಹಿತ್ ಶರ್ಮಾ

ರಿಂಕು ಸಿಂಗ್ ಇಡೀ ಸರಣಿಯಲ್ಲಿ ಅಜೇಯರಾಗಿ ಉಳಿದಿದ್ದರು. ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಔಟಾಗದೆ 16 ಹಾಗೂ ಇಂದೋರ್‌’ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಔಟಾಗದೆ 9 ರನ್ ಗಳಿಸಿದ್ದರು. ಇಲ್ಲಿಯವರೆಗೆ 15 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 356 ರನ್ ಗಳಿಸಿದ್ದಾರೆ, ಅದರಲ್ಲಿ 2 ಅರ್ಧಶತಕಗಳೂ ಸೇರಿದೆ, ಗಳಿಸಿದ್ದಾರೆ. ಅವರ ಒಟ್ಟಾರೆ ಟಿ20 ವೃತ್ತಿಜೀವನದ ಬಗ್ಗೆ ಮಾತನಾಡುವುದಾದರೆ, 111 ಪಂದ್ಯಗಳಲ್ಲಿ 2380 ರನ್ ಗಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News