ದಿನಭವಿಷ್ಯ 27-02-2025: ಗುರುವಾರದಂದು ಶಿವಯೋಗ, ಈ ರಾಶಿಯವರಿಗೆ ಶತ್ರುಗಳ ವಿರುದ್ಧ ಜಯ, ವೃತ್ತಿಯಲ್ಲಿ ಯಶಸ್ಸು

Today Horoscope 27th February 2025: ಇಂದು ಗುರುವಾರ ಧನಿಷ್ಠಾ ನಕ್ಷತ್ರ, ಶಿವ ಯೋಗ ಚತುಷ್ಪಾದ ಕರಣ. ಇಂದಿನ  ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Feb 27, 2025, 07:57 AM IST
  • ಉತ್ತರಾಯಣ, ಸೌರ ವಸಂತ ಋತು, ಮಾಘ ಮಾಸ, ಕೃಷ್ಣ ಪಕ್ಷ ಅಮಾವಾಸ್ಯೆ ತಿಥಿ.
  • ಇಂದು ಗುರುವಾರ ಧನಿಷ್ಠಾ ನಕ್ಷತ್ರ, ಶಿವ ಯೋಗ ಚತುಷ್ಪಾದ ಕರಣ.
  • ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
ದಿನಭವಿಷ್ಯ 27-02-2025: ಗುರುವಾರದಂದು ಶಿವಯೋಗ, ಈ ರಾಶಿಯವರಿಗೆ ಶತ್ರುಗಳ ವಿರುದ್ಧ ಜಯ, ವೃತ್ತಿಯಲ್ಲಿ ಯಶಸ್ಸು title=

Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಸೌರ ವಸಂತ ಋತು, ಮಾಘ ಮಾಸ, ಕೃಷ್ಣ ಪಕ್ಷ ಅಮಾವಾಸ್ಯೆ ತಿಥಿ. ಇಂದು ಗುರುವಾರ ಧನಿಷ್ಠಾ ನಕ್ಷತ್ರ, ಶಿವ ಯೋಗ ಚತುಷ್ಪಾದ ಕರಣ. ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ. 

ಮೇಷ ರಾಶಿಯವರ ಭವಿಷ್ಯ (Aries Horoscope):  
ಇಂದು ನಿಮ್ಮ ಕೆಲಸದ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ವ್ಯವಹಾರ ವಿಸ್ತರಣೆಯತ್ತ ಗಮನಹರಿಸುವುದು ಲಾಭದಾಯಕವಾಗಿದೆ. ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳುವುದರಿಂದ ಯಶಸ್ಸು ಹಿಂಬಾಲಿಸಲಿದೆ. ಹಣಕಾಸು ನಿರ್ವಹಣೆ ಸುಧಾರಿಸಲಿದೆ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ಕೆಲಸದಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಿ. ನಿಮ್ಮ ಪ್ರತಿಭೆಯೇ ಶತ್ರುಗಳ ವಿರುದ್ಧ ಜಯ ಸಾಧಿಸಲು ದಾರಿ ದೀಪವಾಗಿದೆ. ಜವಾಬ್ದಾರಿಯುತ ವ್ಯಕ್ತಿಗಳ ಬೆಂಬಲ ಪಡೆಯುವಿರಿ. ಸಂವಹನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಅದ್ಭುತವಾದ ದಿನ. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಇಂದು ಅದೃಷ್ಟದ ಬೆಂಬಲದಿಂದ ಜೀವನದ ನಾನಾ ಆಯಾಮಗಳಲ್ಲಿ ಸಕಾರಾತ್ಮಕತೆಯನ್ನು ಕಾಣುವಿರಿ. ಆತ್ಮವಿಶ್ವಾಸದಿಂದ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ದೂರದ ಊರಿನಿಂದ ಒಳ್ಳೆಯ ಸುದ್ದಿಯನ್ನು ಕೇಳುವಿರಿ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ನಿಮ್ಮ ಮನೆ ಮತ್ತು ಕುಟುಂಬದಲ್ಲಿ ಆಹ್ಲಾದಕರ ವಾತಾವರಣ ಇರುತ್ತದೆ. ಪ್ರೀತಿಪಾತ್ರರ ಸಹಾಯದಿಂದ ನೀವು ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ. ಯಾವುದೇ ಕೆಲಸದಲ್ಲಿ ನೀತಿ ನಿಯಮಗಳನ್ನು ಪಾಲಿಸುವಟ್ಟ ಗಮನಹರಿಸಿ. ಜೀವನದಲ್ಲಿ ಸರಳತೆ ಇರಲಿ. 

