Numerology: ಈ ದಿನಾಂಕಗಳಲ್ಲಿ ಜನಿಸದವರು ಸದಾ ಒಂದು ವಿಷಯವನ್ನು ಸಂಗಾತಿಯಿಂದ ಮರೆಮಾಡುತ್ತಾರೆ!

Mulank 4 people Personality:  ಪ್ರತಿ ರಾಡಿಕ್ಸ್‌ನ ಜನರು ಕೆಲವು ವಿಶೇಷತೆಗಳನ್ನು ಹೊಂದಿದ್ದಾರೆ. ರಾಡಿಕ್ಸ್ 4 ರ ಸ್ಥಳೀಯರ ಬಗ್ಗೆ ಹೇಳುವುದಾದರೆ, ಅವರು ಪ್ರೀತಿಯಲ್ಲಿ ಬಹಳ ಭರವಸೆ ಹೊಂದಿರುತ್ತಾರೆ. ಸಾಮಾನ್ಯವಾಗಿ ಇವರು ಲವ್ ಮ್ಯಾರೇಜ್ ನಲ್ಲಿ ನಂಬಿಕೆ ಇಡುತ್ತಾರೆ. ಆದರೆ, ತಮ್ಮ ಸಂಗಾತಿಯಿಂದ ಸದಾ ಒಂದು ವಿಷಯವನ್ನು ಮುಚ್ಚಿಡುತ್ತಾರೆ ಎಂದು ಹೇಳಲಾಗುತ್ತದೆ.

Written by - Yashaswini V | Last Updated : Jul 12, 2022, 01:11 PM IST
  • ಯಾವುದೇ ತಿಂಗಳ 4, 13, 22 ರಂದು ಜನಿಸಿದವರ ರಾಡಿಕ್ಸ್ ಸಂಖ್ಯೆ 4 ಆಗಿದೆ
  • ರಾಡಿಕ್ಸ್ 4 ರ ಜನರು ಸ್ವಭಾವತಃ ಜೀವನವನ್ನು ಮುಕ್ತವಾಗಿ ಬದುಕಲು ಇಷ್ಟಪಡುತ್ತಾರೆ
  • ಸದಾ ಸಂತೋಷದಿಂದ ಬದುಕಲು ಇಚ್ಚಿಸುವ ಇವರು ತಮ್ಮ ಸುತ್ತಲಿನ ಜನರನ್ನೂ ಸಂತೋಷವಾಗಿರಿಸಿಕೊಳ್ಳಲು ಇಷ್ಟಪಡುತ್ತಾರೆ.

Trending Photos

Numerology: ಈ ದಿನಾಂಕಗಳಲ್ಲಿ ಜನಿಸದವರು ಸದಾ ಒಂದು ವಿಷಯವನ್ನು ಸಂಗಾತಿಯಿಂದ ಮರೆಮಾಡುತ್ತಾರೆ! title=
Mulank 4 Personality

ಮುಲಾಂಕ್ 4 ಜನರ ವ್ಯಕ್ತಿತ್ವ: ಸಂಖ್ಯಾಶಾಸ್ತ್ರದಲ್ಲಿ, ವ್ಯಕ್ತಿಯ ಹುಟ್ಟಿದ ದಿನಾಂಕದ ಸಂಖ್ಯೆಗಳ ಆಧಾರದ ಮೇಲೆ ಅವರ ವ್ಯಕ್ತಿತ್ವವನ್ನು ಲೆಕ್ಕಾಚಾರ ಮಾಡಲಾಗುತ್ತದೆ. ಹುಟ್ಟಿದ ದಿನಾಂಕದ ಮೊತ್ತವನ್ನು ರಾಡಿಕ್ಸ್ ಎಂದು ಕರೆಯಲಾಗುತ್ತದೆ. ಸಂಖ್ಯಾಶಾಸ್ತ್ರದಲ್ಲಿ  ರಾಡಿಕ್ಸ್ 1 ರಿಂದ ರಾಡಿಕ್ಸ್ 9 ರವರೆಗಿನ ಜನರ ವ್ಯಕ್ತಿತ್ವದ ಬಗ್ಗೆ ವಿಶೇಷ ವಿಷಯಗಳನ್ನು ಹೇಳಲಾಗಿದೆ.   ಇಂದು ನಾವು ರಾಡಿಕ್ಸ್ 4 ರ ಸ್ಥಳೀಯರ ಬಗ್ಗೆ  ಕೆಲವು ವಿಶೇಷ ಮಾಹಿತಿಗಳನ್ನು ತಿಳಿಯೋಣ... 

ಯಾವುದೇ ತಿಂಗಳ 4, 13, 22 ರಂದು ಜನಿಸಿದವರ ರಾಡಿಕ್ಸ್ ಸಂಖ್ಯೆ 4 ಆಗಿದೆ. ರಾಡಿಕ್ಸ್ 4 ರ ಜನರು ಸ್ವಭಾವತಃ ಜೀವನವನ್ನು ಮುಕ್ತವಾಗಿ ಬದುಕಲು ಇಷ್ಟಪಡುತ್ತಾರೆ. ಸದಾ ಸಂತೋಷದಿಂದ ಬದುಕಲು ಇಚ್ಚಿಸುವ ಇವರು ತಮ್ಮ ಸುತ್ತಲಿನ ಜನರನ್ನೂ ಸಂತೋಷವಾಗಿರಿಸಿಕೊಳ್ಳಲು ಇಷ್ಟಪಡುತ್ತಾರೆ. 

