Bigg Boss Kannada Host After Kiccha Sudeep: ಕಿಚ್ಚ ಸುದೀಪ್ ಬಿಗ್ ಬಾಸ್ ಕನ್ನಡ ಸೀಸನ್ 11 ರ ಫಿನಾಲೆಯಲ್ಲಿ ಇದೇ ನನ್ನ ಕೊನೆಯ ನಿರೂಪಣೆ ಎಂದು ಹೇಳಿದ್ದಾರೆ. ಈ ಬೆನ್ನಲ್ಲೇ ಸುದೀಪ್ ಬಿಗ್ ಬಾಸ್ ತೊರೆಯಲು ಅಸಲಿ ಕಾರಣ ಮತ್ತು ಮುಂದಿನ ಹೋಸ್ಟ್ ಯಾರೆಂಬ ಸಂಗತಿ ಚರ್ಚೆ ಆಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕಿಚ್ಚ ಸುದೀಪ್ ಬಿಗ್ ಬಾಸ್ ಕನ್ನಡ ಸೀಸನ್ 11 ರ ಫಿನಾಲೆಯಲ್ಲಿ ಇದೇ ನನ್ನ ಕೊನೆಯ ನಿರೂಪಣೆ ಎಂದು ಹೇಳಿದ್ದಾರೆ. ಈ ಬೆನ್ನಲ್ಲೇ ಸುದೀಪ್ ಬಿಗ್ ಬಾಸ್ ತೊರೆಯಲು ಅಸಲಿ ಕಾರಣ ಮತ್ತು ಮುಂದಿನ ಹೋಸ್ಟ್ ಯಾರೆಂಬ ಸಂಗತಿ ಚರ್ಚೆ ಆಗುತ್ತಿದೆ.
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 11 ಮುಕ್ತಾಯಗೊಂಡಿದೆ. ಆದರೆ ಈ ಬಿಗ್ ಬಾಸ್ ಕನ್ನಡ ಸೀಸನ್ 11 ರ ಫಿನಾಲೆಯಲ್ಲಿ ಕಿಚ್ಚ ಸುದೀಪ್ ತಾವು ಮುಂದಿನ ಸೀಸನ್ನಿಂದ ಬಿಗ್ ಬಾಸ್ ಹೋಸ್ಟ್ ಮಾಡುತ್ತಿಲ್ಲ ಎಂಬುದನ್ನು ಖಚಿತ ಪಡಿಸಿದ್ದಾರೆ.
ಸುದೀಪ್ ಬಳಿಕ ಬಿಗ್ ಬಾಸ್ ಕನ್ನಡ ಸೀಸನ್ 12 ರ ಹೋಸ್ಟ್ ಆಗಿ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಆಫರ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಗಣೇಶ್ ಈ ಹಿಂದೆ ಅನೇಕ ಕಾರ್ಯಕ್ರಮಗಳನ್ನು ಹೋಸ್ಟ್ ಮಾಡಿದ್ದ ಅನುಭವ ಹೊಂದಿದ್ದಾರೆ.
ಕಾಮಿಡಿ ಟೈಮ್ ಮೂಲಕ ಕನ್ನಡದ ಸ್ಟಾರ್ ಆಂಕರ್ ಆಗಿದ್ದ ಗಣೇಶ್ ಆ ಬಳಿಕ ಸಿನಿಮಾದಲ್ಲಿ ನಟಿಸಿ ಕನ್ನಡಿಗರ ಮನಗೆದ್ದವರು. ಹೀಗಾಗಿ ನಟ ಗಣೇಶ್ ಅವರನ್ನು ಸುದೀಪ್ ಬಳಿಕ ಬಿಗ್ ಬಾಸ್ ಕನ್ನಡದ ಹೊಸ ಹೋಸ್ಟ್ ಆಗಿ ಮಾಡಬಹುದು ಎನ್ನಲಾಗುತ್ತಿದೆ.
ಇನ್ನೂ ಸಂದರ್ಶನವೊಂದರಲ್ಲಿ ಸ್ಪಷ್ಟನೆ ಬಿಗ್ ಬಾಸ್ ಯಾಕೆ ಬಿಟ್ಟರು ಎಂಬುದಕ್ಕೆ ಸುದೀಪ್ ಅವರೇ ಉತ್ತರಿಸಿದ್ದಾರೆ. ಬಿಗ್ ಬಾಸ್ ಬಿಡುವುದರ ಹಿಂದಿನ ಕಾರಣ ತಿಳಿಸಿದ್ದಾರೆ. “ಟ್ವೀಟ್ ಮಾಡಿದ ದಿನ ನಾನು ತುಂಬಾ ಆಯಾಸಗೊಂಡಿದ್ದೆ. ಒಂದು ವೇಳೆ ಆ ಸಮಯದಲ್ಲಿ ನಾನು ಟ್ವೀಟ್ ಮಾಡದಿದ್ದರೆ ಬಹುಶಃ ಮರುದಿನ ನಾನು ಆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲವೇನೋʼʼ ಎಂದಿದ್ದಾರೆ.
