ಮಹಾಶಿವರಾತ್ರಿಯಂದು ಅಪ್ಪಿತಪ್ಪಿಯೂ ಶಿವಲಿಂಗಕ್ಕೆ ಈ 5 ವಸ್ತುಗಳನ್ನು ಅರ್ಪಿಸಬಾರದು !ಕೆಟ್ಟ ದಿನಗಳು ಅಲ್ಲಿಂದಲೇ ಶುರುವಾಗುವುದು

ಮಹಾಶಿವರಾತ್ರಿಯಂದು ಭಕ್ತರು ಶಿವಲಿಂಗಕ್ಕೆ ಅನೇಕ ವಸ್ತುಗಳನ್ನು ಅರ್ಪಿಸುತ್ತಾರೆ.  ಆದರೆ ಮಹಾಶಿವರಾತ್ರಿಯ ದಿನದಂದು ಶಿವಲಿಂಗದ ಮೇಲೆ ಯಾವ 5 ವಸ್ತುಗಳನ್ನು ಯಾವುದೇ ಕಾರಣಕ್ಕೂ ಅರ್ಪಿಸಬಾರದು.  

Mahashivratri 2025: ಶಿವನು ತನ್ನ ಭಕ್ತರ ಭಕ್ತಿಗೆ ಮೆಚ್ಚಿ ಅವರಿಗೆ ಬೇಕಾದ ವರವನ್ನು ನೀಡುತ್ತಾನೆ. ಭಕ್ತರ ಭಕ್ತಿಗೆ ಅತ್ಯಂತ ಬೇಗೆ ಪ್ರಸನ್ನನಾಗುವ ದೇವ ಎಂದರೆ ಅದು ಮಹಾದೇವ. ಇದೇ ಕಾರಣಕ್ಕೆ ಅವನನ್ನು ಭೋಲೇನಾಥ ಎಂದು ಕರೆಯಲಾಗುತ್ತದೆ. ಫಾಲ್ಗುಣ ಮಾಸವು ಶಿವನ ಪೂಜೆಗೆ ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಏಕೆಂದರೆ ಈ ತಿಂಗಳಲ್ಲಿ ಬರುವ ಮಹಾಶಿವರಾತ್ರಿಯನ್ನು ಶಿವನನ್ನು ಮೆಚ್ಚಿಸಲು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

ಮಹಾಶಿವರಾತ್ರಿಯಂದು ಭಕ್ತರು ಶಿವಲಿಂಗಕ್ಕೆ ಅನೇಕ ವಸ್ತುಗಳನ್ನು ಅರ್ಪಿಸುತ್ತಾರೆ.  ಆದರೆ ಮಹಾಶಿವರಾತ್ರಿಯ ದಿನದಂದು ಶಿವಲಿಂಗದ ಮೇಲೆ ಯಾವ 5 ವಸ್ತುಗಳನ್ನು ಯಾವುದೇ ಕಾರಣಕ್ಕೂ ಅರ್ಪಿಸಬಾರದು.    

2 /7

ಅರಿಶಿನ : ಶುಭ ಕಾರ್ಯಗಳಲ್ಲಿ ಅರಿಶಿನವನ್ನು ಬಳಸುವುದು ಶುಭವೆಂದು ಪರಿಗಣಿಸಲಾಗಿದೆ. ಏಕೆಂದರೆ ಇದನ್ನು ಶುದ್ಧತೆಯ ಸಂಕೇತವೆಂದು ಹೇಳಲಾಗುತ್ತದೆ. ಆದರೆ ಮಹಾಶಿವರಾತ್ರಿಯ ದಿನದಂದು ಶಿವಲಿಂಗಕ್ಕೆ ಅರಿಶಿನವನ್ನು ಅರ್ಪಿಸುವಂತಿಲ್ಲ.

3 /7

ಕುಂಕುಮ :ಪ್ರಾಚೀನ ನಂಬಿಕೆಗಳ ಪ್ರಕಾರ, ಶಿವನಿಗೆ ಕುಂಕುಮವನ್ನು ಅರ್ಪಿಸಬಾರದು.  ಶಿವನು ಭೂಮಿಯ ಮೇಲೆ ಯೋಗ ಭಂಗಿಯಲ್ಲಿ ವಾಸಿಸುತ್ತಾನೆ. ಕುಂಕುಮವನ್ನು  ಅಲಂಕಾರಕ್ಕಾಗಿ ಬಳಸಲಾಗುತ್ತದೆ ಎನ್ನುವುದು ನಂಬಿಕೆ. ಅದಕ್ಕಾಗಿಯೇ ಶಿವಲಿಂಗದ ಮೇಲೆ ಕುಂಕುಮವನ್ನು ಎಂದಿಗೂ ಅರ್ಪಿಸಬಾರದು.  

4 /7

ಮುರಿದುಹೋದ ಅಕ್ಕಿಕಾಳು : ಶಿವನ ಪೂಜೆಯಲ್ಲಿ ಅಕ್ಕಿ ಕಾಳುಗಳಿಗೆ ವಿಶೇಷ ಮಹತ್ವವಿದ್ದರೂ, ಮಹಾಶಿವರಾತ್ರಿಯ ದಿನದಂದು ಶಿವಲಿಂಗದ ಮೇಲೆ ಮುರಿದ ಅಕ್ಕಿ ಕಾಳುಗಳನ್ನು ಅರ್ಪಿಸಬಾರದು.

5 /7

ತೆಂಗಿನಕಾಯಿ :ಧಾರ್ಮಿಕ ನಂಬಿಕೆಗಳ ಪ್ರಕಾರ, ಮಹಾಶಿವರಾತ್ರಿಯ ದಿನದಂದು ಶಿವಲಿಂಗಕ್ಕೆ ತೆಂಗಿನಕಾಯಿ ಅಥವಾ ತೆಂಗಿನ ನೀರನ್ನು ಅರ್ಪಿಸಬಾರದು. ತೆಂಗಿನಕಾಯಿಯನ್ನು ಲಕ್ಷ್ಮಿ ದೇವಿಯ ಒಂದು ರೂಪವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಶಿವಲಿಂಗದ ಮೇಲೆ ತೆಂಗಿನಕಾಯಿಯನ್ನು ಅರ್ಪಿಸಬಾರದು.  

6 /7

ತುಳಸಿ :ಮಹಾಶಿವರಾತ್ರಿಯ ದಿನದಂದು, ಅಪ್ಪಿತಪ್ಪಿಯೂ ಶಿವಲಿಂಗದ ಮೇಲೆ ತುಳಸಿ ಎಲೆಗಳನ್ನು ಅರ್ಪಿಸಬಾರದು. ತುಳಸಿಯ ಪತಿ ಜಲಂಧರನನ್ನು ಶಿವನು ಕೊಂದನೆಂದು ಹೇಳುತ್ತದೆ ಪುರಾಣ. ಅಲ್ಲದೆ ತುಳಸಿ ಲಕ್ಷ್ಮಿ ದೇವಿಯ ರೂಪ. ಆದ್ದರಿಂದ ಶಿವಲಿಂಗಕ್ಕೆ ತುಳಸಿ ಅರ್ಪಿಸುವುದು ತಪ್ಪು. 

7 /7

ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE KANNADA NEWS ಇದನ್ನು ದೃಢೀಕರಿಸುವುದಿಲ್ಲ.