New year 2025 predictions : 2024 ವರ್ಷ ಇನ್ನೇನು ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳುತ್ತದೆ. ಈ ವರ್ಷ ಅನೇಕ ಜನರ ಬಾಳಲ್ಲಿ ಸಂತೋಷ ಮತ್ತು ದುಃಖ ನೀಡಿದೆ. ಆ ಮೂಲಕ ಹೊಸ ವರ್ಷ ಕೆಲವರಿಗೆ ಅದೃಷ್ಟದ ವರ್ಷವಾಗಲಿದೆ ಎಂದು ಭವಿಷ್ಯ ಸಂಖ್ಯಾಶಾಸ್ತ್ರ ಹೇಳುತ್ತದೆ. ಆದ್ದರಿಂದ ಈ ದಿನಾಂಕಗಳಲ್ಲಿ ಜನಿಸಿದವರಿಗೆ ಮುಂಬರುವ ವರ್ಷ 2025 ಅತ್ಯುತ್ತಮ ವರ್ಷವಾಗಿರಲಿದೆ.
ಪ್ರಪಂಚದ ಜನರು 2025 ಹೊಸ ವರ್ಷವನ್ನು (Happy New Year 2025) ಸ್ವಾಗತಿಸಲು ಸಜ್ಜಾಗಿದ್ದಾರೆ. ಅದೇ ರೀತಿ ಸಂಖ್ಯಾ ಶಾಸ್ತ್ರದ ಪ್ರಕಾರ, 2025 ರಲ್ಲಿ ಕೆಲವು ದಿನಾಂಕಗಳಲ್ಲಿ ಜನಿಸಿದವರಿಗೆ ಅದೃಷ್ಟವು ಕಾಯುತ್ತಿದೆ. ಅಲ್ಲದೆ ಮಂಗಳನ ಅಧಿಪತ್ಯದಿಂದಾಗಿ ಬರುವ ವರ್ಷದಲ್ಲಿ ನಿರ್ದಿಷ್ಟ ದಿನಾಂಕಗಳಲ್ಲಿ ಜನಿಸಿದವರ ಜೀವನವು ತುಂಬಾ ಅದೃಷ್ಟ ಮತ್ತು ಉತ್ತಮವಾಗಿರಲಿದೆ.
ಸಂಖ್ಯಾಶಾಸ್ತ್ರದಲ್ಲಿ 1 ರಿಂದ 9 ರವರೆ ಸಂಖ್ಯೆಗಳು ಮಾತ್ರ ಇವೆ. ಅದರಂತೆ, ವ್ಯಕ್ತಿಯ ಜನ್ಮ ದಿನಾಂಕವು ಎರಡು ಅಂಕೆಗಳಲ್ಲಿದ್ದರೆ, ಅವು ಎರಡನ್ನು ಕೂಡಿಸಿ ಮೊತ್ತವನ್ನು ಲೆಕ್ಕ ಹಾಕಬೇಕು. ಅದರಂತೆ, 2025 ರಲ್ಲಿ ಯಾವ ದಿನಾಂಕದಂದು ಜನಿಸಿದವರು ಮಂಗಳನ ಆಳ್ವಿಕೆಯಿಂದ ಅದೃಷ್ಟವನ್ನು ಪಡೆಯುತ್ತಾರೆ. (ಉದಾರಣಹೆಗೆ ನಿಮ್ಮ ಜನ್ಮ ದಿನಾಂಕ 15 ಆಗಿದ್ರೆ 1+5 ಅನ್ನು ಕೂಡಿಸಿ 6 ಆಗುತ್ತದೆ.. 6 ನಿಮ್ಮ ಸಂಖ್ಯೆ..)
ಸಂಖ್ಯೆ 4: ಒಂದು ತಿಂಗಳಲ್ಲಿ 4, 13, 22, 31 ರಂದು ಜನಿಸಿದವರ ಮೊತ್ತ ನಾಲ್ಕು. ಆದ್ದರಿಂದ ಈ ದಿನಾಂಕಗಳಲ್ಲಿ ಜನಿಸಿದವರಿಗೆ 2025 ವರ್ಷವು ಮಂಗಳಕರವಾಗಿರುತ್ತದೆ. ಸಂಖ್ಯೆ 4 ರ ಅಧಿಪತಿ ರಾಹು. ರಾಹುವಿನ ಕಾರಣದಿಂದ ಈ ದಿನಾಂಕದಲ್ಲಿ ಜನಿಸಿದವರು 2024ರಲ್ಲಿ ಕೆಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದರೆ ಮುಂಬರುವ ವರ್ಷ 2025 ಇರವರಿಗೆ ಯಶಸ್ಸನ್ನು ತರುತ್ತದೆ.
ವ್ಯಾಪಾರ ಮಾಡುವವರಿಗೆ ಲಾಭ ದ್ವಿಗುಣವಾಗಲಿದೆ. ನಿಮ್ಮ ಎಲ್ಲಾ ಕನಸುಗಳು ನನಸಾಗುತ್ತವೆ. ನಿಮ್ಮ ಜೀವನವು ಸಿಹಿ ಮತ್ತು ಸಂತೋಷದಿಂದ ಕೂಡಿರುತ್ತದೆ. ನೀವು ಕುಟುಂಬದ ಸದಸ್ಯರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ಜೀವನ ಸಂಗಾತಿಯೊಂದಿಗಿನ ಸಂಬಂಧವು ಸಂತೋಷ ಮತ್ತು ಆಹ್ಲಾದಕರವಾಗಿರುತ್ತದೆ.