ಬಿಗ್ ಬಾಸ್ ಬಿಡುವ ಆಲೋಚನೆ ಬಂದ ಬಳಿಕ ಆ ಸಮಯದಲ್ಲೇ ಟ್ವೀಟ್ ಮಾಡಿದ್ದೆ. ಬಿಗ್ ಬಾಸ್ ನನಗೆ ಹೆಚ್ಚು ಗೌರವ ತಂದು ಕೊಟ್ಟಿದೆ. ಜೊತೆಗೆ ಅಪಾರ ಪ್ರೀತಿ ನೀಡಿದೆ. ಎಲ್ಲೋ ಒಂದು ಕಡೆ ಶೂಟಿಂಗ್ ಆಗುತ್ತಿರುವಾಗ, ಏನೇ ಎಷ್ಟೇ ಕೆಲಸ ಇದ್ರೂ ಎಲ್ಲ ಬಿಟ್ಟು ವೀಕೆಂಡ್ಗೆ ಇಲ್ಲಿಗೆ ಬರಲೇಬೇಕು ಎಂದಿದ್ದಾರೆ.
ದೂರವಿದ್ದರೂ ಸಹ ಪ್ರಯಾಣ ಮಾಡಿ ಶುಕ್ರವಾರ ಬಂದು ಎಲ್ಲಾ ಎಪಿಸೋಡ್ ನೋಡಿ ಶೋ ನಡೆಸಿಕೊಡಲೇ ಬೇಕಿರುತ್ತೆ. ಇದೊಂದು ಪರಿಶ್ರಮದ ಕೆಲಸ ಅನಿಸಿದ. ಎಪಿಸೋಡ್ ನೋಡದೆ ನಿರೂಪಣೆ ಮಾಡುವುದು ನನಗೆ ಇಷ್ಟಾನೇ ಆಗೋದಿಲ್ಲ. ಅದು ಸಾಧ್ಯ ಕೂಡ ಇಲ್ಲ ಎಂದಿದ್ದಾರೆ.
ಆದರೆ ನಾನು ಹಾಕುವ ಇಷ್ಟೆಲ್ಲ ಪರಿಶ್ರಮಕ್ಕೆ ಸರಿಯಾದ ರೀತಿಯಲ್ಲಿ ಬೆಲೆ ನೀಡುವವರು ಕೂಡ ಇರಬೇಕಾಗುತ್ತದೆ. ಅದು ಇಲ್ಲಿ ಸಾಧ್ಯವಾಗದಿದ್ದಾಗ ಆ ಶ್ರಮ ನಾನು ಸಿನಿಮಾದ ಕೆಲಸಕ್ಕೆ ಹಾಕಲು ಇಷ್ಟಪಡುತ್ತೇನೆ ಎಂದು ನಟ ಸುದೀಪ್ ಹೇಳಿದ್ದಾರೆ.
ಬೇರೆ ಭಾಷೆಗಳಲ್ಲಿ ನಡೆಯುತ್ತಿರುವ ಬಿಗ್ ಬಾಸ್ಗೆ ಸಿಗುವಂತಹ ಗೌರವ ಕನ್ನಡ ಬಿಗ್ ಬಾಸ್ಗೂ ಸಿಗಬೇಕು. ಆದರೆ ಇಲ್ಲಿ ಅದು ಸಿಗುತ್ತಿದೆ ಎಂದು ನನಗೆ ಅನಿಸುತ್ತಿಲ್ಲ. ಇದು ಬರೀ ನನಗೆ ಸಂಬಂಧಿಸಿದ ಸಂಗತಿ ಅಲ್ಲ. ಬಿಗ್ ಬಾಸ್ ಕನ್ನಡ ಮತ್ತು ಇತರ ಎಲ್ಲಾ ಭಾಷೆಯ ಶೋಗಳನ್ನು ಹೋಲಿಕೆ ಮಾಡಿ ಆಗ ಗೊತ್ತಾಗಬಹುದು. ನಮ್ಮ ಪ್ರೇಕ್ಷಕರು ಕೂಡ ಹೆಚ್ಚಿನ ಗೌರವಕ್ಕೆ ಅರ್ಹರಾಗಬೇಕು ಎಂದು ಸುದೀಪ್ ಹೇಳಿದ್ದಾರೆ.
ಬಿಗ್ ಬಾಸ್ ಕನ್ನಡದ ನಿರೂಪಣೆ ಮಾಡುವುದನ್ನು ಬಿಡುವುದರ ಹಿಂದೆ ಕೆಲವೊಂದು ಇನ್ ಸೈಡ್ ಅಜೆಂಡಾ ಕೂಡ ಇದೆ. ಅದೇನೂ ಇಲ್ಲ ಅಂತ ನಾನು ಹೇಳುವುದೂ ಇಲ್ಲ ಎಂದು ಸುದೀಪ್ ಹೇಳಿದ್ದಾರೆ.