Most Expensive Tooth: ಜಗತ್ತಿನ ಶ್ರೇಷ್ಠ ವಿಜ್ಞಾನಿ ಸರ್ ಐಸಾಕ್ ನ್ಯೂಟನ್ ಅವರ ಹಲ್ಲೊಂದು ಬರೋಬ್ಬರಿ 30 ಲಕ್ಷ ರೂ. ಬೆಲೆ ಬಾಳುತ್ತದೆ. 1816ರಲ್ಲಿ ನ್ಯೂಟನ್ ಅವರ ಹಲ್ಲುಗಳಲ್ಲಿ ಒಂದನ್ನು ಲಂಡನ್ನಲ್ಲಿ 3,633 ಅಮೆರಿಕನ್ ಡಾಲರ್ಗೆ ಮಾರಾಟ ಮಾಡಲಾಯಿಗಿತ್ತು.
Newton's Tooth: ಪುರಾತನ ಹಾಗೂ ವಿಶೇಷ ವಸ್ತುಗಳಿಗೆ ಬೆಲೆ ಜಾಸ್ತಿ. ಈ ಅಪರೂಪದ ವಸ್ತುಗಳು ಹರಾಜಿನಲ್ಲಿ ಕೋಟಿ ಕೋಟಿ ಬೆಲೆಗೆ ಮಾರಾಟವಾಗುತ್ತವೆ. ಕೆಲವು ವಸ್ತುಗಳಿಗೆ ಬೆಲೆ ಕಟ್ಟಲು ಸಾಧ್ಯವಾಗುವುದಿಲ್ಲ. ಇಂದಿಗೂ ಸಹ ಕೋಟಿ ಕೋಟಿ ಕೊಟ್ಟು ಪುರಾತನ ವಸ್ತುಗಳನ್ನು ಖರೀದಿಸುವವರು ಇದ್ದಾರೆ. ಇಂದು ನಾವು ಅಂತಹ ಒಂದು ವಿಶೇಷ ವಸ್ತುವಿನ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ನೀವು ಎಂದಾದರೂ ವಿಶ್ವದ ಅತ್ಯಂತ ದುಬಾರಿ ಮಾನವ ಹಲ್ಲಿನ ಬಗ್ಗೆ ಕೇಳಿದ್ದೀರಾ? ಈ ವಿಶೇಷ ಹಲ್ಲು ಬರೋಬ್ಬರೀ 30 ಲಕ್ಷ ರೂ. ಬೆಲೆಗೆ ಮಾರಾಟವಾಗಿದೆ. ಸದ್ಯ ಇದು ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಇದು ಯಾರ ಹಲ್ಲು..? ಇದಕ್ಕೆ ಏಕೆ ಇಷ್ಟೊಂದು ಬೆಲೆ..? ಇದೆಲ್ಲದರ ಮಾಹಿತಿ ಇಲ್ಲಿದೆ ನೋಡಿ...
ಜಗತ್ತಿನ ಶ್ರೇಷ್ಠ ವಿಜ್ಞಾನಿ ಯಾರು ಅಂತಾ ಕೇಳಿದ್ರೆ ತಟ್ಟನೇ ಸರ್ ಐಸಾಕ್ ನ್ಯೂಟನ್ ಅವರ ಹೆಸರು ನೆನಪಿಗೆ ಬರುತ್ತದೆ. ಇವರ ಆ್ಯಪಲ್ ಅಂದರೆ ಸೇಬಿನ ಕಥೆಯನ್ನ ಎಂದಿಗೂ ಮರೆಯಲು ಸಾಧ್ಯವಿಲ್ಲ. ಒಂದೇ ಒಂದು ಸೇಬು ಮರದಿಂದ ಬಿದ್ದಿದ್ದನ್ನು ಕಂಡು ಭೂಮಿಯ ಗುರುತ್ವಾಕಷ೯ಣ ಶಕ್ತಿ ಹೇಗೆ ಕೆಲಸ ಮಾಡುತ್ತದೆ ಅನ್ನೋದರ ಬಗ್ಗೆ ಈ ವಿಜ್ಞಾನಿ ಜಗತ್ತಿಗೆ ತಿಳಿಸಿದರು.
ಸರ್ ಐಸಾಕ್ ನ್ಯೂಟನ್ ಅವರು 1726ರಲ್ಲಿ ನಿಧನರಾದರು. 1816ರಲ್ಲಿ ನ್ಯೂಟನ್ ಅವರ ಹಲ್ಲುಗಳಲ್ಲಿ ಒಂದನ್ನು ಲಂಡನ್ನಲ್ಲಿ 3,633 ಅಮೆರಿಕನ್ ಡಾಲರ್ಗೆ ಮಾರಾಟ ಮಾಡಲಾಯಿತು. ಇದು ಇಂದು 35,700 ಅಮೆರಿಕನ್ ಡಾಲರ್ಗೆ (ಅಂದಾಜು 30 ಲಕ್ಷ ರೂ.) ಸಮನಾಗಿದೆ.
ಐಸಾಕ್ ನ್ಯೂಟನ್ ಅವರ ಈ ಹಲ್ಲು ಇದುವರೆಗೆ ಮಾರಾಟವಾದ ʼಅತ್ಯಂತ ದುಬಾರಿ ಹಲ್ಲುʼ ಎಂಬ ಗಿನ್ನೆಸ್ ವಿಶ್ವ ದಾಖಲೆಗಳಿಂದ ಅಧಿಕೃತವಾಗಿ ಗುರುತಿಸಲ್ಪಟ್ಟಿದೆ. ಈ ಹಲ್ಲನ್ನು ಉಂಗುರದ ಮೇಲೆ ಮುತ್ತಿನಂತೆ ಇರಿಸಲಾಗಿದೆ. ಇದರ ಫೋಟೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿದೆ.