Lucky Girls: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯ ಹೆಣ್ಣುಮಕ್ಕಳು ಮದುವೆಯಾಗಲು ಬಹಳ ಉತ್ತಮರು ಎಂದು ಹೇಳಲಾಗುತ್ತದೆ. ಇವರು ತಾಯಿ ಲಕ್ಷ್ಮಿದೇವಿಯ ಸ್ವರೂಪವಾಗಿರುತ್ತಾರಂತೆ. ಆ ಅದೃಷ್ಟಶಾಲಿ ರಾಶಿಗಳ ಮಹಿಳೆಯರು ಯಾರು ಅನ್ನೋದ ಮಾಹಿತಿ ಇಲ್ಲಿದೆ ನೋಡಿ...
Lucky Girls: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯ ರಾಶಿಯ ಆಧಾರದ ಮೇಲೆ ಅವರ ಸ್ವಭಾವ ಮತ್ತು ವಿಶೇಷ ಗುಣಗಳ ಬಗ್ಗೆ ಮಾಹಿತಿ ಪಡೆಯಬಹುದು. ಯಾವುದೇ ರಾಶಿಯ ಅಧಿಪತಿ ಗ್ರಹಗಳ ಪ್ರಭಾವವು ಆ ವ್ಯಕ್ತಿಯ ಸ್ವಭಾವದ ಮೇಲೆ ಅವಲಂಬಿತವಾಗಿರುತ್ತದೆ. ಕೆಲವು ರಾಶಿಗೆ ಸೇರಿದ ಹೆಣ್ಣುಮಕ್ಕಳು ವಿವಾಹದ ನಂತರ ತಮ್ಮ ಪತಿಯ ಅದೃಷ್ಟವನ್ನೇ ಬದಲಾಯಿಸುವ ಶಕ್ತಿ ಹೊಂದಿರುತ್ತಾರಂತೆ. ಯಾವುದೇ ಪುರುಷ ಈ ರಾಶಿಗೆ ಸೇರಿದ ಮಹಿಳೆಯರನ್ನು ಮದುವೆಯಾದರೆ, ಅವರಿಗೆ ಜೀವನದಲ್ಲಿ ಎಂದಿಗೂ ಹಣದ ಕೊರತೆ ಅಥವಾ ಸಮಸ್ಯೆ ಬರೋದಿಲ್ಲ. ಈ ರಾಶಿಗೆ ಸೇರಿದ ಮಹಿಳೆಯರು ತಾಯಿ ಲಕ್ಷ್ಮಿದೇವಿಯ ಸ್ವರೂಪದಂತೆ ಮನೆಗೆ ಆಗಮಿಸುತ್ತಾರೆ. ಇವರು ಮನೆಯಲ್ಲಿರುವುದರಿಂದ ಜೀವನದಲ್ಲಿ ಆರ್ಥಿಕ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲವೆಂದು ಹೇಳಲಾಗುತ್ತದೆ. ಈ ರಾಶಿಗೆ ಸೇರಿದ ಜನರು ಮನೆಗೆ ಅದೃಷ್ಟ ಲಕ್ಷ್ಮಿಯಂತೆ ಎಲ್ಲರ ಬಾಳನ್ನು ಬೆಳಗುತ್ತಾರೆ. ಈ ರಾಶಿಯವರನ್ನು ಮದುವೆಯಾದ ನಂತರ ಪತಿಯು ಹಠಾತ್ ಅದೃಷ್ಟದ ಸಂಪೂರ್ಣ ಬೆಂಬಲ ಪಡೆಯುತ್ತಾರೆ. ಹೀಗಾಗಿ ಆ ರಾಶಿಗಳು ಯಾವುವು, ನಿಮ್ಮ ರಾಶಿಗೆ ಈ ಅದೃಷ್ಟ ಇದೆಯಾ ಅನ್ನೋದರ ಮಾಹಿತಿ ತಿಳಿಯಿರಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಮೇಷ ರಾಶಿಗೆ ಸೇರಿದ ಹೆಣ್ಣುಮಕ್ಕಳು ಸರಳ & ಸೌಮ್ಯ ಸ್ವಭಾವ ಹೊಂದಿರುತ್ತಾರೆ. ಈ ರಾಶಿಗೆ ಸೇರಿದ ಮಹಿಳೆಯರ ಮೇಲೆ ತಾಯಿ ಲಕ್ಷ್ಮಿದೇವಿಯ ವಿಶೇಷ ಕೃಪೆ ಇರುತ್ತದೆ. ಈ ರಾಶಿಗೆ ಸೇರಿದ ಮಹಿಳೆಯರು ಸಂಬಂಧದಲ್ಲಿ ಬಹಳ ನಿಷ್ಠಾವಂತರಾಗಿರುತ್ತಾರೆ. ಇವರು ತಮ್ಮ ಪತಿಯನ್ನು ಹೆಚ್ಚಾಗಿ ಪ್ರೀತಿಸುತ್ತಾರೆ. ತಮ್ಮ ಮನೆಯ ಪ್ರತಿಯೊಂದು ಸದಸ್ಯರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಈ ರಾಶಿಯ ಮಹಿಳೆಯರ ಆಗಮನದಿಂದ ಗಂಡನ ಮನೆಯಲ್ಲಿ ಧನ ಸಂಪತ್ತಿಗೆ ಯಾವುದೇ ಕೊರತೆ ಇರಲ್ಲ. ಇವರು ತಮ್ಮ ಮನೆಯ ಸದಸ್ಯರನ್ನು ವಿಶೇಷ ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಮೇಷ ರಾಶಿಗೆ ಸೇರಿದ ಮಹಿಳೆಯರು ಗಂಡನ ಮನೆಯಲ್ಲಿ ಬಹಳ ಪ್ರೀತಿ ಮತ್ತು ಗೌರವ ಗಳಿಸುತ್ತಾರೆ. ಈ ರಾಶಿಗೆ ಸೇರಿದ ಯುವತಿಯರು ತಮ್ಮ ಅದೃಷ್ಟ & ಸೌಭಾಗ್ಯದಿಂದ ಇಡೀ ಮನೆಯನ್ನೇ ಬೆಳಗಿಸುವ ಶಕ್ತಿ ಹೊಂದಿರುತ್ತಾರೆ.
ಸಿಂಹ ರಾಶಿಗೆ ಸೇರಿದ ಮಹಿಳೆಯರು ಅದೃಷ್ಟದ ಗಣಿಯಾಗಿರುತ್ತಾರೆ. ಈ ರಾಶಿಯ ಮಹಿಳೆಯರು ಸ್ವಭಾವದಲ್ಲಿ ನಿಷ್ಠಾವಂತರು, ಕಠಿಣ ಪರಿಶ್ರಮಿಗಳು ಮತ್ತು ಸಹನಾಶೀಲರಾಗಿರುತ್ತಾರೆ. ಇವರ ವಿವಾಹವು ಯಾವ ವ್ಯಕ್ತಿಯೊಂದಿಗೆ ಆಗುವುದೋ ಅವರು ಜೀವನದಲ್ಲಿ ದೊಡ್ಡ ಯಶಸ್ಸು ಸಾಧಿಸುವ ಯೋಗ ಪಡೆಯುತ್ತಾರೆ. ರಾತ್ರೋರಾತ್ರಿ ಅವರ ಅದೃಷ್ಟ ಖುಲಾಯಿಸುತ್ತದೆ ಎಂದು ಹೇಳಲಾಗುತ್ತದೆ. ಈ ರಾಶಿಯ ಮಹಿಳೆಯರು ತಮ್ಮ ಸಂಗಾತಿಯ ಪ್ರತಿಯೊಂದು ಸುಖ-ದುಃಖಗಳಲ್ಲಿ ಜೊತೆಯಾಗಿ ನಿಲ್ಲುತ್ತಾರೆ. ಇವರ ಇರುವಿಕೆಯಿಂದ ಮನೆಯ ಸದಸ್ಯರ ಮೇಲೆ ತಾಯಿ ಲಕ್ಷ್ಮಿದೇವಿಯ ಕೃಪೆ ಯಾವಾಗಲೂ ಇರುತ್ತದೆ. ಮನೆಯಲ್ಲಿ ಸುಖ-ಸಮೃದ್ಧಿಯ ಆಗಮನವಾಗುತ್ತದೆ.
