ದಿನಭವಿಷ್ಯ 28-02-2025: ಶುಕ್ರವಾರ ಸಿದ್ಧ ಯೋಗ: ಈ ರಾಶಿಯವರಿಗೆ ಆಸ್ತಿ ಖರೀದಿ ಸಾಧ್ಯತೆ

Today Horoscope 28th February 2025: ಉತ್ತರಾಯಣ, ಸೌರ ವಸಂತ ಋತು, ಮಾಘ ಮಾಸ, ಕೃಷ್ಣ ಪಕ್ಷ, ಪ್ರತಿಪದಾ ತಿಥಿಯ ಈ ದಿನ  ಶುಕ್ರವಾರ ಶತಭಿಷಾ ನಕ್ಷತ್ರ, ಸಿದ್ಧ ಯೋಗ, ಕಿಂಸ್ತುಘ್ನ ಕರಣ. ಇಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Feb 28, 2025, 07:59 AM IST
  • ಉತ್ತರಾಯಣ, ಸೌರ ವಸಂತ ಋತು, ಮಾಘ ಮಾಸ, ಕೃಷ್ಣ ಪಕ್ಷ, ಪ್ರತಿಪದಾ ತಿಥಿ
  • ಈ ದಿನ ಶುಕ್ರವಾರ ಶತಭಿಷಾ ನಕ್ಷತ್ರ, ಸಿದ್ಧ ಯೋಗ, ಕಿಂಸ್ತುಘ್ನ ಕರಣ.
  • ಶುಭ ಶುಕ್ರವಾರ ಎಲ್ಲಾ 12 ರಾಶಿಯವರ ಫಲಾಫಲ ಹೇಗಿದೆ ತಿಳಿಯಿರಿ.
ದಿನಭವಿಷ್ಯ 28-02-2025: ಶುಕ್ರವಾರ ಸಿದ್ಧ ಯೋಗ: ಈ ರಾಶಿಯವರಿಗೆ ಆಸ್ತಿ ಖರೀದಿ ಸಾಧ್ಯತೆ  title=

Shukravara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಸೌರ ವಸಂತ ಋತು, ಮಾಘ ಮಾಸ, ಕೃಷ್ಣ ಪಕ್ಷ, ಪ್ರತಿಪದಾ ತಿಥಿಯ ಈ ದಿನ  ಶುಕ್ರವಾರ ಶತಭಿಷಾ ನಕ್ಷತ್ರ, ಸಿದ್ಧ ಯೋಗ, ಕಿಂಸ್ತುಘ್ನ ಕರಣ. ಎಲ್ಲಾ 12 ರಾಶಿಯವರ ಫಲಾಫಲ ಹೇಗಿದೆ ತಿಳಿಯಿರಿ. 

ಮೇಷ ರಾಶಿಯವರ ಭವಿಷ್ಯ (Aries Horoscope):  
ಬಹುದಿನಗಳಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ಮಾತಿನಲ್ಲಿ ಮೃದುತ್ವವನ್ನು ಕಾಪಾಡಿಕೊಳ್ಳಿ. ಇದರಿಂದ ಸಮಾಜದಲ್ಲಿ ಕೀರ್ತಿ ಗೌರವ ಹೆಚ್ಚಾಗಲಿದೆ. ಕುಟುಂಬ ಸದಸ್ಯರೊಬ್ಬರು ಇಂದು ಕೆಲಸದ ನಿಮಿತ್ತ ಮನೆಯಿಂದ ದೂರ ಹೋಗಬಹುದು. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ಇಂದು ಹೊಸ ಸಂಪರ್ಕಗಳಿಂದ ಲಾಭವಾಗಲಿದೆ. ಮನೆಯಲ್ಲಿ ಮದುವೆಯಂತಹ ಮಂಗಳ ಕಾರ್ಯಗಳು ಜರುಗಬಹುದು. ನಿಮ್ಮ ಪ್ರಮುಖ ಮಾಹಿತಿಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದನ್ನು ತಪ್ಪಿಸಿ. ದೂರದ ಊರಿನಿಂದ ಒಳ್ಳೆಯ ಸುದ್ದಿ ಕೇಳಿಬರಬಹುದು. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಉದ್ಯೋಗಸ್ಥರಿಗೆ ಇಂದು ಪ್ರಮೋಷನ್ ಸಾಧ್ಯತೆ ಇದೆ. ನಿಮ್ಮ ಕೆಲಸದಲ್ಲಿ ನಿರತರಾಗುವುದರ ಜೊತೆಗೆ ಕುಟುಂಬದತ್ತವೂ ಗಮನಹರಿಸಿ. ಇಲ್ಲದಿದ್ದರೆ ನಿಮ್ಮ ಈ ಸ್ವಭಾವವು ಮಕ್ಕಳಲ್ಲಿ ಬೇಸರ ಉಂಟು ಮಾಡಬಹುದು. ಹಣದ ವಿಚಾರದಲ್ಲಿ ಯಾರನ್ನೂ ನಂಬಬೇಡಿ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಇಂದು ನಿಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳುವಿರಿ. ಕೆಲಸದ ಬಗ್ಗೆ ಸಂಗಾತಿಯಿಂದ ಸಲಹೆ ಸೂಚನೆಗಳನ್ನು ಪಡೆಯಬಹುದು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಯೋಚನೆ ನಿಮ್ಮನ್ನು ಕಾಡಬಹುದು. ಕುಟುಂಬ ವ್ಯವಹಾರದಲ್ಲಿ ಮಹಾಲಕ್ಷ್ಮೀ ಕೃಪೆ ತೋರಲಿದ್ದಾಳೆ. 

