sesame oil benefits for hair: ಆಧುನಿಕ ಜೀವನಶೈಲಿಯಿಂದಾಗಿ, ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೂದು ಬಣ್ಣಕ್ಕೆ ತಿರುಗುತ್ತಿದೆ. ಬಿಳಿ ಕೂದಲನ್ನು ಕಪ್ಪಾಗಿಸಲು ಜನ ಹಲವು ರೀತಿಯ ಪ್ರಯತ್ನಗಳನ್ನು ಪಡುತ್ತಾರೆ.
sesame oil benefits for hair: ಆಧುನಿಕ ಜೀವನಶೈಲಿಯಿಂದಾಗಿ, ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೂದು ಬಣ್ಣಕ್ಕೆ ತಿರುಗುತ್ತಿದೆ. ಬಿಳಿ ಕೂದಲನ್ನು ಕಪ್ಪಾಗಿಸಲು ಜನ ಹಲವು ರೀತಿಯ ಪ್ರಯತ್ನಗಳನ್ನು ಪಡುತ್ತಾರೆ.
ತೆಂಗಿನ ಎಣ್ಣೆ ಕೂದಲಿಗೆ ತುಂಬಾ ಪ್ರಯೋಜನಕಾರಿ. ಆದಾಗ್ಯೂ, ಎಳ್ಳೆಣ್ಣೆಯು ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ. ಎಳ್ಳು ಎಣ್ಣೆಯು ಅನೇಕ ಪ್ರಮುಖ ಪೋಷಕಾಂಶಗಳನ್ನು ಒಳಗೊಂಡಿದ್ದು, ಇದು ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತವೆ.
ಕೂದಲು ಕಪ್ಪಾಗಲು ಸೋರೆಕಾಯಿಗೆ ಎಳ್ಳೆಣ್ಣೆ ಬೆರೆಸಿ ಹಚ್ಚಿದರೆ ಸಾಕು, ಇದು ಕೂದಲನ್ನು ಕಪ್ಪಾಗಿಸುತ್ತದೆ. ಇದು ಕೂದಲನ್ನು ಹೊಳೆಯುವಂತೆ ಮಾಡುತ್ತದೆ ಮತ್ತು ಆರೋಗ್ಯಕರವಾಗಿರುತ್ತದೆ.
ಒಂದು ಕಪ್ ಎಳ್ಳಿನ ಎಣ್ಣೆಯನ್ನು ನಿಧಾನವಾಗಿ ಕಡಿಮೆ ಉರಿಯಲ್ಲಿ ಅಂದರೆ ಗ್ಯಾಸ್ ಸಿಮ್ ನಲ್ಲಿಟ್ಟು, ಬಿಸಿ ಮಾಡಿ.
ಮಣ್ಣಿನ ಪಾತ್ರೆಯೂ ಆಗಿದ್ದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ.
ಬಿಸಿ ಎಣ್ಣೆಗೆ ಒಂದು ಚಮಚ ಮೆಹಂದಿ ಪುಡಿ ಅಥವಾ ಮೆಹಂದಿ ಎಲೆಗಳನ್ನು ಸೇರಿಸಿ ಚೆನ್ನಾಗಿ ಬೆರೆಸಿ.
ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿ ಮತ್ತು ಮಸಾಜ್ ಮಾಡಿ.
ಕೂದಲಿಗೆ ಹಚ್ಚಿದ ಈ ಮಿಶ್ರಣವನ್ನು ರಾತ್ರಿಯಿಡೀ ಇರಲು ಬಿಡಿ, ನಂತರ ನಿಮ್ಮ ಕೂದಲನ್ನು ಶಾಂಪುವಿನಿಂದ ತೊಳೆಯಿರಿ.
ಶಾಂಪುವಿನಿಂದ ನಿಮ್ಮ ಕೂದಲನ್ನು ತೊಳೆಯುವ ಬದಲು ಸೀಗೆಕಾಯಿ ಬಳಸಿ ನಿಮ್ಮ ಕೂದಲನ್ನು ತೊಳೆದರೆ ಇನ್ನೂ, ಹೆಚ್ಚು ಫಲಿತಾಂಶ ಸಿಗುತ್ತದೆ.
ಕೇವಲ ಮೆಹೆಂದಿ ಎಲೆ ಅಷ್ಟೆ ಅಲ್ಲದೆ, ಕರಿಬೇವಿನ ಎಲೆಗಳನ್ನು ಸಹ ಬಳಸಬಹುದು. ಕರಿಬೇವಿನ ಪುಡಿಯನ್ನು ಎಳ್ಳೆಣ್ಣೆಯೊಂದಿಗೆ ಬೆರೆಸಿ ಹಚ್ಚುವುದರಿಂದ ಕೂದಲು ಕಪ್ಪಾಗುತ್ತದೆ.
ಕೂದಲು ಉದುರುವಿಕೆಯನ್ನು ತಡೆಯಲು, ಅದನ್ನು ಬಲಪಡಿಸಲು ಮತ್ತು ಒಳಗಿನಿಂದ ಆರ್ಧ್ರಕಗೊಳಿಸಲು ಇದು ಸಹಾಯ ಮಾಡುತ್ತದೆ.
ಕರಿಬೇವಿನ ಎಲೆಗಳು ನೈಸರ್ಗಿಕ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಇವು ಕೂದಲನ್ನು ಹಾನಿಯಾಗದಂತೆ ರಕ್ಷಿಸುತ್ತವೆ.
ಇದಲ್ಲದೇ ಕರಿಬೇವಿನ ಸೊಪ್ಪಿನಲ್ಲಿ ಕೂದಲು ಕಪ್ಪಾಗಿಸುವ ಗುಣವೂ ಇದೆ. ಎಳ್ಳಿನ ಎಣ್ಣೆಯು ಆಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್‌ಗಳನ್ನು ಹೊಂದಿರುತ್ತದೆ. ಅವು ಕೂದಲಿಗೆ ಪೋಷಣೆಯನ್ನು ನೀಡುತ್ತವೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾನ್ಯ ಜ್ನಾನ ಹಾಗೂ ಮೂಲಗಳ ಮಾಹಿತಿಯನ್ನು ಆಧರಿಸಿದೆ, ZEE KANNADA NEWS ಇದನ್ನು ಖಚಿತ ಪಡಿಸುವುದಿಲ್ಲ.