ಮಕರ ರಾಶಿಗೆ ಸೇರಿದ ಮಹಿಳೆಯರು ತಮ್ಮ ಪತಿಗೆ ಬಹಳ ಅದೃಷ್ಟಶಾಲಿಯಾಗಿರುತ್ತಾರೆ. ಇವರು ಬಹಳ ಬುದ್ಧಿವಂತರು ಮತ್ತು ಕೆಲಸಗಳನ್ನು ಮಾಡುವಲ್ಲಿ ನಿಪುಣರಾಗಿರುತ್ತಾರೆ. ಇವರು ಮನೆಯಲ್ಲಿರುವುದರಿಂದ ಆ ಮನೆಯಲ್ಲಿ ಸುಖ, ಸಮೃದ್ಧಿ ಮತ್ತು ಸಂತೋಷ ಸದಾ ನೆಲೆಸುವುದು. ಮನೆಯ ಸದಸ್ಯರ ಮುಖದಲ್ಲಿ ಯಾವಾಗಲೂ ನಗು ಇರುವುದು. ಇವರ ಸಂತೋಷದ ಸ್ವಭಾವವು ಮನೆಯ ಎಲ್ಲಾ ಸದಸ್ಯರನ್ನು ಖುಷಿಯಿಂದ ಇರುವಂತೆ ಪ್ರೇರೇಪಿಸುತ್ತದೆ. ಇವರು ಬೇರೆಯವರ ಸಣ್ಣಪುಟ್ಟ ಖುಷಿಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಪತಿಯ ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಮಕರ ರಾಶಿಗೆ ಸೇರಿದ ಮಹಿಳೆಯರು ಬಹಳ ಅದೃಷ್ಟವಂತರಾಗಿರುತ್ತಾರೆ. ಇವರೊಂದಿಗೆ ವಿವಾಹವಾಗುವುದರಿಂದ ಸಂತೋಷ-ಸಮೃದ್ಧಿಯಲ್ಲಿ ಬಹಳಷ್ಟು ವೃದ್ಧಿಯಾಗುವುದು.
ಕುಂಭ ರಾಶಿಗೆ ಸೇರಿದ ಮಹಿಳೆಯರು ಅದೃಷ್ಟವಂತರು ಮತ್ತು ಬಹಳ ಉತ್ತಮ ಸ್ವಭಾವದವರೆಂದು ಹೇಳಲಾಗುತ್ತದೆ. ಈ ರಾಶಿಯ ಮಹಿಳೆಯರು ಸಂಬಂಧಗಳಿಗೆ ಹೆಚ್ಚಿನ ಮಹತ್ವ ನೀಡುವರು. ಇವರು ತಮ್ಮ ಸಂಗಾತಿಯೊಂದಿಗೆ ಜೀವನದ ಎಲ್ಲಾ ಸುಖ-ದುಃಖಗಳಲ್ಲಿ ಒಟ್ಟಿಗೆ ನಿಲ್ಲುವರು. ಈ ರಾಶಿಗೆ ಸೇರಿದ ಮಹಿಳೆಯರು ಜವಾಬ್ದಾರಿಗಳನ್ನು ತೆಗೆದುಕೊಳ್ಳುವುದರಲ್ಲಿ ಎಂದಿಗೂ ಹಿಂದೆ ಸರಿಯುವುದಿಲ್ಲ. ಇವರು ಯಾವುದೇ ರೀತಿಯ ಸಮಸ್ಯೆಗಳನ್ನು ತಮ್ಮ ಬುದ್ಧಿವಂತಿಕೆಯಿಂದ ಪರಿಹರಿಸುವಲ್ಲಿ ಸಮರ್ಥರಾಗಿರುತ್ತಾರೆ. ಕುಂಭ ರಾಶಿಗೆ ಸೇರಿದ ಮಹಿಳೆಯರು ತಮ್ಮ ಪತಿಯ ಪ್ರತಿಯೊಂದು ಪರಿಸ್ಥಿತಿಯಲ್ಲೂ ಸಾಕಷ್ಟು ಬೆಂಬಲ ನೀಡುತ್ತಾರೆ. ಅವರ ಕನಸುಗಳನ್ನು ಈಡೇರಿಸುವಲ್ಲಿ ಹೆಚ್ಚಿನ ಸಹಾಯ ಮಾಡುತ್ತಾರೆ. ಇವರು ಯಾವಾಗಲೂ ತಮ್ಮ ಪ್ರೀತಿ ಮತ್ತು ಮನೆಯ ಸದಸ್ಯರಿಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಳ್ಳುತ್ತಾರೆ.
(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)