ಇದನ್ನೂ ಓದಿ- ಲಕ್ಷ್ಮಿ ನಾರಾಯಣ ರಾಜಯೋಗ: ಈ ರಾಶಿಯವರಿಗೆ ಭಾರೀ ಅದೃಷ್ಟ, ಸಕಲೈಶ್ವರ್ಯ ಪ್ರಾಪ್ತಿ

ಸಿಂಹ ರಾಶಿಯವರ ಭವಿಷ್ಯ (Leo Horoscope):  
ತಾಯಿ ಲಕ್ಷ್ಮಿ ದಯೆಯಿಂದ ಇಂದು ಒಳ್ಳೆಯ ದಿನವಾಗಿರಲಿದೆ. ಆದಾಯದ ಮೂಲಗಳು ಹೆಚ್ಚಾಗಲಿವೆ. ಶತ್ರುಗಳ ವಿರುದ್ಧ ಜಯ ಸಾಧಿಸುವಿರಿ. ಸ್ವಂತ ಮನೆ ಖರೀದಿ ಬಗ್ಗೆ ಯೋಚಿಸುವವರಿಗೆ ಶುಭ ದಿನ. ಮಕ್ಕಳಿಂದ ಶುಭ ಸುದ್ದಿಯನ್ನು ಕೇಳುವ ಸಂಭವವಿದೆ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಇಂದು ನಿಮಗೆ ಸಂತೋಷದ ದಿನ. ವ್ಯವಹಾರದಲ್ಲಿ ಉತ್ತಮ ಪಾಲುದಾರಿಕೆಯನ್ನು ಕಾಣಬಹುದು. ಜೀವನದಲ್ಲಿ ಸುಖ ಸೌಕರ್ಯಗಳು ಹೆಚ್ಚಾಗಿ ಐಷಾರಾಮಿ ಬದುಕನ್ನು ಅನುಭವಿಸುವಿರಿ. ಮನೆಯಲ್ಲಿ ಹೋಮ, ಪೂಜೆ ನಡೆಸುವುದರಿಂದ ಧನಾತ್ಮಕತೆ ಹೆಚ್ಚಾಗುತ್ತದೆ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ಇಂದು ದೊಡ್ಡ ಮೊತ್ತದ ಸಾಲದಿಂದ ಮುಕ್ತಿಯನ್ನು ಪಡೆಯುವಿರಿ. ಆಸ್ತಿಗೆ ಸಂಬಂಧಿಸಿದಂತೆ ದಾಯಾದಿಗಳೊಂದಿಗೆ ಕಲಹವನ್ನು ತಪ್ಪಿಸಿ. ಪ್ರೇಮ ಜೀವನದಲ್ಲಿರುವವರಿಗೆ ಶುಭ ಸುದ್ದಿ ಸಿಗಬಹುದು. ಸಂಜೆ ವೇಳೆಗೆ ಸ್ನೇಹಿತರೊಂದಿಗೆ ಮನರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸುವಿರಿ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಇಂದು ಪಾಲುದಾರಿಕೆ ವ್ಯವಹಾರವನ್ನು ತಪ್ಪಿಸುವುದು ಒಳ್ಳೆಯದು. ಸಂಬಂಧಿಗಳಿಗೆ ನೀಡಿರುವ ಸಾಲದ ಹಣವನ್ನು ಮರಳಿ ಪಡೆಯುವ ಸಂಭವಗಳು ತೀರಾ ವಿರಳ. ಕುಟುಂಬಸ್ಥರೊಂದಿಗಿನ ಯಾವುದೇ ಭಿನ್ನಾಭಿಪ್ರಾಯಗಳನ್ನು ಮನೆಯಲ್ಲಿಯೇ ಬಗೆಹರಿಸಿಕೊಳ್ಳುವುದು ಒಳ್ಳೆಯದು. 

