Gajlakshmi Rajyog 2024: ಶೀಘ್ರದಲ್ಲೇ ಗುರು-ಶುಕ್ರರ ಸಂಯೋಗದಿಂದ ಶುಭಕರ ಗಜಲಕ್ಷ್ಮಿ ರಾಜಯೋಗ ನೀರ್ಮಾಣವಾಗಲಿದೆ. ಇದರ ಪರಿಣಾಮ ದ್ವಾದಶ ರಾಶಿಗಳ ಮೇಲೂ ಕಂಡು ಬರುತ್ತದೆ. ಆದರೂ, ಈ ಸಮಯವನ್ನು ಕೆಲವು ರಾಶಿಯವರಿಗೆ ತುಂಬಾ ಮಂಗಳಕರ ಎಂದು ಹೇಳಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಜ್ಯೋತಿಷ್ಯ ಶಾಸ್ತ್ರದಲ್ಲಿ, ಕೆಲವು ಯೋಗಗಳನ್ನು ಶುಭ ಯೋಗಗಳು ಎಂದು ಪರಿಗಣಿಸಲಾಗಿದೆ. ಅಂತಹ ಶುಭ ಯೋಗಗಳಲ್ಲಿ ಗಜಲಕ್ಷ್ಮಿ ರಾಜಯೋಗವೂ ಒಂದು.
ಪ್ರಸ್ತುತ, ದೇವಗುರು ಬೃಹಸ್ಪತಿಯು ಮೇಷ ರಾಶಿಯಲ್ಲಿ ನೆಲೆಸಿದ್ದಾರೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಐಷಾರಾಮಿ ಜೀವನದ ಅಂಶ ಎಂದು ಪರಿಗಣಿಸಲಾಗಿರುವ ಶುಕ್ರ ಏಪ್ರಿಲ್ 24ರಂದು ಮೇಷ ರಾಶಿಗೆ ಪ್ರವೇಶಿಸಲಿದ್ದಾನೆ.
ಏಪ್ರಿಲ್ 24ರಂದು ಮೇಷ ರಾಶಿಗೆ ಶುಕ್ರನ ಪ್ರವೇಶದೊಂದಿಗೆ ಮೇಷ ರಾಶಿಯಲ್ಲಿ ಗುರು-ಶುಕ್ರರ ಸಂಯೋಗ ಏರ್ಪಟ್ಟು ಅತ್ಯಂತ ಮಂಗಳಕರ ಯೋಗಗಳಲ್ಲಿ ಒಂದಾದ ಗಜಲಕ್ಷ್ಮಿ ರಾಜಯೋಗ ನಿರ್ಮಾಣವಾಗಲಿದೆ.
ಗಜಲಕ್ಷ್ಮಿ ರಾಜಯೋಗದ ಪ್ರಭಾವ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಸಮಯವನ್ನು ಕೆಲವು ರಾಶಿಯವರಿಗೆ ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವೆಂದರೆ...
ಮೇಷ ರಾಶಿ: ಗಜಲಕ್ಷ್ಮಿ ರಾಜಯೋಗವು ಮೇಷ ರಾಶಿಯವರ ಜೀವನದಲ್ಲಿ ಶುಭ ಫಲಗಳನ್ನು ತರಲಿದೆ. ಈ ಸಮಯದಲ್ಲಿ ನೀವು ಕೈ ಹಾಕಿದ ಪ್ರತಿ ಕೆಲಸದಲ್ಲಿಯೂ ಯಶಸ್ಸನ್ನು ಪಡೆಯುತ್ತೀರಿ. ವ್ಯಾಪಾರದಲ್ಲಿ ಲಾಭ, ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿಯನ್ನು ಕಾಣುವಿರಿ.
ಮಿಥುನ ರಾಶಿ: ಗುರು-ಶುಕ್ರರ ಸಂಯೋಗದಿಂದ ರೂಪುಗೊಳ್ಳಲಿರುವ ಗಜಲಕ್ಷ್ಮಿ ರಾಜಯೋಗವು ಮಿಥುನ ರಾಶಿಯವರಿಗೆ ಅನಿರೀಕ್ಷಿತ ಹಣಕಾಸಿನ ಲಾಭವನ್ನು ನೀಡಲಿದೆ. ಇದರಿಂದ ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ನಿಮ್ಮ ವೃತ್ತಿಜೀವನದಲ್ಲಿಯೂ ನೀವು ಅಪಾರ ಯಶಸ್ಸನ್ನು ಕಾಣಬಹುದು.
ಕರ್ಕಾಟಕ ರಾಶಿ: ಗಜಲಕ್ಷ್ಮಿ ರಾಜಯೋಗವು ಕರ್ಕಾಟಕ ರಾಶಿಯವರ ಅದೃಷ್ಟವನ್ನು ಬೆಳಗಿಸಲಿದೆ. ಈ ಸಮಯದಲ್ಲಿ ನೀವು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಪಡೆಯುವ ಸಾಧ್ಯತೆ ಇದೆ. ವ್ಯಾಪಾರ ಕ್ಷೇತ್ರದಲ್ಲಿ ಲಾಭ ಪಡೆಯುವಿರಿ. ಹೊಸ ಕೆಲಸ ಆರಂಭಿಸಲು ಯೋಚಿಸುತ್ತಿದ್ದರೆ ಇದು ಅತ್ಯುತ್ತಮ ಸಮಯ ಎಂತಲೇ ಹೇಳಬಹುದು. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.