ಕನ್ನಡದ ಕೋಟ್ಯಾಧಿಪತಿಗೆ ಡಾ. ಶಿವರಾಜ್‌ ಕುಮಾರ್‌ ಹೋಸ್ಟ್...!‌? ಅಪ್ಪು ಸ್ಥಾನಕ್ಕೆ ಮರುಜೀವ ತುಂಬಲು ಬರ್ತಿದ್ದಾರಾ ದೊಡ್ಮನೆ ಹಿರಿಮಗ?

Dr. Shivarajkumar in Kaun Banega Crorepati: ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌ ಅವರು ನಡೆಸಿಕೊಡುತ್ತಿದ್ದ ಕರ್ನಾಟಕದ ಅತ್ಯುತ್ತಮ ಟಿವಿ ಕಾರ್ಯಕ್ರಮ ಅಂದರೆ ಅದು ʼಕನ್ನಡದ ಕೋಟ್ಯಾಧಿಪತಿʼ. ಇದು ಕೇವಲ ಮನರಂಜನೆ, ಸಾಮಾನ್ಯ ಜ್ಞಾನ ನೀಡುವುವುದಷ್ಟೇ ಅಲ್ಲ, ಬದಲಾಗಿ ಅದೆಷ್ಟೀ ಬಡವರಿಗೆ ಸಹಾಯವಾಗಿ ನಡೆಯುತ್ತಿದ್ದ ಕಾರ್ಯಕ್ರಮ ಎಂದರೆ ತಪ್ಪಾಗಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌ ಅವರು ನಡೆಸಿಕೊಡುತ್ತಿದ್ದ ಕರ್ನಾಟಕದ ಅತ್ಯುತ್ತಮ ಟಿವಿ ಕಾರ್ಯಕ್ರಮ ಅಂದರೆ ಅದು ʼಕನ್ನಡದ ಕೋಟ್ಯಾಧಿಪತಿʼ. ಇದು ಕೇವಲ ಮನರಂಜನೆ, ಸಾಮಾನ್ಯ ಜ್ಞಾನ ನೀಡುವುವುದಷ್ಟೇ ಅಲ್ಲ, ಬದಲಾಗಿ ಅದೆಷ್ಟೀ ಬಡವರಿಗೆ ಸಹಾಯವಾಗಿ ನಡೆಯುತ್ತಿದ್ದ ಕಾರ್ಯಕ್ರಮ ಎಂದರೆ ತಪ್ಪಾಗಲ್ಲ.  

2 /7

ಅಪ್ಪು ಒಂದಷ್ಟು ಸೀಸನ್‌ ನಡೆಸಿಕೊಟ್ಟ ಬಳಿಕ ಕಾರ್ಯಕ್ರಮದಿಂದ ನಿರ್ಗಮಿಸಿದ್ದರು. ಆದರೆ ಇದೀಗ ಅವರು ನಮ್ಮನ್ನು ಅಗಲಿದ್ದಾರೆ. ಕಿರುತೆರೆಯಲ್ಲಿ ಮೊದಲ ಬಾರಿಗೆ ನಿರೂಪಕರಾಗಿ ಪುನೀತ್ ರಾಜ್‌ಕುಮಾರ್ ಕಾಣಿಸಿಕೊಂಡಿದ್ದು ಇದೇ ಶೋನಲ್ಲಿ.  

3 /7

ಇನ್ನೊಂದೆಡೆ ಈ ಕಾರ್ಯಕ್ರಮ ಮತ್ತೆ ಶುರುವಾಗಲಿದೆ ಎಂಬ ವದಂತಿ ಇದೆ. ಈ ಬೆನ್ನಲ್ಲೇ ಸುದೀಪ್‌ ಅವರು ಅಪ್ಪು ಸ್ಥಾನವನ್ನು ತುಂಬಲಿದ್ದಾರೆ ಎಂಬ ವದಂತಿ ಕೇಳಿಬಂದಿತ್ತು. ಆದರೆ ಇದನ್ನೂ ಮೀರಿದ ಅಪ್ಡೇಟ್‌ ಹೊರಬಿದ್ದಿದೆ.  

