ಆರೋಗ್ಯವಾಗಿರಲು ಪ್ರತಿದಿನ ಎಷ್ಟು ಗಂಟೆಗಳ ನಿದ್ದೆ ಮಾಡಬೇಕು ಗೊತ್ತೆ..? ಈ ಸಮಯಕ್ಕೆ ಮಲಗಿ..

Sleeping tips : ನಗರದಲ್ಲಿ ಜನರು ನಿದ್ದೆ ಮತ್ತು ಏಳುವ ಸಮಯವನ್ನು ನಿಗದಿಪಡಿಸಿರುವುದಿಲ್ಲ.. ಇದರಿಂದ ಸಿಟಿ ಮಂದಿ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಆದರೆ ನಮ್ಮ ದೇಹಕ್ಕೆ ಸರಿಯಾದ ನಿದ್ರೆ ಮತ್ತು ವಿಶ್ರಾಂತಿ ಬೇಕು.. ಬನ್ನಿ ಉತ್ತಮ ಆರೋಗ್ಯಕ್ಕೆ ಮಲಗುವ ಮತ್ತು ಏಳುವ ಸಮಯ ಯಾವುದು ಅಂತ ತಿಳಿಯೋಣ..
 

1 /6

ಸರಿಯಾದ ಸಮಯಕ್ಕೆ ಮಲಗುವುದು ಮತ್ತು ಸರಿಯಾದ ಸಮಯಕ್ಕೆ ಏದ್ದರೆ ನೀವು ಖಂಡಿತವಾಗಿಯೂ ಫಿಟ್ ಆಗುತ್ತೀರಾ.. ಅಲ್ಲದೆ, ರೋಗಗಳು ನಿಮ್ಮಿಂದ ದೂರವಾಗುತ್ತವೆ. ಹಾಗಿದ್ರೆ ಮಲಗಲು ಸರಿಯಾದ ಸಮಯ ಯಾವುದು..? ಸಂಪೂರ್ಣ ಮಾಹಿತಿ ಇಲ್ಲಿದೆ ..  

2 /6

ನವಜಾತ ಶಿಶುಗಳು 24 ಗಂಟೆಗಳಲ್ಲಿ 18 ಗಂಟೆಗಳ ಕಾಲ ನಿದ್ರೆ ಮಾಡುತ್ತವೆ.. ಆದರೆ ವಯಸ್ಸಿನೊಂದಿಗೆ ನಿದ್ರೆ ಕಡಿಮೆಯಾಗುತ್ತದೆ. ನವಜಾತ ಶಿಶುವಿಗೆ 18 ಗಂಟೆಗಳ ನಿದ್ದೆ ಬೇಕು, ಯುವ ವಯಸ್ಕರಿಗೆ 6 ರಿಂದ 8 ಗಂಟೆಗಳ ನಿದ್ದೆ ಬೇಕು, ವಯಸ್ಸಾದವರು ನಾಲ್ಕರಿಂದ ಐದು ಗಂಟೆಗಳ ನಿದ್ರೆ ಮಾಡಬೇಕು.. ಇದು ದೇಹಕ್ಕೆ ಒಳ್ಳೆಯದು..  

3 /6

ವ್ಯದ್ಯರ ಪ್ರಕಾರ.. ರಾತ್ರಿ 8 ರಿಂದ ಬೆಳಗಿನ ಜಾವ 4 ರ ನಡುವೆ ಮಲಗಲು ಉತ್ತಮ ಸಮಯ. ನಿಮ್ಮ ಎಲ್ಲಾ ಕೆಲಸಗಳನ್ನು ಮುಗಿಸಿ ರಾತ್ರಿ 8:00 ಗಂಟೆಗೆ ಮಲಗಿ.. ಬೆಳಗಿನ ಜಾವ 4:00 ಗಂಟೆಗೆ ಎದ್ದರೆ ಕೊಲೆಸ್ಟ್ರಾಲ್, ಸಕ್ಕರೆ ಮತ್ತು ತೂಕ ನಿಯಂತ್ರಣದಲ್ಲಿರುತ್ತದೆ.   

4 /6

ಇದರಿಂದ ನಿಮ್ಮ ದೇಹಕ್ಕೆ ಯಾವುದೇ ರೋಗಗಳು ಬರುವುದಿಲ್ಲ. ಮೊದಲು ಫಿಟ್ ಆಗಿರಲು ಹೀಗೆ ಮಾಡುತ್ತಿದ್ದರು ಆದರೆ ಈಗ 12:00 ರವರೆಗೆ ಮಲಗುತ್ತಾರೆ.. 10:00ಕ್ಕೆ ತಿನ್ನುತ್ತಾರೆ. ತಿಂದ ತಕ್ಷಣ ನಿದ್ದೆಮಾಡುತ್ತಾರೆ.. ಇನ್ನೂ ಕೆಲವರು ಬೆಳಗಾಗುವವರೆಗೂ ಫೋನ್‌ ಹಿಡಿದುಕೊಂಡಿರುತ್ತಾರೆ.. ಇದು ಅನಾರೋಗ್ಯಕ್ಕೆ ಕಾರಣವಾಗುತ್ತದೆ..   

5 /6

ನಿದ್ರೆ ನಮ್ಮ ದೇಹಕ್ಕೆ ಹೊಸ ಚೈತನ್ಯ ನೀಡುತ್ತದೆ. ನಮ್ಮ ದೇಹ ಬೆಳಗಿನಿಂದ ಸಂಜೆಯವರೆಗೆ ನಿರಂತರವಾಗಿ ಕೆಲಸ ಮಾಡಿರುತ್ತದೆ ಅದಕ್ಕೆ, ರಾತ್ರಿಯಾಗುತ್ತಿದ್ದಂತೆ ದೇಹ ಸುಸ್ತಾಗುತ್ತದೆ. ಉತ್ತಮ ನಿದ್ರೆಯ ನಂತರ ಮತ್ತೆ ಕಾರ್ಯನಿರ್ವಹಿಸುತ್ತದೆ..   

6 /6

ದೇಹದೊಳಗಿನ ಯಾವುದೇ ತೊಂದರೆಯನ್ನು ನಿದ್ರೆಯಿಂದ ಮಾತ್ರ ನಿವಾರಿಸಬಹುದು. ಮೆದುಳಿನ ಜೀವಕೋಶಗಳು ವಿಶ್ರಾಂತಿ ಪಡೆಯುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಸರಿಯಾದ ಸಮಯದಲ್ಲಿ ನಿದ್ರೆ ಮಾಡುವುದು ಬಹಳ ಮುಖ್ಯ, ಇದರಿಂದಾಗಿ ನಿಮಗೆ ಯಾವುದೇ ರೋಗಗಳು ಬರುವುದಿಲ್ಲ.. ಸರಿಯಾದ ಸಮಯದಲ್ಲಿ ನಿದ್ರೆ ಮತ್ತು ಏಳುವ ಜನರು ಕಡಿಮೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ.