Swapna Shastra: ನಿಮ್ಮ ಕನಸಿನಲ್ಲಿ ಸಾವು ಅಥವಾ ಮೃತದೇಹವನ್ನ ಕಂಡ್ರೆ ಏನರ್ಥ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

Swapna Shastra: ಪ್ರತಿಯೊಬ್ಬರೂ ಕನಸು ಕಾಣುತ್ತಾರೆ, ಮಲಗುವಾಗ ಕನಸು ಕಾಣುವುದು ಸಾಮಾನ್ಯ. ಆದರೆ ಪ್ರತಿ ಕನಸಿಗೆ ಕೆಲವು ಅರ್ಥಗಳಿವೆ. ಪ್ರತಿಯೊಂದು ಕನಸು ಸಹ ನಿಮ್ಮ ಭವಿಷ್ಯದ ಬಗ್ಗೆ ಏನನ್ನಾದರೂ ಹೇಳುತ್ತವೆ. ಮಲಗಿದಾಗ ನಾವು ಕಾಣುವ ಕನಸುಗಳು ತುಂಬಾ ಒಳ್ಳೆಯದಾದರೂ ಕೆಲವು ಕೆಟ್ಟ ಕನಸುಗಳು ದಿನವಿಡೀ ನಮ್ಮ ಮನಸ್ಸಿನಲ್ಲಿ ಉಳಿದು ನಮ್ಮನ್ನು ಕಾಡುತ್ತವೆ.

Kannada Swapna Shastra: ನಮಗೆ ಪ್ರತಿರಾತ್ರಿ ಮಲಗಿದಾಗ ಬೀಳುವ ಪ್ರತಿ ಕನಸಿನ ಅರ್ಥವನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಸ್ವಪ್ನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಕಾಣುವ ವಿಷಯಗಳು, ವಸ್ತುಗಳು ನಮಗೆ ಮುಂಬರುವ ಭವಿಷ್ಯದ ಬಗ್ಗೆ ಸೂಚನೆ ನೀಡುತ್ತವೆಂದು ಹೇಳುತ್ತದೆ. ನಿಮ್ಮ ಕನಸಿನಲ್ಲಿ ನೀವು ಏನಾದರೂ ವಸ್ತುವನ್ನ ನೋಡಿದರೆ, ಅದು ಸಹ ಒಂದು ಪ್ರಮುಖ ಸಂಕೇತವಾಗಿರುತ್ತದೆ. ಕನಸಿನಲ್ಲಿ ಸಾವು ಅಥವಾ ಮೃತದೇಹವನ್ನು ಕಂಡರೆ ಅದರ ಅರ್ಥವೇನೆಂದು ತಿಳಿಯಿರಿ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ಪ್ರತಿಯೊಬ್ಬರೂ ರಾತ್ರಿ ಮಲಗಿದಾಗ ಕನಸುಗಳನ್ನ ಕಾಣುತ್ತಾರೆ. ಮಲಗುವಾಗ ಕನಸು ಕಾಣುವುದು ಸಾಮಾನ್ಯ. ಆದರೆ ಪ್ರತಿ ಕನಸಿಗೂ ಕೆಲವು ಅರ್ಥಗಳಿರುತ್ತವೆ. ಪ್ರತಿಯೊಂದು ಕನಸು ಸಹ ನಿಮ್ಮ ಭವಿಷ್ಯದ ಬಗ್ಗೆ ಏನನ್ನಾದರೂ ಹೇಳುತ್ತವೆ ಎಂದು ನಂಬಲಾಗಿದೆ. ಮಲಗಿದಾಗ ನಾವು ಕಾಣುವ ಕನಸುಗಳು ತುಂಬಾ ಒಳ್ಳೆಯದಾದರೂ ಕೆಲವು ಕೆಟ್ಟ ಕನಸುಗಳು ದಿನವಿಡೀ ನಮ್ಮ ಮನಸ್ಸಿನಲ್ಲಿ ಉಳಿದು ನಮ್ಮನ್ನು ಇನ್ನಿಲ್ಲದಂತೆ ಕಾಡುತ್ತವೆ.

2 /5

ಕನಸಿನ ವಿಜ್ಞಾನದ ಪ್ರಕಾರ, ನಿಮ್ಮ ಕನಸಿನಲ್ಲಿ ನೀವು ಸತ್ತಂತೆ ಕಂಡರೆ, ಅದು ಶುಭ ಸಂಕೇತವಾಗಿದೆ. ನಿಮ್ಮ ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಗಳು ಶೀಘ್ರವೇ ಕೊನೆಗೊಳ್ಳಲಿವೆ ಎಂದರ್ಥ. ಈ ಕನಸು ಭವಿಷ್ಯದಲ್ಲಿ ನಿಮಗೆ ದೊಡ್ಡ ಯಶಸ್ಸು ಸಿಗಲಿದೆ ಎಂಬುದನ್ನು ಸೂಚಿಸುತ್ತದೆ.