ಇದನ್ನೂ ಓದಿ- Lucky Zodiac Signs: ರಾಜಯೋಗದೊಂದಿಗೆ ಜನಿಸುತ್ತಾರಂತೆ ಈ 3 ರಾಶಿಯ ಜನ

ಆಕರ್ಷಕ ವ್ಯಕ್ತಿತ್ವ: 
ಆಕರ್ಷಕ ವ್ಯಕ್ತಿತ್ವದವರಾದ ಇವರು ತಮ್ಮ ಮೊದಲ ಭೇಟಿಯಲ್ಲೇ ಜನರನ್ನು ತಮ್ಮತ್ತ ಆಕರ್ಷಿಸುತ್ತಾರೆ. ಪ್ರೇಮ ವಿವಾಹದಲ್ಲಿ ಹೆಚ್ಚು ನಂಬಿಕೆ ಇರುವ ಇವರು ತಮ್ಮ ಸಂಗಾತಿಯನ್ನು ತುಂಬಾ ಪ್ರೀತಿಸುತ್ತಾರೆ. ತಮ್ಮ ಸಂಗಾತಿಯನ್ನು ಎಷ್ಟೇ ಪ್ರೀತಿಸಿದರೂ ಇವರು ತಮ್ಮ ಮನಸ್ಸಿನ ಮಾತನ್ನು ಅಷ್ಟು ಸುಲಭವಾಗಿ ಅವರೊಂದಿಗೆ ಹಚ್ಚಿಕೊಳ್ಳುವುದಿಲ್ಲ. ಸಂಗಾತಿಯಿಂದ ಸದಾ ಒಂದು ಗುಟ್ಟನ್ನು ಕಾಯ್ದುಕೊಳ್ಳುವ ಇವರು ತಮ್ಮ ದುಃಖದಲ್ಲಿ ಅವರಿಗೆ ಎಂದಿಗೂ ಪಾಲು ನೀಡಲು ಇಷ್ಟಪಡುವುದಿಲ್ಲ. ಎಂತಹ ಕಷ್ಟವನ್ನೂ ಏಕಾಂಗಿಯಾಗಿ ನಿಭಾಯಿಸಲು ಹೋರಾಡುತ್ತಾರೆ.

ರಾಡಿಕ್ಸ್ 4 ರ ಜನರು ಪ್ರತಿಭಾವಂತರು ಮತ್ತು ಅವರ ಸಾಮರ್ಥ್ಯದ ಆಧಾರದ ಮೇಲೆ ಮಾತ್ರ ಪ್ರಗತಿ ಸಾಧಿಸುತ್ತಾರೆ. ಈ ರಾಡಿಕ್ಸ್ ಸಂಖ್ಯೆಯವರಿಗೆ ಎಂದಿಗೂ ಹಣದ ಕೊರತೆ ಇರುವುದಿಲ್ಲ. ಆದಾಗ್ಯೂ, ಹೆಚ್ಚಿನ ಸಂದರ್ಭಗಳಲ್ಲಿ, ಅವರು ಹಣ ಮತ್ತು ಆಸ್ತಿಯನ್ನು ಅನುವಂಶಿಕವಾಗಿ ಪಡೆಯುತ್ತಾರೆ. ಐಷಾರಾಮಿ ಜೀವನದ ಅನ್ವೇಷಣೆಯಲ್ಲಿ, ಅವರು ಅನೇಕ ಬಾರಿ ಎಲ್ಲಾ ಹಣವನ್ನು ಖರ್ಚು ಮಾಡುತ್ತಾರೆ. 

ಇದನ್ನೂ ಓದಿ- ನಾಳೆಯಿಂದ ಈ ರಾಶಿಯವರಿಗೆ ಏಳೂವರೆ ಮತ್ತು ಎರಡೂವರೆ ವರ್ಷದ ಶನಿ ದೆಸೆ ಆರಂಭ .!

ಈ ರಾಡಿಕ್ಸ್ ಸಂಖ್ಯೆಯವರು ರಾಹುವಿನ ಪ್ರಭಾವಕ್ಕೆ ಒಳಗಾಗುತ್ತಾರೆ. ನಾಳೆಯ ಬಗ್ಗೆ ಚಿಂತಿಸದ ಇವರು ತಮಗೇ ಬೇಕಾದ್ದನ್ನು ಪಡೆಯಲು ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ. ಭಾವನಾತ್ಮಕವಾಗಿ ಇವರನ್ನು ಯಾರು ಬೇಕಾದರೂ ಸುಲಭವಾಗಿ ಯಾಮಾರಿಸಬಹುದು. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News