4 /7

ಹಿಂದಿಯಲ್ಲಿ ಪ್ರಸ್ತುತ ಬಿಗ್‌ ಬಾಸ್‌ನಂತೆಯೇ ಜನಪ್ರಿಯತೆ ಪಡೆದ ಮತ್ತೊಂದು ಕಾರ್ಯಕ್ರಮವೆಂದರೆ 'ಕೌನ್ ಬನೇಗಾ ಕರೋಡ್‌ಪತಿ' ಶೋ. ಇದನ್ನು ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಅವರು ನಡೆಸಿಕೊಡುತ್ತಾರೆ.  

5 /7

ಅನಾರೋಗ್ಯದಿಂದ ಬಳಲುತ್ತಿರುವ ನಟ ಶಿವರಾಜ್‌ ಕುಮಾರ್ ಶೀಘ್ರದಲ್ಲೇ ಅಮೆರಿಕಾಗೆ ತೆರಳಿ ಅಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಇತ್ತೀಚೆಗೆಯಷ್ಟೇ ಅವರ ಪತ್ನಿ ಗೀತಾ ಶಿವರಾಜ್‌ ಕುಮಾರ್‌ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಹೇಳಿದ್ದರು. ಅದಕ್ಕೂ ಮುನ್ನ ತಿರುಪತಿಗೆ ಭೇಟಿ ನೀಡಿ ಶಿವಣ್ಣ- ಗೀತಾ ದಂಪತಿ ಮುಡಿ ಕೊಟ್ಟು ದೇವರಲ್ಲಿ ಪ್ರಾರ್ಥನೆ ಸಲ್ಲಿದ್ದರು.  

6 /7

ಇದೀಗ 'ಕೌನ್ ಬನೇಗಾ ಕರೋಡ್‌ಪತಿ' ವೇದಿಕೆಯಲ್ಲಿ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಜನಸಾಮಾನ್ಯರ ಜೊತೆಗೆ ಸೆಲೆಬ್ರೆಟಿಗಳು ಕೂಡ ಆಗಾಗ್ಗೆ ಈ ಶೋನಲ್ಲಿ ಭಾಗವಹಿಸುವುದನ್ನು ಕಾಣಬಹುದು. ಅಂತೆಯೇ ಕರುನಾಡ ಮನೆಮಗ ಶಿವಣ್ಣ ಈ ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬ ಸುದ್ದಿ ಬಂದಿದೆ.  

7 /7

ಇವೆಲ್ಲದರ ಜೊತೆಗೆ ಕನ್ನಡದ ಕೋಟ್ಯಾಧಿಪತಿ ಕೂಡ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಅದೇ ಕಾರಣದಿಂದ ಶಿವಣ್ಣ ಅಮಿತಾಬ್‌ ಬಚ್ಚನ್‌ ಅವರನ್ನು  'ಕೌನ್ ಬನೇಗಾ ಕರೋಡ್‌ಪತಿ' ವೇದಿಕೆಯಲ್ಲಿ ಭೇಟಿಯಾಗಿದ್ದಾರೆ. ಇನ್ಮುಂದೆ ಅಪ್ಪು ಸ್ಥಾನವನ್ನು ಶಿವಣ್ಣ ತುಂಬಲಿದ್ದಾರೆ ಎಂದೆಲ್ಲಾ ಅಭಿಮಾನಿಗಳು ಸೋಶಿಯಲ್‌ ಮೀಡಿಯಾದಲ್ಲಿ ಮಾತನಾಡುತ್ತಿದ್ದಾರೆ. ಒಂದು ವೇಳೆ ಈ ಮಾತುಗಳು ನಿಜವೇ ಆದಲ್ಲಿ, ದೊಡ್ಮನೆ ಮೇಲೆ ಅಭಿಮಾನ ಹೊಂದಿರುವ ಜನರಷ್ಟೇ ಅಲ್ಲದೆ, ಇಡೀ ಕರ್ನಾಟಕವೇ ಸಂತಸ ಪಡುವುದು ಖಚಿತ.