Mahashivaratri 2021: ಶಿವನನ್ನು ಸುಲಭವಾಗಿ ಒಲಿಸಿಕೊಳ್ಳಲು ಇಲ್ಲಿವೆ ಸುಲಭ ವಿಧಾನಗಳು

Mahashivaratri 2021: ಬರುವ ಮಾರ್ಚ್ 11 ರಂದು ಮಹಾಶಿವರಾತ್ರಿ ಹಬ್ಬ ಆಚರಿಸಲಾಗುತ್ತಿದೆ. ಈ ಶುಭ ಅವಸರದಂದು ದೇವಾಧಿದೇವ ಮಹಾದೇವನನ್ನು ಪ್ರಸನ್ನಗೊಳಿಸಿ ಆತನ ಆಶೀರ್ವಾದ ಪಡೆಯಲು ಯಾವ ಉಪಾಯಗಳನ್ನು ಮಾಡಬೇಕು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ.

ನವದೆಹಲಿ: Mahashivaratri 2021: ಶಿವನನ್ನು ಸುಮ್ಮನೆ ಭೋಲಾ ಶಂಕರ್ ಎಂದು ಹೇಳಲಾಗುವುದಿಲ್ಲ. ಶಿವ ಪುರಾಣದ ಪ್ರಕಾರ ಎಲ್ಲ ದೇವರಲ್ಲಿ ಅತ್ಯಂತ ಸುಲಭವಾಗಿ ಒಲಿಯುವ ದೇವ ಎಂದರೆ ಅದು ಶಿವ ಎಂದು ಹೇಳಲಾಗಿದೆ. ಅಷ್ಟೇ ಅಲ್ಲ ಬೇಗನೆ ಒಲಿದು ಆತ ಭಕ್ತರ್ ಇಷ್ಟಾರ್ಥಗಳನ್ನು ಕೂಡ ನೆರವೇರಿಸುತ್ತಾನೆ. ಶಿವ ಭಕ್ತರ ಕಲ್ಯಾಣ ಮಾಡುವಾಗ ಆ ಭಕ್ತ ಧರ್ಮನಿಷ್ಠ ವ್ಯಕ್ತಿಯೋ ಅಥವಾ ರಾಕ್ಷೆಸ  ಅಥವಾ ನಿನ್ನಾವುದೇ ಯೌನಿಯ ಜೀವಿ ಎಂಬುದನ್ನು ನೋಡುವುದಿಲ್ಲ ಎನ್ನಲಾಗುತ್ತದೆ. ಶಿವನನ್ನು ಮೆಚ್ಚಿಸಲು ಯಾವುದೇ ವಿಶೇಷ ಪೂಜೆ ಮಾಡುವ ಅವಶ್ಯಕತೆ ಇಲ್ಲ. ಶಿವಲಿಂಗಕ್ಕೆ ನೀವು ಕೇವಲ ಜಲ ಹಾಗೂ ಬಿಲ್ವಪತ್ರಿ ಅರ್ಪಿಸಿದರೆ ಸಾಕು. ಈ ಬಾರಿಯ ಶಿವರಾತ್ರಿಯನ್ನು ನೀವೂ ಕೂಡ ಒಂದು ವೇಳೆ ಶಿವನ್ನನ್ನು ಒಲಿಸಿಕೊಳ್ಳಲು ಬಯಸುತ್ತಿದ್ದರೆ ಏನು ಮಾಡಬೇಕು ಎಂಬುದನ್ನು ತಿಳಿಯೋಣ ಬನ್ನಿ.

 