3 /5

ನಿಮ್ಮ ಕನಸಿನಲ್ಲಿ ಯಾರಾದರೂ ಈಗಾಗಲೇ ಸತ್ತಿದ್ದರೆ, ಅದು ಒಳ್ಳೆಯ ಮತ್ತು ಮಂಗಳಕರ ಸಂಕೇತವಾಗಿದೆ. ಈ ಕನಸಿನ ಅರ್ಥವೇನೆಂದರೆ ನಿಮ್ಮ ಕೆಲವು ಹಳೆಯ ಆಸೆಗಳು ಶೀಘ್ರದಲ್ಲೇ ಈಡೇರಲಿವೆ. ಮುಂಬರುವ ದಿನಗಳಲ್ಲಿ ನೀವು ಜೀವನದಲ್ಲಿ ಅಪಾರ ಯಶಸ್ಸನ್ನು ಪಡೆಯುತ್ತೀರಿ ಎಂದರ್ಥ.

4 /5

ನಿಮ್ಮ ಕನಸಿನಲ್ಲಿ ಯಾರಾದರೂ ಆತ್ಮೀಯ ಅಥವಾ ವಿಶೇಷ ವ್ಯಕ್ತಿಯ ಮೃತದೇಹ ನೋಡಿದರೆ, ಅದು ಶುಭ ಮತ್ತು ಅಶುಭ ಎರಡೂ ಆಗಿರಬಹುದು. ಏಕೆಂದರೆ ನೀವು ಯಾವ ಸಮಯದಲ್ಲಿ ಈ ಕನಸು ಕಂಡಿದ್ದೀರಿ ಎಂಬುದರ ಮೇಲೆ ಅದು ನಿರ್ಧಾರವಾಗುತ್ತದೆ. ಬ್ರಾಹ್ಮಿ ಮುಹೂರ್ತದ ಸಮಯದಲ್ಲಿ ನಿಮ್ಮ ಕನಸಿನಲ್ಲಿ ಪ್ರೀತಿ-ಪಾತ್ರರ ಮೃತದೇಹವನ್ನು ನೀವು ಕಂಡಿದ್ದರೆ, ಈ ಕನಸು ಅಶುಭ. ಇದರರ್ಥ ಆ ವ್ಯಕ್ತಿಯು ಶೀಘ್ರದಲ್ಲೇ ಸಾವನ್ನಪ್ಪುತ್ತಾನೆಂದು ಅರ್ಥ. ಮತ್ತೊಂದೆಡೆ ಈ ಕನಸು ಮಧ್ಯರಾತ್ರಿಯಲ್ಲಿ ಬಂದರೆ ಆ ವ್ಯಕ್ತಿಯು ದೀರ್ಘಾಯುಷ್ಯವನ್ನು ಹೊಂದಿರುತ್ತಾನೆ ಎಂದರ್ಥ.

5 /5

ಸ್ವಪ್ನಶಾಸ್ತ್ರದ ಪ್ರಕಾರ, ಮೃತ ಬಂಧುಗಳು ಕನಸಿನಲ್ಲಿ ಕಂಡರೆ ಅದು ಕೂಡ ಅಶುಭ ಕನಸು. ಏಕೆಂದರೆ ನಾವು ಕಷ್ಟದಲ್ಲಿದ್ದಾಗ ಮಾತ್ರ ಸತ್ತ ಸಂಬಂಧಿಕರು ಕನಸಿನಲ್ಲಿ ಬರುತ್ತಾರೆ. ಏಕೆಂದರೆ ಮನೆಯವರು ಅಸಮಾಧಾನವಾಗಿರುವುದನ್ನು ನೋಡಿದ ನಂತರವೂ ಅವರು ತನ್ನ ಕನಸಿನಲ್ಲಿ ಸಂಕೇತಗಳನ್ನು ನೀಡುತ್ತಾನೆ. ಅಂದರೆ ಮುಂದಿನ ದಿನಗಳಲ್ಲಿ ನಿಮ್ಮ ಕುಟುಂಬದಲ್ಲಿ ಇನ್ನಷ್ಟು ಸಮಸ್ಯೆಗಳು ಎದುರಾಗಬಹುದು ಎಂದರ್ಥ.