Men looks tips : ಹುಡುಗಿಯರು ಹೆಚ್ಚಾಗಿ ಗಡ್ಡ ಬಿಟ್ಟ ಪುರುಷರನ್ನ ಇಷ್ಟ ಪಡುತ್ತಾರೆ. ಚೆನ್ನಾಗಿ ಕಾಣುತ್ತಾರೆ ಅಂದಕ್ಕೆ ಇಷ್ಟ ಪಡ್ತಾರೆ ಅಂತ ಎಲ್ಲರೂ ಭಾವಿಸುತ್ತಾರೆ.. ಆದರೆ ಇದರ ಹಿಂದೆ ಒಂದು ವೈಜ್ಞಾನಿಕ ಕಾರಣವೂ ಇದೆ.. ಈ ವಿಚಾರ ಸಂಶೋಧನೆಯಲ್ಲಿ ಬಹಿರಂಗವಾಗಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
ಈ ಜಗತ್ತಿನಲ್ಲಿ ಮೊದಲು, ಹೆಚ್ಚಿನ ಪುರುಷರು ಗಡ್ಡ ಬಿಡಲು ಇಷ್ಟಪಡುತ್ತಿದ್ದರು, ಆದರೆ ಕಾಲ ಬದಲಾದಂತೆ, ಕ್ಲೀನ್-ಶೇವ್ ಮಾಡಿಸಿಕೊಳ್ಳಲು ಪ್ರಾರಂಭಿಸಿದರು. ಈಗ ಮತ್ತೊಮ್ಮೆ ಗಡ್ಡ ಬಿಡುವ ಟ್ರೇಂಡ್ ಹೆಚ್ಚಾಗಿದೆ. ಅಲ್ಲದೆ, ಕೆಲವು ಪುರುಷರಲ್ಲಿ ಗಡ್ಡ ಬಿಡಬೇಕೆ ಅಥವಾ ಕ್ಲೀನ್ ಶೇವ್ ಮಾಡಿಕೊಳ್ಳಬೇಕೆ ಎಂಬ ಬಗ್ಗೆ ಇನ್ನೂ ಗೊಂದಲವಿದೆ.
ನೋಟಕ್ಕೆ ಸಂಬಂಧಿಸಿದಂತೆ ಇಬ್ಬರೂ ತಮ್ಮದೇ ಆದ ವಾದಗಳನ್ನು ಹೊಂದಿದ್ದಾರೆ. ಹಾಲಿವುಡ್ ಅಥವಾ ಬಾಲಿವುಡ್ ನಾಯಕರು ಹೆಚ್ಚಾಗಿ ಕ್ಲೀನ್-ಕ್ಷೌರ ಮಾಡಿಕೊಂಡಿರುವುದನ್ನು ಕಾಣಬಹುದು, ಆದರೆ ಇತ್ತೀಚಿನ ದಿನಗಳಲ್ಲಿ, ಅನೇಕ ಚಿತ್ರಗಳಲ್ಲಿ ನಾವು ನಾಯಕನೂ ಗಡ್ಡ ಬಿಡುವುದುನ್ನ ಕಾಣಬಹುದು..
ಕೆಲವರ ಅಭಿಪ್ರಾಯದಲ್ಲಿ ಗಡ್ಡ ಬಿಟ್ಟರೆ ಪುರುಷರು ಸುಂದರವಾಗಿ ಕಾಣುತ್ತಾರೆ, ಅದಕ್ಕಾಗಿಯೇ ಹುಡುಗಿಯರು ಅವರನ್ನು ಇಷ್ಟಪಡುತ್ತಾರೆ ಅಂತ.. ಆದರೆ ಇದು ನಿಜವಲ್ಲ.. ಈ ಕುರಿತಾಗಿ ಸಂಶೋಧನೆ ಒಂದು ನಿಜವಾದ ಕಾರಣವನ್ನು ಬಹಿರಂಗಪಡಿಸಿದೆ. ಗಡ್ಡ.. ಪ್ರೀತಿ, ಪ್ರಣಯ ಮತ್ತು ವಿಶ್ವಾಸಕ್ಕೆ ಸಂಬಂಧಿಸಿದೆ ಎಂದು ತಿಳಿಸಿದೆ..
ಆರ್ಕೈವ್ಸ್ ಆಫ್ ಸೆಕ್ಷುಯಲ್ ಬಿಹೇವಿಯರ್‌ನ ವರದಿಯ ಪ್ರಕಾರ, ಗಡ್ಡ ಬಿಟ್ಟ ಪುರುಷರು ಒಬ್ಬಳೇ ಸಂಗಾತಿ ಜೊತೆ ಜೀವಿಸಲು ಇಷ್ಟ ಪಡುತ್ತಾರೆ... ಅವರು ಹೊಸ ಸಂಗಾತಿಯನ್ನು ಹುಡುಕಲ್ಲ. ಅಷ್ಟೇ ಅಲ್ಲ ಯಾರನ್ನೂ ಬಿಟ್ಟುಕೊಡಲು ಇಷ್ಟ ಪಡುವುದಿಲ್ಲ. ಕ್ಲೀನ್ ಶೇವ್ ಮಾಡಿಕೊಂಡ ಪುರುಷರು ಒಂದಕ್ಕಿಂತ ಹೆಚ್ಚು ಯುವತಿಯನ್ನು ಹೊಂದುವ ಸಾಧ್ಯತೆ ಹೆಚ್ಚು.
ಅಧ್ಯಯನವು 18 ರಿಂದ 40 ವರ್ಷ ವಯಸ್ಸಿನ 414 ಪುರುಷರನ್ನು ಒಳಗೊಂಡಿತ್ತು. ಗಡ್ಡದಾರಿಗಳು ಪ್ರಣಯ ಮತ್ತು ಕೌಟುಂಬಿಕ ಸಂಬಂಧಗಳಲ್ಲಿ ಹೆಚ್ಚು ಆಸಕ್ತರಾಗಿದ್ದರು ಎಂದು ಕಂಡುಬಂದಿದೆ. ಅವರು ತಮ್ಮ ಕುಟುಂಬವನ್ನು ನೋಡಿಕೊಳ್ಳುವುದನ್ನು ತಮ್ಮ ಜವಾಬ್ದಾರಿ ಎಂದು ಪರಿಗಣಿಸುತ್ತಾರೆ.
ಆದರೂ ಈ ಕುರಿತು ಸಂಪೂರ್ಣವಾಗಿ ತಿಳಿಯಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ. ಕ್ಲೀನ್ ಶೇವ್ ಮಾಡಿಕೊಂಡ ಎಲ್ಲರೂ ತಮ್ಮ ಸಂಗಾತಿಗೆ ಮೋಸ ಮಾಡ್ತಾರೆ ಅಂತ ಹೇಳಲು ಆಗಲ್ಲ.. ಗಡ್ಡ ಬಿಟ್ಟವರೂ ತುಂಬಾ ಒಳ್ಳೆಯವರು ಎನ್ನುವ ನಿರ್ಧಾರವೂ ತಪ್ಪು.. ಮುಂದೆ ವರದಿ ಯಾವ ರೀತಿ ಬರುತ್ತೆ.. ನೋಡೋಣ..