ಇದನ್ನೂ ಓದಿ- Mahashivratri 2021 : ಮಹಾ ಶಿವರಾತ್ರಿ ಉಪವಾಸದ ಮಹತ್ವ ಏನು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಬಿಲ್ವಪತ್ರೆ ಅರ್ಪಿಸಿ: ಶಿವನಿಗೆ ಅತ್ಯಂತ ಪ್ರೀಯ ವಸ್ತುಗಳಲ್ಲಿ ಬಿಲ್ವಪತ್ರ ಮೊದಲ ವಸ್ತುವಾಗಿದೆ. ಮಹಾ ಶಿವರಾತ್ರಿಯ ದಿನ ಶಿವನಿಗೆ ಬಿಲ್ವಪತ್ರೆ ಅರ್ಪಿಸಿದರೆ ಧನ ಪ್ರಾಪ್ತಿಯಾಗುತ್ತದೆ, ವೈವಾಹಿಕ ಜೀವನದಲ್ಲಿ ಸುಖ ನೆಲೆಸುತ್ತದೆ. ದೊಡ್ಡ ರೋಗಗಳು ದೂರವಾಗಿ ಸಂತಾನ ಸುಖ ಪ್ರಾಪ್ತಿಯಾಗುತ್ತದೆ. ಜೀವನದ ಎಲ್ಲ ಸಂಕಷ್ಟಗಳಿಂದ ಮುಕ್ತಿ ಸಿಗುತ್ತದೆ. ಬಿಲ್ವಪತ್ರೆ ಮೂರು ದಳಗಳಿಂದ ಹಿಡಿದು 11 ದಳಗಳವರೆಗೆ ಇರುತ್ತವೆ. ದಳಗಳು ಜಾಸ್ತಿ ಇದ್ದಷ್ಟು ಉತ್ತಮ. ಆದರೆ, ಶಿವಲಿಂಗದ ಮೇಲೆ ಬಿಲ್ವಪತ್ರೆ ಅರ್ಪಿಸುವಾಗ ಎಲೆಗಳು ಕತ್ತರಿಸಿರಬಾರದು ಎಂಬುದನ್ನು ನೆನಪಿಡಿ.

2 /5

ಜಲ ಹಾಗೂ ಹಾಲಿನಿಂದ ಅಭಿಷೇಕ ಮಾಡಿ: ವಿಷ್ಣುಪುರಾಣದ ಪ್ರಕಾರ ಶಿವ ಓರ್ವ ನಿರಾಕಾರ ಎಂದು ಭಾವಿಸಲಾಗುತ್ತದೆ. ಹೀಗಾಗಿ ಕೇವಲ ಶಿವರಾತ್ರಿ ಅಷ್ಟೇ ಅಲ್ಲ ದಿನನಿತ್ಯವೂ ಕೂಡ ಶಿವನಿಗೆ ಜಲ ಹಾಗೂ ಅಭಿಷೇಕ ಮಾಡಿದರೆ, ದೌರ್ಭಾಗ್ಯ ಕೂಡ ಸೌಭಾಗ್ಯವಾಗಿ ಪರಿವರ್ತನೆಯಾಗುತ್ತದೆ. ಶಾಸ್ತ್ರಗಳ ಪ್ರಕಾರ ಶಿವಲಿಂಗದ ಮೇಲೆ ಜಲ ಅರ್ಪಿಸುವುದರಿಂದ ಶಾರೀರಿಕ ಹಾಗೂ ಮಾನಸಿಕ ಕಷ್ಟಗಳು ದೂರಗುತ್ತವೆ. ಜಲದ ಹೊರತಾಗಿ ಶಿವಲಿಂಗದ ಮೇಲೆ ಹಾಲಿನಿಂದ ಅಭಿಷೇಕ ಮಾಡಿದರೆ, ಸಮಸ್ತ ಮನೋಕಾಮನೆಗಳು ಪೂರ್ಣಗೊಳ್ಳುತ್ತವೆ. ಒಂದು ವೇಳೆ ನಿಮ್ಮ ಬಳಿ ಹಾಲಿನ ಕೊರತೆ ಇದ್ದರೆ, ನಿಮ್ಮ ಬಳಿ ಇರುವ ಹಾಲನ್ನು ನೀರಿನಲ್ಲಿ ಬೆರೆಸಿ ಅದನ್ನು ಶಿವಲಿಂಗಕ್ಕೆ ಅರ್ಪಿಸಿ.