ಇದನ್ನೂ ಓದಿ- 30 ವರ್ಷಗಳ ಬಳಿಕ ಮೀನದಲ್ಲಿ ಪಿತಾ-ಪುತ್ರರ ಸಂಯೋಗ: ಈ ರಾಶಿಯವರಿಗೆ ಭಾಗ್ಯೋದಯ, ಧನ ವೃಷ್ಟಿ, ಇಷ್ಟಾರ್ಥ ಸಿದ್ಧಿ..! 

ಧನು ರಾಶಿಯವರ ಭವಿಷ್ಯ (Sagittarius Horoscope):  
ಇಂದು ನಿಮ್ಮ ಸುತ್ತಲೂ ಇರುವ ಜನರ ಬಗ್ಗೆ ಎಚ್ಚರಿಕೆಯಿಂದ ಇರಿ. ಅನಾವಶ್ಯಕವಾಗಿ ಖರೀದಿಗಾಗಿ ಹಣ ವ್ಯಯಿಸದೆ ನಿಜವಾಗಿಯೂ ನಿಮಗೆ ಅದರ ಅಗತ್ಯತೆ ಇದೆಯೇ ಎಂಬುದನ್ನೂ ಯೋಚಿಸಿ. ವಹಿವಾಟಿಗೆ ಸಂಬಂಧಿಸಿದ ಯಾವುದೇ ವಿಷಯಗಳು ಇತ್ಯರ್ಥಗೊಳ್ಳುವುವು. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಇಂದು ನಿಮ್ಮ ಬದುಕಿನಲ್ಲಿ ಸಕಾರಾತ್ಮಕ ಫಲಗಳು ಹೆಚ್ಚಾಗಿರಲಿವೆ. ವ್ಯವಹಾರದಲ್ಲಿ ಅಪರಿಚಿತರನ್ನು ನಂಬುವುದನ್ನು ತಪ್ಪಿಸಿ. ನಿಮ್ಮ ಬಹುದಿನಗಳ ಕನಸೊಂದು ನನಸಾಗಲಿದ್ದು ಸಂತೋಷಕ್ಕೆ ಮಿತಿಯೇ ಇಲ್ಲದಂತೆ ಇರುತ್ತದೆ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಈ ದಿನ ನಿಮಗೆ ಖರ್ಚು ಅಧಿಕವಾಗಲಿದೆ. ವ್ಯವಹಾರದಲ್ಲಿ ಉತ್ತಮ ಲಾಭ ನಿರೀಕ್ಷಿಸಬಹುದು. ಹಾಗಂತ ಸುಖಾಸುಮ್ಮನೆ ಖರ್ಚು ಮಾಡುವುದನ್ನು ತಪ್ಪಿಸಿ. ಆಸ್ತಿ ಖರೀದಿಯು ಲಾಭದಾಯಕವಾಗಲಿದೆ. ಅಗತ್ಯವಿರುವ ನಿಮ್ಮ ಸ್ನೇಹಿತರಿಗೆ ನೀವಾಗಿಯೇ ಸಹಾಯ ಮಾಡುವುದನ್ನು ಪರಿಗಣಿಸಿ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಇಂದು ಸಮಸ್ಯೆಗಳಿಂದ ಮುಕ್ತಿ ದೊರೆಯುವ ದಿನ. ಅತ್ತೆ-ಮಾವನ ಕಡೆಯಿಂದ ಧನ ಸಹಾಯ ದೊರೆಯಲಿದೆ. ವೈವಾಹಿಕ ಜೀವನದಲ್ಲಿ ಸುಮಧುರತೆಯನ್ನು ಕಾಣುವಿರಿ. ರಾಜಕೀಯದಲ್ಲಿರುವವರಿಗೆ ಮಿಶ್ರ ಫಲಿತಾಂಶಗಳ ದಿನವಾಗಲಿದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News