Organic Hair Dye: ಯಾವುದೇ ಹೇರ್ ಡೈ, ಕಲರ್ ಬಳಸದೆ ನೈಸರ್ಗಿಕವಾಗಿಯೂ ನಿಮ್ಮ ಕೂದಲನ್ನು ಕಡು ಕಪ್ಪಾಗಿಸಬಹುದು.
Natural Hair Dye: ಅಡುಗೆ ಮನೆಯಲ್ಲಿರುವ ಕೆಲವೇ ಕೆಲವು ಪದಾರ್ಥಗಳನ್ನು ಬಳಸಿ ನೀವು ಮನೆಯಲ್ಲಿಯೇ ಸುಲಭವಾಗಿ ನ್ಯಾಚುರಲ್ ಹೇರ್ ಡೈ ತಯಾರಿಸಬಹುದು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದೀರಾ... ಹಾಗಿದ್ದರೆ, ಮನೆಯಲ್ಲಿರುವ ಅಕ್ಕಿ, ಈರುಳ್ಳಿಯನ್ನು ಬಳಸಿ ನಿಮ್ಮ ಕೂದಲನ್ನು ಸುಲಭವಾಗಿ ಕಪ್ಪಾಗಿಸಬಹುದು.
ಬೆಳ್ಳಗಾಗಿರುವ ಕೂದಲನ್ನು ನ್ಯಾಚುರಲ್ ಆಗಿ ಕಪ್ಪಾಗಿಸಲು ಮನೆಯಲ್ಲೇ ಇರುವ ಪದಾರ್ಥಗಳನ್ನು ಬಳಸಿ ಸುಲಭವಾಗಿ ಆರ್ಗ್ಯಾನಿಕ್ ಹೇರ್ ಡೈ ತಯಾರಿಸಬಹುದು.
ಅಕ್ಕಿ ತೊಳೆದ ನೀರನ್ನು ಬಳಸಿ ನೀವು ಬಿಳಿ ಕೂದಲನ್ನು ಯಾವುದೇ ಅಡ್ಡಪರಿಣಾಮವಿಲ್ಲದೆ ಕಪ್ಪಾಗಿಸಬಹುದು.
ಒಂದು ಸ್ಪೂನ್ ಅಕ್ಕಿಗೆ ಮೂರ್ನಾಲ್ಕು ಸ್ಪೂನ್ ನೀರು ಹಾಕಿ ನೆನೆಸಿಡಿ. ಒಂದು ಸಣ್ಣ ಗಾತ್ರದ ಈರುಳ್ಳಿಯ ಸಿಪ್ಪೆ ತೆಗೆದು ಅದನ್ನು ತುರಿದು ಪೇಸ್ಟ್ ತಯಾರಿಸಿ. ಒಂದು ಶುದ್ಧ ಬಟ್ಟೆಯಿಂದ ತುರಿದ ಈರುಳ್ಳಿಯನ್ನು ಹಿಂಡಿ ರಸ ಬೇರ್ಪಡಿಸಿ.
ಮನೆಯಲ್ಲೇ ಆರ್ಗ್ಯಾನಿಕ್ ಹೇರ್ ಡೈ ತಯಾರಿಸಲು ಮೊದಲಿಗೆ 3 ಸ್ಪೂನ್ ನೆನೆಸಿಟ್ಟ ಅಕ್ಕಿ ನೀರನ್ನು ಒಂದು ಬಟ್ಟಲಿಗೆ ಹಾಕಿ, ಇದಕ್ಕೆ ಒಂದೂವರೆ ಚಮಚ ಈರುಳ್ಳಿ ರಸವನ್ನು ಹಾಕಿ ಎರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ 1 ಸ್ಪೂನ್ ಇನ್ಸ್ಟಾಂಟ್ ಕಾಫಿಪುಡಿ ಹಾಕಿ ಬೆರೆಸಿ. ಬಳಿಕ ಅರ್ಧದಿಂದ ಮುಕ್ಕಾಲು ಚಮಚದಷ್ಟು ಶಾಂಪೂ ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
ಈ ರೀತಿಯಾಗಿ ನೀವು ಮನೆಯಲ್ಲಿಯೇ ತಯಾರಿಸಿದ ಆರ್ಗ್ಯಾನಿಕ್ ಹೇರ್ ಡೈ ಅನ್ನು ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ. ಒಂದು ಗಂಟೆ ಬಿಟ್ಟು ತಲೆಗೆ ಸ್ನಾನ ಮಾಡಿ. ಕೇವಲ ನಾಲ್ಕೇ ವಾರದಲ್ಲಿ ನಿಮ್ಮ ಬೆಳ್ಳಗಾಗಿರುವ ಕೂದಲು ನೈಸರ್ಗಿಕವಾಗಿ ಗಾಢ ಕಪ್ಪಾಗುತ್ತದೆ. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.