Vijaya Lakshmi Darshan Net Worth : ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅಂದ್ರೆ ದಚ್ಚು ಫ್ಯಾನ್ಸ್ ಮುದ್ದಿನ ಅತ್ತಿಗೆ. ಸತಿ ಅಂದ್ರೆ ಹೀಗಿರಬೇಕು ಎಂಬಂತಿರುವ ವಿಜಯಲಕ್ಷ್ಮಿ ಅನೇಕರಿಗೆ ಮಾದರಿ. ಕಷ್ಟದಲ್ಲಿ ದರ್ಶನ್ ಬೆನ್ನಿಗೆ ನಿಲ್ಲುವ ಮುದ್ದಿನ ಮಡದಿ ವಿಜಯಲಕ್ಷ್ಮಿ ಹೆಸರಲ್ಲಿರುವ ಆಸ್ತಿ ಎಷ್ಟು ಕೋಟಿ ಗೊತ್ತೇ?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
Vijaya Lakshmi Darshan Net Worth : ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅಂದ್ರೆ ದಚ್ಚು ಫ್ಯಾನ್ಸ್ ಮುದ್ದಿನ ಅತ್ತಿಗೆ. ಸತಿ ಅಂದ್ರೆ ಹೀಗಿರಬೇಕು ಎಂಬಂತಿರುವ ವಿಜಯಲಕ್ಷ್ಮಿ ಅನೇಕರಿಗೆ ಮಾದರಿ. ಕಷ್ಟದಲ್ಲಿ ದರ್ಶನ್ ಬೆನ್ನಿಗೆ ನಿಲ್ಲುವ ಮುದ್ದಿನ ಮಡದಿ ವಿಜಯಲಕ್ಷ್ಮಿ ಹೆಸರಲ್ಲಿರುವ ಆಸ್ತಿ ಎಷ್ಟು ಕೋಟಿ ಗೊತ್ತೇ?
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಅರೆಸ್ಟ್ ಆದಾಗ ಪತಿಗಾಗಿ ಕಂಡ ದೇವರಿಗೆಲ್ಲ ಮೊರೆ ಹೋಗುತ್ತಿದ್ದರು ಪತ್ನಿ ವಿಜಯಲಕ್ಷ್ಮಿ. ಪತಿಯ ಮೇಲಿದ್ದ ಬಹುದೊಡ್ಡ ಆರೋಪವನ್ನೂ ಲೆಕ್ಕಿಸದೇ ದರ್ಶನ್‌ರನ್ನು ಹೊರತರಲು ಪರದಾಡಿದರು. ಕೊನೆಗೂ ಅದರಲ್ಲಿ ಯಶಸ್ವಿಯಾದರು.
ದರ್ಶನ್ ಜೈಲು ಸೇರಿದ್ದ ವೇಳೆ ಸೋಶಿಯಲ್ ಮೀಡಿಯಾದಿಂದ ದೂರ ಉಳಿದಿದ್ದ ವಿಜಯಲಕ್ಷ್ಮಿ ಈಗ ಮತ್ತೆ ಆ್ಯಕ್ಟಿವ್ ಆಗಿದ್ದಾರೆ. ಸದ್ಯ ಸೆಲೆಬ್ರೇಷನ್ ಮೂಡ್‌ನಲ್ಲಿದ್ದಾರೆ. ವಿಜಯಲಕ್ಷ್ಮಿ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ.
ವಿಜಯಲಕ್ಷ್ಮಿ ಬರ್ತ್ ಡೇ ಸೆಲಿಬ್ರೇಟ್ ಮಾಡಿಕೊಂಡಿದ್ದಾರೆ. ಹಾರ್ಡ್ ಬಲೂನ್ ಮತ್ತು ಕೇಕ್ ಜೊತೆಗೆ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಈ ಬೆನ್ನಲ್ಲೇ ವಿಜಯಲಕ್ಷ್ಮಿ ದರ್ಶನ್ ಅವರ ಹೆಸರಿನಲ್ಲಿರುವ ಒಟ್ಟು ಆಸ್ತಿ ಎಷ್ಟು ಎಂಬ ಚರ್ಚೆ ನಡೆಯುತ್ತಿದೆ.
ವಿಜಯಲಕ್ಷ್ಮಿ ದರ್ಶನ್ ಕೆಮಿಕಲ್ ಇಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. ವಿಜಯಲಕ್ಷ್ಮಿ ದರ್ಶನ್ ಮೈ ಫ್ರೆಶ್ ಬಾಸ್ಕೆಟ್ ಸಹ-ಸಂಸ್ಥಾಪಕರಾಗಿದ್ದಾರೆ. 2020 ರಲ್ಲಿ ಮೈ ಫ್ರೆಶ್ ಬಾಸ್ಕೆಟ್ ಎಂಬ ವ್ಯಾಪಾರವನ್ನು ಆರಂಬಿಸಿದರು. ಇದನ್ನು ತಮ್ಮ ಸ್ನೇಹಿತೆಯರ ಜೊತೆ ಸೇರಿ ಆರಂಭಿಸಿದರು.
ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಐಷಾರಾಮಿ ಕಾರುಗಳಿಗೆ ಮಾಲೀಕರಾಗಿದ್ದಾರೆ. ಅವರ ಬಳಿ ಆಡಿ ಹಾಗೂ ಬಿಎಂಡಬ್ಲ್ಯೂ ಕಾರುಗಳಿವೆ. 67 ರಿಂದ 84 ಲಕ್ಷ ರೂಪಾಯಿ ಬೆಲೆ ಬಾಳುವ ರೇಂಜ್ ರೋವರ್ ಇವೊಕ್ ಕಾರು ಕೂಡ ಇದೆ.
ನಟ ದರ್ಶನ್ ಹೆಸರಿನಲ್ಲಿರುವ ಒಟ್ಟು ಆಸ್ತಿ 120 ಕೋಟಿ ಎಂದು ಹೇಳಲಾಗುತ್ತದೆ. ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹೆಸರಿನಲ್ಲಿ 30 ರಿಂದ 35 ಕೋಟಿ ವರೆಗೆ ಆಸ್ತಿ ಇರಬಹುದು ಎಂದು ಅಂದಾಜಿಸಬಹುದು. (ಇದು ಸೋಷಿಯಲ್ ಮೀಡಿಯಾ ಮತ್ತು ಕೆಲವು ಲೆಕ್ಕಾಚಾರಗಳನ್ನು ಆಧರಿಸಿ ಬರೆದಿದ್ದು, ಅಧಿಕೃತ ಮಾಹಿತಿಯಲ್ಲ.)