Couple health : ಸಂಭೋಗದ ನಂತರ ಮೂತ್ರ ವಿಸರ್ಜಿಸಲು ಮಾಡಲು ಮರೆಯಬೇಡಿ... ಇದು ಅನೇಕ ಸೋಂಕುಗಳನ್ನು ದೂರವಿಡುತ್ತದೆ... ಇದು ಜನರಿಗೆ ತಿಳಿಯಲೇಬೇಕಾದ ವಿಷಯ. ಈ ರೀತಿ ಮಾಡುವುದರಿಂದ, ಮಹಿಳೆಯರು ಮೂತ್ರನಾಳದ ಸೋಂಕು (UTI) ಮತ್ತು ಇತರ ಸೋಂಕುಗಳಂತಹ ಸಮಸ್ಯೆಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಪುರುಷರಿಗಿಂತ ಮಹಿಳೆಯರಿಗೆ ಯುಟಿಐ ಬರುವ ಅಪಾಯ ಹೆಚ್ಚು ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ.
ಸಂಭೋಗದ ನಂತರ ಕೆಲವು ಮಹಿಳೆಯರು ಯುಟಿಐಗೆ ಒಳಗಾಗಬಹುದು. ಇದು ಅಸಾಮಾನ್ಯವೇನಲ್ಲ ಎಂದು ಹೇಳಲಾಗುತ್ತದೆ.. ಸಂಭೋಗದ ಸಮಯದಲ್ಲಿ ಮೂತ್ರನಾಳವನ್ನು ಪ್ರವೇಶಿಸುವ ಬ್ಯಾಕ್ಟೀರಿಯಾದಿಂದ ಇದು ಉಂಟಾಗಬಹುದು. ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿಯುವುದು, ಆಗಾಗ್ಗೆ ಮೂತ್ರ ವಿಸರ್ಜನೆ, ಅಥವಾ ಹೊಟ್ಟೆಯ ಕೆಳಭಾಗದಲ್ಲಿ ನೋವು ಇವು UTI ಯ ಸಾಮಾನ್ಯ ಲಕ್ಷಣಗಳು.
ನುಬೆಲ್ಲಾ ಮಹಿಳಾ ಆರೋಗ್ಯ ಕೇಂದ್ರದ ನಿರ್ದೇಶಕಿ ಡಾ.ಗೀತಾ ಶ್ರಾಫ್ ಹೇಳುವಂತೆ... "ಸಂಭೋಗದ ಸಮಯದಲ್ಲಿ, ಜನನಾಂಗದ ಬ್ಯಾಕ್ಟೀರಿಯಾಗಳು ಮೂತ್ರನಾಳವನ್ನು ಪ್ರವೇಶಿಸಬಹುದು. ಆದ್ದರಿಂದ ಲೈಂಗಿಕ ಕ್ರಿಯೆ ನಂತರ ಮೂತ್ರ ವಿಸರ್ಜನೆ ಮಾಡುವುದರಿಂದ ಈ ಬ್ಯಾಕ್ಟೀರಿಯಾವನ್ನು ಹೊರಹಾಕಬಹುದು, ”ಎಂದು ಹೇಳಿದ್ದಾರೆ,. ಸಂಭೋಗದ ನಂತರ ಅನುಸರಿಸಬೇಕಾದ ಉತ್ತಮ ನೈರ್ಮಲ್ಯ ಸಲಹೆಗಳು ಈ ಕೆಳಗಿನಂತಿವೆ..
ಶುಚಿತ್ವ ಮುಖ್ಯ : ಸಂಭೋಗದ ನಂತರ ಜನನಾಂಗದ ಪ್ರದೇಶವನ್ನು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಲು ತಜ್ಞರು ಸಲಹೆ ನೀಡುತ್ತಾರೆ. ನೈಸರ್ಗಿಕ pH ಸಮತೋಲನವನ್ನು ಅಡ್ಡಿಪಡಿಸುವ ಪರಿಮಳಯುಕ್ತ ಸಾಬೂನುಗಳನ್ನು ಬಳಸಬೇಡಿ..
ಬಟ್ಟೆ ಬದಲಿಸಿ : ಸಂಭೋಗದ ನಂತರ ಬಿಗಿಯಾದ ಬಟ್ಟೆ ಅಥವಾ ಒದ್ದೆಯಾದ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿ. ಬಿಗಿಯಾದ ಅಥವಾ ಒದ್ದೆಯಾದ ಬಟ್ಟೆ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಕಾರಣವಾಗುತ್ತದೆ. ಅದಕ್ಕಾಗಿ ಆ ಪ್ರದೇಶವನ್ನು ಶುಷ್ಕ ಮತ್ತು ತಾಜಾವಾಗಿಡಲು ಸಡಿಲವಾದ, ಗಾಳಿಯಾಡುವ ಹತ್ತಿ ಒಳ ಉಡುಪುಗಳನ್ನು ಆರಿಸಿ.
ನಿಮ್ಮ ಕೈಗಳನ್ನು ತೊಳೆಯಿರಿ : ರೋಗಾಣುಗಳು ಹರಡುವುದನ್ನು ತಡೆಯಲು ಲೈಂಗಿಕ ಸಂಭೋಗದ ಮೊದಲು ಮತ್ತು ನಂತರ ನಿಮ್ಮ ಕೈಗಳನ್ನು ತೊಳೆಯುವುದು ಅವಶ್ಯಕ ಎಂದು ಹೇಳಲಾಗುತ್ತದೆ.
ಸೆಕ್ಸ್ ಟಾಯ್ಸ್ ಸ್ವಚ್ಛಗೊಳಿಸಿ : ಭಾರತದಲ್ಲಿ ಲೈಂಗಿಕ ಆಟಿಕೆಗಳ ಬಳಕೆ ಹೆಚ್ಚಾಗುತ್ತಿವೆ. ಇವು ಸೋಂಕುಗಳನ್ನು ಹರಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಬ್ಯಾಕ್ಟೀರಿಯಾದ ವರ್ಗಾವಣೆಯನ್ನು ತಪ್ಪಿಸಲು ಟಾಯ್ಸ್ ಅನ್ನು ಬಿಸಿ ನೀರಿನಿಂದ ತೊಳೆಯುವಂತೆ ವ್ಯದ್ಯರು ಸಲಹೆ ನೀಡುತ್ತಾರೆ.
ಹೈಡ್ರೇಟೆಡ್ ಆಗಿರಿ : ಸಾಕಷ್ಟು ನೀರು ಕುಡಿಯುವುದರಿಂದ ಮೂತ್ರ ವಿಸರ್ಜನೆಯು ನಿಯಮಿತವಾಗಿ ಆಗುತ್ತದೆ. ಹೀಗೆ ಮಾಡುವುದರಿಂದ ಮೂತ್ರನಾಳದಲ್ಲಿರುವ ಬ್ಯಾಕ್ಟೀರಿಯಾಗಳು ಸ್ವಾಭಾವಿಕವಾಗಿ ಹೊರಹೋಗುತ್ತವೆ.. ಲೈಂಗಿಕ ಕ್ರಿಯೆ ಮಾಡುವ ವೇಳೆ ನೀರು ಕುಡಿಯಿರಿ..
(ಗಮನಿಸಿ: ಈ ವಿಷಯಗಳು ಮಾಹಿತಿಗಾಗಿ ಮಾತ್ರ. ಇಲ್ಲಿ ನೀಡಲಾದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕ ವಿಷಯಗಳನ್ನು ಆಧರಿಸಿ ಬರೆಯಲಾಗಿದೆ. ಯಾವುದೇ ಆರೋಗ್ಯ ಸಮಸ್ಯೆಗಳಿಗೆ, ಈ ಮೇಲಿನ ವಿಷಯಗಳನ್ನು ಖಚಿತಪಡಿಸಲು ವೈದ್ಯಕೀಯ ತಜ್ಞರನ್ನು ಸಂಪರ್ಕಿಸುವುದು ಉತ್ತಮ)