ಇದನ್ನೂ ಓದಿ- ಮಾರ್ಚ್ ಆರಂಭದಲ್ಲೇ ಈ ರಾಶಿಯವರಿಗೆ ಗಜಕೇಸರಿ ಯೋಗ: ಹಣದ ಸುರಿಮಳೆ, ಸುಖದ ಸುಪ್ಪತ್ತಿಗೆಯಲ್ಲೇ ಜೀವನ

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಪಾಲುದಾರಿಕೆ ವ್ಯವಹಾರದಲ್ಲಿ ಸುಧಾರಣೆ ಕಂಡು ಬರಲಿಡ್.ಎ ಎಲ್ಲೆಡೆ ಧನಾತ್ಮಕತೆಯೇ ಮೇಲುಗೈ ಸಾಧಿಸಲಿದೆ. ಸಂವಹನ ಮತ್ತು ನೆಟ್ವರ್ಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಯಶಸ್ಸು. ವ್ಯಾಪಾರದಲ್ಲಿ ಪ್ರಗತಿಯ ಹೊಸ ಆವಕಾಶಗಳನ್ನು ಪಡೆಯುವಿರಿ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಕಠಿಣ ಪರಿಶ್ರಮದ ಮೂಲಕ ಉತ್ತಮ ಫಲಿತಾಂಶವನ್ನು ಪಡೆಯುವಿರಿ. ಹಣಕಾಸಿನ ಸಮಸ್ಯೆಗಳು ಸುಗಮವಾಗಿ ಬಗೆಹರಿಯಲಿವೆ. ಆದರೂ, ಇಂದು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಬೇಕಾಗುತ್ತದೆ. ಸಮಯ ನಿರ್ವಹಣೆಯ ಮೇಲೆ ಗಮನವಿರಲಿ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ಇಂದು ನಿಮ್ಮ ವೈಯಕ್ತಿಕ ಚಟುವಟಿಕೆಗಳು ವೇಗವನ್ನು ಪಡೆಯಲಿವೆ. ಸ್ನೇಹಿತರ ವಲಯ ಹೆಚ್ಚಾಗಲಿದೆ. ಪ್ರಮುಖ ಕೆಲಸಗಳಲ್ಲಿ ನಿಮ್ಮ ಸ್ನೇಹಿತರೇ ನಿಮಗೆ ಬೆನ್ನೆಲುಬಾಗಿ ನಿಲ್ಲಲಿದ್ದಾರೆ. ಕುಟುಂಬದೊಂದಿಗೆ ಸ್ಮರಣೀಯ ದಿನವನ್ನು ಆನಂದಿಸುವಿರಿ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ. ಇದು ನಿಮ್ಮ ಬಾಂಧವ್ಯವನ್ನು ಹೆಚ್ಚಿಸುತ್ತದೆ. ಜವಾಬ್ದಾರಿಯುತ ವ್ಯಕ್ತಿಗಳೊಂದಿಗೆ ಸಾಮ್ಯ ಕಳೆಯುತ್ತೀರಿ. ವಿವಿಧ ವಿಷಯಗಳ ಮೇಲೆ ನಿಮ್ಮ ಗಮನ ಹೆಚ್ಚಾಗುತ್ತದೆ. ಆಸ್ತಿ ಖರೀದಿ ಪ್ರಯತ್ನಗಳು ವೇಗಗೊಳ್ಳುತ್ತವೆ. 