3 /5

ಶಿವಲಿಂಗಕ್ಕೆ ಧತ್ತೂರಿ ಅರ್ಪಿಸಿ: ಶಿವ ಧತ್ತೂರಿ ಪ್ರಿಯ. ಹೀಗಾಗಿ ಶಿವರಾತ್ರಿಯ ದಿನ ಶಿವಲಿಂಗಕ್ಕೆ ಧತ್ತೂರಿಯನ್ನು ಆರೋಪಿಸಿ ಮನಸ್ಸು ಮತ್ತು ವಿಚಾರಗಳಿಂದ ಕಹಿ ಸಂಗತಿಗಳನ್ನು ತೊಡೆದುಹಾಕಿ ನಿಮ್ಮ ಜೀವನದಲ್ಲಿ ಸಿಹಿಯನ್ನು ತುಂಬುವ ಸಂಕಲ್ಪ ಮಾಡಿ. ಇದರಿಂದ ಶಿವ ಬೇಗ ಪ್ರಸನ್ನನಾಗುತ್ತಾನೆ. ಇದಲ್ಲದೆ ಭಾಂಗ್ ಹಾಗೂ ಅಂಕ್ ಗಿಡದ ಹೂವು ಹಾಗೂ ಬಾರಿಹಣ್ಣು ಶಿವಲಿಂಗಕ್ಕೆ ಅರ್ಪಿಸಿ.

4 /5

ಶಿವಲಿಂಗಕ್ಕೆ ಅಕ್ಕಿ ಅರ್ಪಿಸಿ: ಕೇವಲ 4 ಕಾಳು ಅಕ್ಕಿ ಅರ್ಪಣೆಯಿಂದಲೂ ಕೂಡ ಶಿವ ಪ್ರಸನ್ನನಾಗುತ್ತಾನೆ ಎನ್ನಲಾಗುತ್ತದೆ. ಹೀಗಾಗಿ ಶಿವರಾತ್ರಿಯ ದಿನ ನೀವೂ ಕೂಡ ಶಿವಲಿಂಗಕ್ಕೆ ಅಕ್ಷತೆ ಹಾಕಿ. ಅಕ್ಕಿ ಶುಭ್ರ ಹಾಗೂ ಅಖಂಡವಾಗಿರಬೇಕು ಎಂಬುದನ್ನು ನೆನಪಿಡಿ. ತುಂಡಾಗಿರುವ ಅಕ್ಕಿ ಶಿವನಿಗೆ ಅರ್ಪಿಸಬೇಕು. ಶಿವಪುರಾಣದ ಅನುಸಾರ ಶಿವಲಿಂಗಕ್ಕೆ ಅಕ್ಕಿ ಅರ್ಪಿಸುವುದರಿಂದ ಶಿವ ಪ್ರಸನ್ನನಾಗಿ ಅಖಂಡ ಧನ, ಮಾನ-ಸಮ್ಮಾನ ದಯಪಾಲಿಸುತ್ತಾನೆ ಎನ್ನಲಾಗಿದೆ.

5 /5

ಈ ಮಂತ್ರವನ್ನು ಜಪಿಸಿ ಶಿವನಿಗೆ ಪ್ರಸನ್ನಗೊಳಿಸಿ.: ಶಿವರಾತ್ರಿಯ ದಿನ ಶಿವನನ್ನು ಪ್ರಸನ್ನಗೊಳಿಸಿ ಅವನ ಕೃಪೆಗೆ ಪಾತ್ರರಾಗಲು ನೀವು ಈ ಕೆಳಗೆ ಸೂಚಿಸಲಾಗಿರುವ ಮಂತ್ರಗಳನ್ನೂ ಜಪಿಸಿ. ಮಂತ್ರ ಜಪಿಸುವಾಗ ನಿಮ್ಮ ಮುಖ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿರಬೇಕು. 1. ಓಂ ನಮಃ ಶಿವಾಯ, 2. ಓಂ ನಮೋ ನಿಲಕಂಠಾಯನಮಃ, 3. ಓಂ ಪಾರ್ವತಿಪತಯೇನಮಃ, 4. ಓಂ ಹ್ರೀಮ್-ಹ್ರೌಮ್ ನಮಃ ಶಿವಾಯ, 5. ಓಂ ನಮೋ ಭಗವತೇ ದಕ್ಷಿಣಮೂರ್ತಯೇ ಮಹಂಮೇಧಾ ಪ್ರಯಚ್ಛ ಸ್ವಾಹಾ