Benefits of anjeer water: ಅಂಜೂರದ ಹಣ್ಣುಗಳು ಮಾತ್ರವಲ್ಲ, ಅದರ ನೀರನ್ನು ಕುಡಿಯುವುದರಿಂದಲೂ ಅಪಾರ ಆರೋಗ್ಯ ಪ್ರಯೋಜನಗಳಿವೆ. ಅಂಜೂರದ ನೀರಿನ ಸೇವನೆಯು ಹಲವಾರು ರೋಗಗಳಿಂದ ನಿಮ್ಮನ್ನು ದೂರವಿರಿಸುತ್ತದೆ.
Amazing benefits of anjeer water: ಗೋಡಂಬಿ, ಬಾದಾಮಿ, ವಾಲ್‌ನಟ್ಸ್ ಮತ್ತು ಒಣದ್ರಾಕ್ಷಿಗಳಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಇವುಗಳ ಹೊರತಾಗಿ ತುಂಬಾ ಪ್ರಯೋಜನಕಾರಿಯಾದ ಇನ್ನೊಂದು ಒಣ ಹಣ್ಣು ಇದೆ. ಅದುವೇ ಅಂಜೂರದ ಹಣ್ಣು... ಅಂಜೂರವನ್ನು ಹಣ್ಣಾಗಿ ಮತ್ತು ಒಣ ಹಣ್ಣಾಗಿ ಎರಡೂ ರೀತಿಯಲ್ಲಿ ಸೇವಿಸಲಾಗುತ್ತದೆ. ಆಯುರ್ವೇದದ ಪ್ರಕಾರ, ಅಂಜೂರದ ಹಣ್ಣುಗಳು ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಬಹಳ ಪರಿಣಾಮಕಾರಿ. ಇವುಗಳ ಅದ್ಭು ಲಾಭವನ್ನ ತಿಳಿದರೆ ನೀವು ಆಶ್ಚರ್ಯಪಡುತ್ತೀರಿ. ಅಂಜೂರದ ಹಣ್ಣುಗಳು ಮಾತ್ರವಲ್ಲ, ಅದರ ನೀರನ್ನು ಕುಡಿಯುವುದರಿಂದಲೂ ಅಪಾರ ಆರೋಗ್ಯ ಪ್ರಯೋಜನಗಳಿವೆ. ಅಂಜೂರದ ನೀರಿನ ಸೇವನೆಯು ಹಲವಾರು ರೋಗಗಳಿಂದ ನಿಮ್ಮನ್ನು ದೂರವಿರಿಸುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಅಂಜೂರದ ನೀರನ್ನು ಕುಡಿಯುವ ದೊಡ್ಡ ಪ್ರಯೋಜನವೆಂದರೆ ಅದು ರಕ್ತದೊತ್ತಡದ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ. ಇದರಲ್ಲಿರುವ ಒಮೆಗಾ 3 ಮತ್ತು ಒಮೆಗಾ 6 ಕೊಬ್ಬಿನಾಮ್ಲಗಳು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುತ್ತದೆ.
ಅಂಜೂರದ ನೀರಿನಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಕಂಡುಬರುತ್ತದೆ, ಆದ್ದರಿಂದ ಅಂಜೂರವು ಮೂಳೆಗಳಿಗೆ ಅತ್ಯುತ್ತಮವಾದ ಟಾನಿಕ್ ಆಗಿದೆ. ಇದು ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಕೀಲುಗಳನ್ನು ಆರೋಗ್ಯಕರವಾಗಿಡುತ್ತದೆ.
ಆಹಾರದಲ್ಲಿ ಅಂಜೂರದ ಹಣ್ಣುಗಳನ್ನು ಸೇರಿಸುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ನೆನೆಸಿದ ಅಂಜೂರದ ಹಣ್ಣುಗಳು ಮತ್ತು ಅದರ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಮಲಬದ್ಧತೆಯಿಂದ ಪರಿಹಾರವನ್ನು ನೀಡುತ್ತದೆ ಮತ್ತು ಇದು ವಿರೇಚಕ ಗುಣಗಳನ್ನು ಹೊಂದಿರುವುದರಿಂದ ಕರುಳಿನ ಚಲನೆಗೆ ಸಹಾಯ ಮಾಡುತ್ತದೆ. ಇದರಲ್ಲಿರುವ ನಾರುಗಳು ನೈಸರ್ಗಿಕ ಔಷಧಿಯಂತೆ ಕೆಲಸ ಮಾಡುತ್ತವೆ.
ಅಂಜೂರದ ಹಣ್ಣುಗಳನ್ನು ಸೇವಿಸುವುದರಿಂದ ಕರುಳಿನ ಊತದಿಂದ ಪರಿಹಾರ ದೊರೆಯುತ್ತದೆ. ಇದಲ್ಲದೆ ರಕ್ತಹೀನತೆ ದೂರವಾಗುತ್ತದೆ ಮತ್ತು ಶ್ವಾಸಕೋಶಗಳು ಬಲಗೊಳ್ಳುತ್ತವೆ.
2 ರಿಂದ 3 ಅಂಜೂರದ ಹಣ್ಣುಗಳನ್ನು ತುಂಡುಗಳಾಗಿ ಕತ್ತರಿಸಿ ನೀರಿನಲ್ಲಿ ನೆನೆಸಿ. ಬೆಳಗ್ಗೆ ಆ ನೀರನ್ನು ಕುದಿಸಿ ಅರ್ಧಕ್ಕೆ ಇಳಿಸಿ ಕುಡಿಯಿರಿ. ಕುಡಿದ ನಂತರ ಉಳಿದ ಅಂಜೂರದ ಹಣ್ಣುಗಳನ್ನು ಜಗಿದು ತಿನ್ನಿರಿ. ಆರೋಗ್ಯವಂತ ವ್ಯಕ್ತಿಯು ದಿನಕ್ಕೆ ಎರಡು ಅಥವಾ ಮೂರು ಅಂಜೂರದ ಹಣ್ಣುಗಳನ್ನು ಸೇವಿಸಬೇಕು.