ಸಂಖ್ಯೆ 6: ಪ್ರತಿ ತಿಂಗಳು 6, 15, 24 ರಂದು ಜನಿಸಿದವರ ಮೊತ್ತ ಆರು. ಇವರಿಗೆ ಮುಂಬರುವ 2025 ಅತ್ಯಂತ ಅದೃಷ್ಟದ ವರ್ಷವಾಗಲಿದೆ. ಈ ಸಂಖ್ಯೆಯ ಅಧಿಪತಿ ಶುಕ್ರ. ಶುಕ್ರನಿಗೆ ಆಕರ್ಷಣೆಯ ಶಕ್ತಿ ಇರುವುದರಿಂದ ಈ ವರ್ಷ ಈ ದಿನಾಂಕದಂದು ಜನಿಸಿದ ಜನರು ದೊಡ್ಡ ಸಾಧನೆಗಳನ್ನು ಮಾಡುವ ಸಾಧ್ಯತೆಯಿದೆ. ಸೌಲಭ್ಯಗಳ ಹೆಚ್ಚಳದ ಜೊತೆಗೆ ಹೊಸ ಮನೆ ಮತ್ತು ಹೊಸ ವಾಹನವನ್ನು ಖರೀದಿಸಲು ಅವಕಾಶವಿದೆ. ಸಂಬಂಧಗಳಲ್ಲಿ ಕೆಲವು ಸಮಸ್ಯೆಗಳು ಉದ್ಭವಿಸಿದರೂ, ಅವೆಲ್ಲವೂ ಸರಿಯಾಗುತ್ತವೆ..
ಸಂಖ್ಯೆ 8: ತಿಂಗಳ 8, 17, 26 ರಂದು ಜನಿಸಿದವರ ಮೊತ್ತ 8. ಆದ್ದರಿಂದ ಈ ದಿನಾಂಕದಂದು ಜನಿಸಿದವರಿಗೆ ಶನಿಯು ಅಧಿಪತಿಯಾಗಿದ್ದಾನೆ. ಶನಿಯ ಪ್ರಭಾವದಿಂದ ಇದುವರೆಗೆ ಪೂರ್ಣಗೊಳ್ಳದ ಕೆಲಸಗಳು 2025 ರಲ್ಲಿ ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಆದರೂ, ಆ ವಿಷಯಗಳು ಯಶಸ್ವಿಯಾಗಲು ಕೆಲವು ಕಠಿಣ ಪರಿಶ್ರಮದ ಅಗತ್ಯವಿದೆ. ಹಣಕಾಸಿನ ಪರಿಸ್ಥಿತಿಗಳು ಸಾಮಾನ್ಯಕ್ಕಿಂತ ಉತ್ತಮವಾಗುತ್ತದೆ. ಈ ದಿನಾಂಕಗಳಲ್ಲಿ ಜನಿಸಿದವರಿಗೆ ತಾಳ್ಮೆ ಅತ್ಯಗತ್ಯ. ನೀವು ತಾಳ್ಮೆಯಿಂದ ಇದ್ದರೆ ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ.
ಸಂಖ್ಯೆ 9: ಒಂದು ತಿಂಗಳಲ್ಲಿ 9, 18, 27 ದಿನಾಂಕಗಳ ಮೊತ್ತವು 9 ಆಗಿದೆ. ಆದ್ದರಿಂದ ಈ ದಿನಾಂಕಗಳಲ್ಲಿ ಜನಿಸಿದವರ ಸಂಖ್ಯೆ 9. ಈ ಸಂಖ್ಯೆಯ ಅಧಿಪತಿ ಮಂಗಳ. ಆದ್ದರಿಂದ ಈ ದಿನಾಂಕಗಳಲ್ಲಿ ಜನಿಸಿದವರಿಗೆ 2025 ಬಹಳ ರೋಚಕ ವರ್ಷವಾಗಿರುತ್ತದೆ. ಮಂಗಳನು ಧೈರ್ಯ ಮತ್ತು ಶೌರ್ಯವನ್ನು ನೀಡುತ್ತಾನೆ..
( ಸೂಚನೆ : ಈ ಲೇಖನವನ್ನು ಕೇವಲ ಆಧ್ಯಾತ್ಮಿಕ ಮತ್ತು ಜ್ಯೋತಿಷ್ಯ ನಂಬಿಕೆಯ ಆಧಾರದ ಮೇಲೆ ಬರೆಯಲಾಗಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳು ಮತ್ತು ವಿವರಣೆಗಳನ್ನು ನೀಡಲಾಗಲ್ಲ. ಈ ಮಾಹಿತಿಯಲ್ಲಿರುವ ಸತ್ಯಗಳ ನಿಖರತೆಗೆ Zee Kannada News ಯಾವುದೇ ರೀತಿಯಲ್ಲಿ ಜವಾಬ್ದಾರರಾಗಿರುವುದಿಲ್ಲ)