ಹೊಸ ವರ್ಷದಿಂದಲಾದರೂ ಲಕ್ಷ್ಮೀ ದೇವಿಯ ಕೃಪೆ ನಿಮ್ಮ ಮೇಲೆ ಇರಬೇಕು ಎಂದು ಬಯಸುವುದಾದರೆ ಕೆಲವು ವಾಸ್ತು ನಿಯಮಗಳನ್ನು ಅನುಸರಿಸಬೇಕು. ಅದರ ಪ್ರಕಾರ ಮನೆಯಲ್ಲಿರುವ ಐದು ವಸ್ತುಗಳನ್ನು ಎಂದಿಗೂ ಖಾಲಿ ಇಡಲೇ ಬಾರದು.
ಬೆಂಗಳೂರು : ಹಣಕಾಸಿನ ಅಭಾವದಿಂದ, ಸತತ ಸೋಲಿನಿಂದ ಸೋತು ನಿಂದು ಬೆಂದು ಹೋಗಿದ್ದರೆ ಈ ಎಲ್ಲಾ ಸಮಸ್ಯೆಗಳ ಮೂಲ ತಿಳಿದುಕೊಳ್ಳುವುದು ಮುಖ್ಯ. ಹೊಸ ವರ್ಷದಿಂದಲಾದರೂ ಲಕ್ಷ್ಮೀ ದೇವಿಯ ಕೃಪೆ ನಿಮ್ಮ ಮೇಲೆ ಇರಬೇಕು ಎಂದು ಬಯಸುವುದಾದರೆ ಕೆಲವು ವಾಸ್ತು ನಿಯಮಗಳನ್ನು ಅನುಸರಿಸಬೇಕು. ನಿಮ್ಮ ಮನೆಯಲ್ಲಿ ಅಂತಹ ಐದು ವಸ್ತುಗಳಿವೆ, ಅದನ್ನು ಎಂದಿಗೂ ಖಾಲಿ ಇಡಬಾರದು ಇಲ್ಲದಿದ್ದರೆ ನಿಮ್ಮ ಪ್ರಗತಿ ನಿಲ್ಲುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಹೊಸ ವರ್ಷದಿಂದಲಾದರೂ ಲಕ್ಷ್ಮೀ ದೇವಿಯ ಕೃಪೆ ನಿಮ್ಮ ಮೇಲೆ ಇರಬೇಕು ಎಂದು ಬಯಸುವುದಾದರೆ ಕೆಲವು ವಾಸ್ತು ನಿಯಮಗಳನ್ನು ಅನುಸರಿಸಬೇಕು. ಅದರ ಪ್ರಕಾರ ಮನೆಯಲ್ಲಿರುವ ಐದು ವಸ್ತುಗಳನ್ನು ಎಂದಿಗೂ ಖಾಲಿ ಇಡಲೇ ಬಾರದು.
ತಿಜೋರಿಯನ್ನು ಎಂದಿಗೂ ಖಾಲಿ ಇಡಬೇಡಿ. ಅದರಲ್ಲಿ ಅಲ್ಪ ಪ್ರಮಾಣದ ಹಣ ಅಥವಾ ಒಂದು ಸಣ್ಣ ತುಂಡಾದರೂ ಬಂಗಾರದ ಒಡವೆ ಇಡಲೇ ಬೇಕು. ಶಂಖ, ಕವಡೆ ಅಥವಾ ಗೋಮತಿ ಚಕ್ರವನ್ನು ಸಹ ಅದರಲ್ಲಿ ಇಡಬಹುದು.
ಮನೆಯ ಕೋಣೆಯಲ್ಲಿ ಅಥವಾ ದೇವರ ಮಂಟಪದಲ್ಲಿ ಇಡುವ ನೀರಿನ ಚೊಂಬು ಯಾವತ್ತೂ ಖಾಲಿ ಇರಲೇಬಾರದು. ಮನುಷ್ಯರಂತೆ ದೇವರಿಗೂ ಕಾಲಕಾಲಕ್ಕೆ ಬಾಯಾರಿಕೆಯಾಗುತ್ತದೆ ಎನ್ನುವುದು ನಂಬಿಕೆ.ಪ್ರತಿ ದಿನ ಪೂಜೆ ಮಾಡಿದ ನಂತರ ತುಳಸಿ ಎಲೆ ಸೇರಿಸಿ ಮಂಟಪದ ಮುಂದೆ ನೀರು ಇಡಲೇ ಬೇಕು.
ಮನೆಯಲ್ಲಿ ಅಕ್ಕಿ ಡಬ್ಬ ಪೂರ್ತಿಯಾಗಿ ಖಾಲಿಯಾಗಲು ಬಿಡಬಾರದು. ಖಾಲಿಯಾಗುವ ಮುನ್ನವೇ ಅದಕ್ಕೆ ಅಕ್ಕಿ ತುಂಬಿಸಬೇಕು. ಡಬ್ಬ ಪೂರ್ತಿ ತುಂಬಿರಲೇ ಬೇಕು ಎಂದೇನಿಲ್ಲ, ಆದರೆ ಸಂಪೂರ್ಣ ಬರಿದಾಗಬಾರದು.
ಮನೆಯ ಬಾತ್ ರೂಂನಲ್ಲಿರುವ ಸ್ನಾನದ ಬಕೆಟ್ ಅನ್ನು ತಪ್ಪಿಯೂ ಖಾಲಿ ಇಡಬಾರದು.ಖಾಲಿ ಬಕೆಟ್ ಯಾವಾಗಲೂ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಅದರಲ್ಲಿ ಸ್ವಲ್ಪವಾದರೂ ನೀರು ಇಟ್ಟಿರಬೇಕು. ಬಾತ್ ರೂಂನಲ್ಲಿ ನೀಲಿ ಬಣ್ಣದ ಬಕೆಟ್ ಇಡುವುದು ಶುಭ.
ಪರ್ಸ್ ಅನ್ನು ಎಂದಿಗೂ ಖಾಲಿ ಬಿಡಬೇಡಿ.ವಾಸ್ತು ಶಾಸ್ತ್ರದ ಪ್ರಕಾರ, ಖಾಲಿ ಪರ್ಸ್ ಬಡತನ ಮತ್ತು ಒತ್ತಡವನ್ನು ತರುತ್ತದೆ. ಇದರಿಂದಾಗಿ ಜೀವನದಲ್ಲಿ ಮುಂದೆ ಸಾಗುವ ಬದಲು ಮನುಷ್ಯ ಹಿಮ್ಮೆಟ್ಟಲು ಆರಂಭಿಸುತ್ತಾನೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.