Dr Puneeth Rajkumar net worth: ಕರುನಾಡಿನ ನೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ವಿಧಿಯಾಟಕ್ಕೆ ಬಲಿಯಾಗಿ ಮೂರು ವರುಷಗಳೇ ಕಳೆದಿದೆ. ದೈಹಿಕವಾಗಿ ಅಗಲಿದರೂ ಕೋಟ್ಯಾಂತರ ಅಭಿಮಾನಗಳ ಮನದಲ್ಲಿ ಇಂದಿಗೂ ಅಪ್ಪು ಅಜರಾಮರ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕರುನಾಡಿನ ನೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ವಿಧಿಯಾಟಕ್ಕೆ ಬಲಿಯಾಗಿ ಮೂರು ವರುಷಗಳೇ ಕಳೆದಿದೆ. ದೈಹಿಕವಾಗಿ ಅಗಲಿದರೂ ಕೋಟ್ಯಾಂತರ ಅಭಿಮಾನಗಳ ಮನದಲ್ಲಿ ಇಂದಿಗೂ ಅಪ್ಪು ಅಜರಾಮರ.
ಇಂದಿಗೂ ಕೂಡ ಪುನೀತ್ ಸಾವನ್ನು ಅರಗಿಸಿಕೊಳ್ಳಲು ಅದೆಷ್ಟೋ ಅಭಿಮಾನಿಗಳಿಂದ ಸಾಧ್ಯವಾಗುತ್ತಿಲ್ಲ. ಬದುಕಿದ್ದಷ್ಟೂ ದಿನ ಪರೋಪಕಾರದಿಂದಲೇ ಮನಗೆದ್ದಿದ್ದ ದೊಡ್ಮನೆ ಕುಡಿ ಪ್ರತಿಭೆಗಳ ಕಣಜವಾಗಿದ್ದರು ಎಂದರೆ ತಪ್ಪಾಗಲ್ಲ.
ನಟನೆ, ಡ್ಯಾನ್ಸ್ ಮೂಲಕ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ನೀಡುತ್ತಿದ್ದ ಅಪ್ಪು, ಅದೆಷ್ಟೋ ಬಡಕುಟುಂಬಗಳಿಗೆ ತಮ್ಮ ಸಮಾಜಮುಖಿ ಕೆಲಸಗಳಿಂದ ದಾರಿದೀಪವಾಗಿದ್ದು ಕೂಡ ಸುಳ್ಳಲ್ಲ.
ಇನ್ನು ಬದುಕಿದ್ದಷ್ಟೂ ದಿನ ಸಮಾಜಕ್ಕೆ ಒಳ್ಳೆಯದನ್ನೇ ಬಯಸಿದ್ದ, ಒಳ್ಳೆಯ ವ್ಯಕ್ತಿತ್ವವನ್ನೇ ರೂಢಿಸಿಕೊಂಡಿದ್ದ ನಟ ಪುನೀತ್ ರಾಜ್‌ಕುಮಾರ್ ಅವರ ಹೆಸರಲ್ಲಿದ್ದ ಒಟ್ಟು ಆಸ್ತಿ ಎಷ್ಟು? ಎಂಬ ವಿಚಾರದ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.
ಮಾಹಿತಿಯ ಪ್ರಕಾರ, ಪುನೀತ್ ತಾವು ದುಡಿದ ಹಣದಲ್ಲಿ ಅರ್ಧದಷ್ಟು ಹಣವನ್ನು ಸಮಾಜ ಸೇವೆಗೆಂದು ಮುಡಿಪಾಗಿಟ್ಟಿದ್ದರು. ವೃದ್ಧಾಶ್ರಮ, ಅನಾಥಾಶ್ರಮ ಮತ್ತು ಹೆಣ್ಣುಮಕ್ಕಳ ಶಿಕ್ಷಣ ಹಾಗೂ ಉದ್ಯೋಗಕ್ಕೆ ಅಂತೆಯೇ ಗೋಶಾಲೆಗಳಿಗೆ ವಿಶೇಷ ದಾನಗಳನ್ನು ನೀಡುತ್ತಿದ್ದರು. ಇದಷ್ಟೇ ಅಲ್ಲ, 1,800 ಹೆಣ್ಣು ಮಕ್ಕಳ ಶಿಕ್ಷಣದ ಖರ್ಚನ್ನು ಕೂಡ ಅಪ್ಪು ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಇದಕ್ಕಲ್ಲವೇ ಇಂದಿಗೂ ಅಪ್ಪು ಅವರನ್ನು ಕರುನಾಡು ದೇವರಂತೆ ಕಾಣುವುದು...
ಇನ್ನು ಪುನೀತ್ ಅವರು ಬೆಂಗಳೂರಿನ ಸದಾಶಿವನಗರದಲ್ಲಿ ಮನೆಯೊಂದನ್ನು ಕಟ್ಟಿಸಿದ್ದಾರೆ. ಅಂತೆಯೇ ತಮ್ಮ ತಂದೆ, ವರನಟ ಡಾ.ರಾಜಕುಮಾರ್ ಅವರ ಹುಟ್ಟೂರಾದ ಗಾಜಿನೂರಿನಲ್ಲಿಯೂ ಬಂಗಲೆ ನಿರ್ಮಿಸಿದ್ದಾರೆ. ಕಾರುಗಳ ಬಗ್ಗೆ ವಿಶೇಷ ಕ್ರೇಜ್ ಹೊಂದಿದ್ದ ಅಪ್ಪು, ಎರಡು ಲ್ಯಾಂಬೋರ್ಗಿನಿ, ವೋಲ್ವೋ & ಫಾರ್ಚುನರ್ ಕಾರುಗಳನ್ನು ಕೂಡ ಹೊಂದಿದ್ದರು. ಕೋಟಿಗಟ್ಟಲೆ ಬೆಲೆಬಾಳುವ ಬೈಕ್, ಪತ್ನಿ ಅಶ್ವಿನಿ ಅವರ ಬಳಿ 1KG ಚಿನ್ನ ಹೀಗೆ ಒಟ್ಟಾರೆ ನೂರು ಕೋಟಿಗೂ ಹೆಚ್ಚಿನ ಆಸ್ತಿಯನ್ನು ಸಂಪಾದಿಸಿದ್ದಾರೆ ಎನ್ನಲಾಗಿದೆ.
ಆದರೆ ಇವೆಲ್ಲದಕ್ಕೂ ಮೀರಿ ಅಪ್ಪು ಗಳಿಸಿದ್ದು ಕೋಟ್ಯಂತರ ಅಭಿಮಾನಿಗಳ ಅಭಿಮಾನವನ್ನು ಹಾಗೂ ಪ್ರೀತಿಯನ್ನು. ಆ ಅಭಿಮಾನ-ಪ್ರೀತಿಯೇ ಇಂದಿಗೂ ಅಪ್ಪು ನಮ್ಮೊಂದಿಗೆ ಇದ್ದಾರೆ ಎಂಬ ಭರವಸೆಯನ್ನು ತುಂಬುತ್ತಿರುವುದು.