ಜೈಲಿನಿಂದ ಬಿಡುಗಡೆ ನಂತರ ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಬಿದ್ದ ರಿಯಾ ಚಕ್ರವರ್ತಿ

ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಜೈಲು ಸೇರಿದ್ದ ನಟಿ ರಿಯಾ ಚಕ್ರವರ್ತಿ ಕಳೆದ ಸೆಪ್ಟೆಂಬರ್ ನಲ್ಲಿ ಜಾಮೀನು ಪಡೆದು ಬಿಡುಗಡೆಯಾಗಿದ್ದರು. ಬಿಡುಗಡೆಯಾದ ಇಷ್ಟು ದಿನಗಳ ಬಳಿಕ ಇದೇ ಮೊದಲ ಬಾರಿಗೆ ರಿಯಾ ಹೊರಗಡೆ ಕಾಣಿಸಿಕೊಂಡಿದ್ದಾರೆ. 
 

ಮುಂಬಯಿ : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (Sushanth Singh Rajputh) ಸಾವಿನ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ರಿಯಾ ಚಕ್ರವರ್ತಿ (Rhea Chakraborty) ಮತ್ತು ಅವರ ಸಹೋದರ ಶೋವಿಕ್ ಚಕ್ರವರ್ತಿ  ಜೈಲಿನಿಂದ ಬಿಡುಗಡೆಯಾದ ನಂತರ ಇದೇ ಮೊದಲ ಬಾರಿಗೆ ಹೊರಗಡೆ ಕಾಣಿಸಿಕೊಂಡಿದ್ದಾರೆ. ಭಾನುವಾರ, ರಿಯಾ ಚಕ್ರವರ್ತಿ ಮೊದಲ ಬಾರಿಗೆ ಮನೆಯಿಂದ ಹೊರ ಬಂದಿದ್ದಾರೆ. 2020ರಲ್ಲಿ ನಡೆದ ಘಟನೆಗಳನ್ನು ಮರೆತು ಹೊಸ ಜೀವನ ಆರಂಭಿಸಲು ರಿಯಾ ನಿರ್ಧರಿಸಿದ್ದಾರೆ. ಇದೀಗ ರಿಯಾ ಮತ್ತು ಅವರ ಸಹೋದರ ಶೋವಿಕ್ ಚಕ್ರವರ್ತಿ ಬಾಂದ್ರಾದಲ್ಲಿ ಮನೆಗಾಗಿ ಹುಡುಕಾಟ ಆರಂಭಿಸಿದ್ದಾರೆ. ಜೈಲಿನಿಂದ ಬಿಡುಗಡೆಯಾದ ನಂತರ ರಿಯಾ ಇದೇ ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. 

1 /4

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಜೈಲು ಸೇರಿದ್ದ ಬಳಿಕ ಬಿಡುಗಡೆಯಾದ ನಟಿ ರಿಯಾ ಚಕ್ರವರ್ತಿ  ಜೈಲಿನಿಂದ ಬಿಡುಗಡೆಯಾದ ನಂತರ ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ರಿಯಾ ಜೊತೆ ಅವರ ಸಹೋದರ ಶೋವಿಕ್ ಚಕ್ರವರ್ವತಿ ಕೂಡಾ ಇದ್ದರು.   

2 /4

ರಿಯಾ ಗುಲಾಬಿ ಬಣ್ಣದ ಟೀ ಶರ್ಟ್ ಧರಿಸಿರುವುದು ಕಂಡು ಬಂತು. ಇದರಲ್ಲಿ 'ಲವ್ ಈಸ್ ಪವರ್' ಎಂದು ಬರೆಯಲಾಗಿದೆ. ಇದರೊಂದಿಗೆ ಅವರು ಕಪ್ಪು ಪ್ಯಾಂಟ್ ಧರಿಸಿದ್ದರು. ಇನ್ನು ಶೋವಿಕ್ ಚಕ್ರವರ್ತಿ ಬಿಳಿ ಟೀ ಶರ್ಟ್, ಜೀನ್ಸ್ ಮತ್ತು ಕಪ್ಪು ಜಾಕೆಟ್ ಧರಿಸಿದ್ದರು.   

3 /4

ಇದೀಗ ಹಳೆಯ ಘಟನೆಗಳನ್ನು ಮರೆತು ಹೊಸ ಜೀವನ ನಡೆಸಲು ನಿರ್ಧರಿಸಿರುವ ನಟಿ ರಿಯಾ ಚಕ್ರವರ್ತಿ ಹೊಸ ಮನೆಯ ಹುಡುಕಾಟದಲ್ಲಿದ್ದಾರೆ. ತಮ್ಮ ಸಹೋದರನ ಜೊತೆ ಮನೆಗಾಗಿ ಹುಡುಕಾಟದಲ್ಲಿ ರಿಯಾ ನಿರತರಾಗಿದ್ದಾರೆ.  

4 /4

ಸುಶಾಂತ್ ಸಾವಿನ ನಂತರ ತನಿಖೆ ವೇಳೆ ಡ್ರಗ್ಸ್ ವಿಚಾರವೂ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ರಿಯಾ ಚಕ್ರವರ್ತಿಯನ್ನು ಬಂಧಿಸಲಾಗಿತ್ತು. ನಂತರ ಜಾಮೀನು ಪಡೆದು ಬಿಡುಗಡೆ ಹೊಂದಿದ್ದರು.