Malaika Arora Diet plan : ಅನೇಕ ಹುಡುಗಿಯರು ಮಲೈಕಾ ಅವರಂತೆ ಕಾಣಲು ಬಯಸುತ್ತಾರೆ. ಫಿಟ್ ಆಗಿರುವ ನಟಿ ಏನ್ ಮಾಡ್ತಾಳೆ ಅಂತ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ.. ಸದ್ಯ ಸ್ವತಃ ಮಲೈಕಾ ತಮ್ಮ ಆರೋಗ್ಯ ರಹಸ್ಯಕ್ಕೆ ಕಾರಣವಾದಿ ಮೂರು ಮಾಸಾಲೆ ಪದಾರ್ಥಗಳ ಹೆಸರನ್ನು ರಿವೀಲ್ ಮಾಡಿದ್ದಾರೆ.. ಅಲ್ಲದೆ, ಅವುಗಳನ್ನು ಬಳಸುವ ವಿಧಾನವನ್ನೂ ತಿಳಿಸಿದ್ದಾರೆ..
ಬಾಲಿವುಡ್‌ನ ಅತ್ಯಂತ ಫಿಟ್ ಸೆಲೆಬ್ರಿಟಿಗಳಲ್ಲಿ ಮಲೈಕಾ ಅರೋರಾ ಒಬ್ಬರು. 51 ವರ್ಷ ವಯಸ್ಸಿನಲ್ಲೂ ನಟಿಯ ಅಂದ ಕೊಂಚವೂ ತಗ್ಗಿಲ್ಲ.. ಅವರ ಸೌಂದರ್ಯ ಮತ್ತು ಮೈಕಟ್ಟು ನೋಡಿ ಈ ಸುಂದರಿಯ ವಯಸ್ಸನ್ನೇ ಮರೆತುಬಿಡುತ್ತಾರೆ.
ಅನೇಕ ಹುಡುಗಿಯರು ಮಲೈಕಾಳಂತಹ ಆಕೃತಿಯನ್ನು ಪಡೆಯಲು ಬಯಸುತ್ತಾರೆ. ಇದಕ್ಕಾಗಿ, ನಟಿ ಏನ್ ಮಾಡ್ತಾರೆ ಅಂತ ತಿಳಿದುಕೊಳ್ಳಲು ಕಾಯುತ್ತಿದ್ದಾರೆ.. ಇದೀಗ ಮಲೈಕಾ ತಮ್ಮ ಡಯಟ್ ಫ್ಲಾನ್‌ನಲ್ಲಿರುವ ಮೂರು ಮುಖ್ಯ ಆಹಾರಗಳನ್ನು ತಿಳಿಸಿದ್ದಾರೆ..
ತೂಕ ಇಳಿಸಿಕೊಳ್ಳಲು ಮಲೈಕಾ ಅರೋರಾ ರಾತ್ರಿ.. ಮೆಂತ್ಯ ಮತ್ತು ಜೀರಿಗೆಯನ್ನು ನೆನೆಸಿಡುತ್ತಾರಂತೆ.. ಈ ಕುರಿತು ಫೋಟೋವನ್ನು ಹಂಚಿಕೊಂಡಿರುವ ನಟಿ, "ನಾನು ನನ್ನ ದಿನವನ್ನು ರಾತ್ರಿಯಿಡೀ ನೆನೆಸಿದ ಮೆಂತ್ಯ ಮತ್ತು ಜೀರಿಗೆ ನೀರಿನಿಂದ ಪ್ರಾರಂಭಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.
ಈ ನೀರನ್ನು ಕುಡಿಯುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ. ಇದಲ್ಲದೆ, ಇದು ಇನ್ನೂ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ನಿಮ್ಮ ಮೂಳೆಗಳು, ಕೀಲುಗಳು ಮತ್ತು ಕಾಲುಗಳಲ್ಲಿ ನೋವು ಇದ್ದರೆ, ಈ ನೀರನ್ನು ಸಹ ಕುಡಿಯಬಹುದು.
ಇದು ಹೊಟ್ಟೆಗೂ ತುಂಬಾ ಪ್ರಯೋಜನಕಾರಿ. ಆಮ್ಲೀಯತೆಯನ್ನು ನಿವಾರಿಸಲು ಈ ನೀರನ್ನು ಸಹ ಕುಡಿಯಬಹುದು. ಈ ನೀರು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಮಲೈಕಾ ಕುಡಿಯವ ಈ ನೀರನ್ನು ತಯಾರಿಸುವುದು ತುಂಬಾ ಸುಲಭ.. ನೀವೂ ತೂಕ ಇಳಿಸಿಕೊಳ್ಳಲು ಬಯಸಿದರೆ, ಈ ನೀರನ್ನು ಸಹ ಕುಡಿಯಬಹುದು. ಇದಕ್ಕಾಗಿ, 2 ಗ್ಲಾಸ್ ನೀರಿಗೆ ಅರ್ಧ ಟೀ ಚಮಚ ಮೆಂತ್ಯ, ಜೀರಿಗೆ ಮತ್ತು ಸೇರಿಸಿ.
ಇದನ್ನೆಲ್ಲಾ ನೀವು ರಾತ್ರಿಯಿಡೀ ನೆನೆಸಿಡಬೇಕು. ಮರುದಿನ ಬೆಳಿಗ್ಗೆ ಈ ನೀರನ್ನು ಕುದಿಸಿ. ನೀರು ಅರ್ಧಕ್ಕೆ ಇಳಿಯುವವರೆಗೆ ಕುದಿಸಬೇಕು. ಈ ನೀರು ಬಿಸಿಯಾಗಿರುವಾಗಲೇ ಕುಡಿಯಿರಿ. ಉದನ್ನು ಪ್ರತಿದಿನ ಕುಡಿಯಬಹುದು.