ಬೆಂಗಳೂರು : ಹಿಂದೂ ಧರ್ಮದಲ್ಲಿ ಮಹಾಪುರಾಣವೆಂದು ಪರಿಗಣಿಸಲ್ಪಟ್ಟಿರುವ ಗರುಡ ಪುರಾಣದಲ್ಲಿ ಜೀವನದ ಅನೇಕ ವಿಷಯಗಳ ಬಗ್ಗೆ ಹೇಳಲಾಗಿದೆ. ಅದನ್ನು ಅನುಸರಿಸಿಕೊಂಡು ನಡೆದರೆ ಮನೆಯಲ್ಲಿ ಅಪಾರ ಸಂತೋಷ, ಸಮೃದ್ಧಿ ನೆಲೆಯಾಗುತ್ತದೆ. ಇದರೊಂದಿಗೆ, ಕೆಲವು ಅಭ್ಯಾಸಗಳನ್ನು ದೂರವಿಡುವಂತೆ ಸಲಹೆ ನೀಡಲಾಗುತ್ತದೆ. ಯಾಕೆಂದರೆ ವ್ಯಕ್ತಿಯ ಈ ಕೆಟ್ಟ ಅಭ್ಯಾಸಗಳು ಲಕ್ಷ್ಮೀ ದೇವಿಯ ಕೋಪಕ್ಕೆ ಕಾರಣವಾಗುತ್ತದೆ. ಲಕ್ಷ್ಮೀ ದೇವಿ ಕೋಪಗೊಂಡರೆ ಜೀವನದಲ್ಲಿ ಹಣದ ಕೊರತೆ ಎದುರಾಗಲು ಆರಂಭವಾಗುತ್ತದೆ.
ಈ ಅಭ್ಯಾಸಗಳು ಲಕ್ಷ್ಮೀ ಮಾತೆ ಕೋಪಗೊಳ್ಳುವಂತೆ ಮಾಡುತ್ತದೆ :
ಕಟು ಮಾತುಗಳು : ಇತರರೊಂದಿಗೆ ಕಟುವಾಗಿ ಮಾತನಾಡುವವರನ್ನು ಲಕ್ಷ್ಮೀ ಎಂದಿಗೂ ಇಷ್ಟಪಡುವುದಿಲ್ಲ. ಸಂಪತ್ತಿನ ಅಧಿದೇವತೆಯಾದ ತಾಯಿ ಲಕ್ಷ್ಮೀ ಕೆಟ್ಟ ಮಾತುಗಳನ್ನು ಆಡುವ ಜನರ ಮೇಲೆ ಎಂದಿಗೂ ಕರುಣೆ ತೋರಿಸುವುದಿಲ್ಲ. ಈ ಕಾರಣದಿಂದ ಸಭ್ಯರಾಗಿರುವಂತೆ ಹೇಳಲಾಗಿದೆ.
ಇದನ್ನೂ ಓದಿ : Paush Amavasya: ಪುಷ್ಯ ಅಮಾವಾಸ್ಯೆಯಂದು ಈ ಕೆಲಸ ಮಾಡಿದ್ರೆ ಎಲ್ಲಾ ನೋವು & ದುಃಖ ದೂರವಾಗುತ್ತವೆ
ಕೊಳಕು ಬಟ್ಟೆ ತೊಟ್ಟವರು : ಕೊಳಕು ಬಟ್ಟೆ ಧರಿಸಿ ಕೊಳಕಾಗಿ ಬದುಕುವವರ ಮೇಲೆ ತಾಯಿ ಲಕ್ಷ್ಮೀ ಸದಾ ಕೋಪದಿಂದ ಇರುತ್ತಾಳೆ. ಅವರ ಜೀವನದಲ್ಲಿ ತಾಯಿ ಲಕ್ಷ್ಮೀ ಆಶೀರ್ವಾದ ಇರುವುದೇ ಇಲ್ಲ. ಲಕ್ಷ್ಮೀ ದೇವಿಯ ಆಶೀರ್ವಾದ ಇಲ್ಲ ಎಂದಾದರೆ ಎಷ್ಟೇ ಕಷ್ಟಪಟ್ಟರೂ ಜೀವನದಲ್ಲಿ ಸುಖ, ಸಮೃದ್ಧಿ ಇರುವುದಿಲ್ಲ. ಲಕ್ಷ್ಮೀ ಇಂಥಹ ಜನರನ್ನು ಎಂದಿಗೂ ಆಶೀರ್ವದಿಸುವುದಿಲ್ಲ. ಅದಕ್ಕಾಗಿಯೇ ಪ್ರತಿದಿನ ಸ್ನಾನ ಮಾಡಬೇಕು. ನಿಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಮತ್ತು ಸ್ವಚ್ಛವಾದ ಬಟ್ಟೆಗಳನ್ನು ಧರಿಸಬೇಕು.
ಬೆಳಿಗ್ಗೆ ತಡವಾಗಿ ಎದ್ದೇಳುವವರು : ಸೂರ್ಯೋದಯದ ನಂತರವೂ ಮಲಗುವ ಜನರು ಜೀವನದಲ್ಲಿ ಸಂತೋಷ, ಯಶಸ್ಸು, ಸಮೃದ್ಧಿ ಮತ್ತು ಉತ್ತಮ ಆರೋಗ್ಯವನ್ನು ಆನಂದಿಸಲು ಸಾಧ್ಯವಿಲ್ಲ. ಈ ಜನರು ತಮ್ಮ ಜೀವನವನ್ನು ದುಃಖ ಮತ್ತು ಬಡತನದಲ್ಲಿ ಕಳೆಯುತ್ತಾರೆ. ಹಾಗೆಯೇ ಸೂರ್ಯಾಸ್ತದ ಸಮಯದಲ್ಲಿ ಮಲಗುವ ಜನರ ಮೇಲೆ ಲಕ್ಷ್ಮೀ ಕೋಪಗೊಳ್ಳುತ್ತಾಳೆ. ಅಂಥವರ ಮನೆಯಲ್ಲಿ ವಾಸಿಸಲು ಇಷ್ಟಪಡುವುದಿಲ್ಲ. ಇನ್ನು ಮುಸ್ಸಂಜೆಯ ಹೊತ್ತಿನಲ್ಲಿ ಮನೆಗೆ ಲಕ್ಷ್ಮೀ ಪ್ರವೇಶ ಮಾಡುತ್ತಾಳೆ ಎಂದು ಹೇಳಲಾಗುತ್ತದೆ. ಯಾರು ಈ ಹೊತ್ತಿನಲ್ಲಿ ಮಲಗುತ್ತಾರೆಯೋ ಅವರ ಮೇಲೆ ಕೂಡಾ ಲಕ್ಷ್ಮೀ ಮುನಿಸಿಕೊಳ್ಳುತ್ತಾಳೆ.
ಇದನ್ನೂ ಓದಿ : Shani Dev: ಶನಿವಾರದಂದು ಈ ಮಾಂತ್ರಿಕ ತಂತ್ರ ಮಾಡಿ, ಶನಿದೇವನ ಕೃಪೆಗೆ ಪಾತ್ರರಾಗಿ
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.