ಇದನ್ನೂ ಓದಿ- ಮಹಾ ಶಿವರಾತ್ರಿ ವೇಳೆ ಈ ಕನಸುಗಳು ಬಿದ್ದರೆ ಸಾಕ್ಷಾತ್ ಶಿವನ ಆಶೀರ್ವಾದ ನಿಮ್ಮ ಮೇಲಿದೆ ಎಂತಲೇ ಅರ್ಥ..! 

ಧನು ರಾಶಿಯವರ ಭವಿಷ್ಯ (Sagittarius Horoscope):  
ಇಂದು ಕೆಲಸದ ನಿಮಿತ್ತ ದೂರ ಪ್ರಯಾಣ ಕೈಗೊಳ್ಳಬೇಕಾಗಬಹುದು. ಸೋಮಾರಿತನವನ್ನು ಬಿಟ್ಟು ಕೆಲಸ ಮಾಡಿದರೆ ಯಶಸ್ಸು. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ, ಇಲ್ಲವೇ ಮುಂದಿನ ದಿನಗಳಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಗಬಹುದು. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಇಂದು ಕುಟುಂಬಸ್ಥರೊಂದಿಗೆ ಸಂತೋಷದ ದಿನವನ್ನು ಆನಂದಿಸುವಿರಿ. ಸಂಬಂಧಗಳಲ್ಲಿ ಶಾಂತಿ, ಸಾಮರಸ್ಯ ಉಳಿಯುತ್ತದೆ. ಪ್ರೀತಿಪಾತ್ರರೊಂದಿಗೆ ಸಂಜೆ ವಿಹಾರಕ್ಕಾಗಿ ಯೋಜಿಸಬಹುದು. ಮಾತಿನಲ್ಲಿ ಮಧುರತೆಯನ್ನು ಕಾಪಾಡಿಕೊಳ್ಳುವುದರಿಂದ ಲಾಭವಾಗಲಿದೆ. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಸೃಜನಶೀಲ ಕೆಲಸಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ನಿಮ್ಮ ಜೀವನಶೈಲಿಯನ್ನು ಉನ್ನತೀಕರಿಸುತ್ತೀರಿ. ವ್ಯಕ್ತಿತ್ವವು ಸೌಮ್ಯ ಮತ್ತು ಸರಳವಾಗಿರುತ್ತದೆ. ಅಪೇಕ್ಷಿತ ಕೆಲಸಗಳಲ್ಲಿ ಪ್ರಗತಿಯನ್ನು ಸಾಧಿಸುತ್ತೀರಿ. ನಾವೀನ್ಯತೆ ಮೇಲೆ ಗಮನ ಕೇಂದ್ರೀಕರಿಸುವುದರಿಂದ ಹೆಚ್ಚು ಪ್ರಯೋಜನಕಾರಿ ಆಗಿದೆ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಸಂಬಂಧಗಳಲ್ಲಿ ಸೂಕ್ಷ್ಮತೆ ಬಲವಾಗಿರುತ್ತದೆ. ವ್ಯವಹಾರದಲ್ಲಿ ಆತುರದ ನಿರ್ಧಾರಗಳನ್ನು ತಪ್ಪಿಸಿ. ಪ್ರಮುಖ ಕೆಲಸಗಳಲ್ಲಿ ನಂಬ್ರತೆ ಮತ್ತು ಬುದ್ದಿವಂತಿಕೆಯನ್ನು ಕಾಪಾಡಿಕೊಳ್ಳಿ. ದಾನ ಮಾಡುವುದರಿಂದ ಶುಭವಾಗಲಿದೆ. ವಿದೇಶ ಪ್ರಯಾಣಕ್ಕೆ ಯೋಜಿಸಲು ಸುಸಮಯ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News