Gruha Lakshmi: ರೇಷನ್‌ ಕಾರ್ಡ್‌ ರದ್ದು ಬೆನ್ನಲ್ಲೆ ʻಗೃಹಲಕ್ಷ್ಮಿಯʼರಿಗೆ ಶಾಕ್‌ ಕೊಟ್ಟ ಸರ್ಕಾರ! ಈ ಮಹಿಳೆಯರಿಗೆ ಸಿಗಲ್ಲ 2000 ರೂ.?!

Gruhaakshmi: 2023ರ ಚುಣಾವಣೆಯ ಸಮಯದಲ್ಲಿ ಕಾಂಗ್ರೆಸ್‌ ಸರ್ಕಾರ ರಾಜ್ಯದ ಜನರಿಗೆ 5 ಗ್ಯಾರಂಟಿಗಳನ್ನು ಘೋಷಿಸಿತ್ತು. ಅದರಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದು. ಯೋಜನೆ ಶುರುವಾದ ಮೊದಲಿನಲ್ಲಿ ಸರಿಯಾದ ಸಮಯಕ್ಕೆ ಮಹಿಳೆಯರ ಖಾತೆ ಸೇರುತ್ತಿದ್ದ ಗೃಹಲಕ್ಷ್ಮಿ ಹಣ ಕೆಲವು ತಿಂಗಳುಗಳಿಂದ ಮಹಿಳೆಯರ ಖಾತೆ ಸೇರುತ್ತಿಲ್ಲ. 
 

1 /9

Gruhaakshmi: 2023ರ ಚುಣಾವಣೆಯ ಸಮಯದಲ್ಲಿ ಕಾಂಗ್ರೆಸ್‌ ಸರ್ಕಾರ ರಾಜ್ಯದ ಜನರಿಗೆ 5 ಗ್ಯಾರಂಟಿಗಳನ್ನು ಘೋಷಿಸಿತ್ತು. ಅದರಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದು. ಯೋಜನೆ ಶುರುವಾದ ಮೊದಲಿನಲ್ಲಿ ಸರಿಯಾದ ಸಮಯಕ್ಕೆ ಮಹಿಳೆಯರ ಖಾತೆ ಸೇರುತ್ತಿದ್ದ ಗೃಹಲಕ್ಷ್ಮಿ ಹಣ ಕೆಲವು ತಿಂಗಳುಗಳಿಂದ ಮಹಿಳೆಯರ ಖಾತೆ ಸೇರುತ್ತಿಲ್ಲ.   

2 /9

ಇನ್ನೂ, ಮೂರು ತಿಂಗಳ ಗೃಹಲಕ್ಷ್ಮಿ ಹಣ ಬಾಕಿ ಉಳಿದಿದ್ದು, ಜನ ಹಣ ಖಾತೆ ಯಾವಾಗ ಸೇರುತ್ತೆ ಎಂದು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ, ಇದರ ಬೆನ್ನಲ್ಲೆ ಎಂ.ಬಿ. ಪಾಟಿಲ್‌ ಅವರು ಕೊಟ್ಟಿರುವ ಹೇಳಿಕೆ ಸದ್ಯ ಮಹಿಳೆಯರ ಖಾತೆ ಸೇರುತ್ತಿರುವ ಹಣಕ್ಕೆ ಬ್ರೇಕ್‌ ಬೀಳುತ್ತಾ ಎನ್ನುವ ಅನುಮಾನವನ್ನು ಹೆಚ್ಚಿಸಿದೆ.  

3 /9

ಇತ್ತೀಚೆಗಷ್ಟೆ ಗೃಹಲಕ್ಷ್ಮಿ ಹಣದ ಕುರಿತು ಮಾತನಾಡಿದ್ದ ಸಿದ್ದರಾಮಯ್ಯ ಅವರು ಶೀಘ್ರವೇ ಮಹಿಳೆಯರ ಖಾತೆಗೆ 2000 ರೂ. ಹಾಕುವ ಎಲ್ಲಾ ವ್ಯವಸ್ತೆ ನಡೆಯುತ್ತಿದೆ ಎಂದು ಹೇಳಿದ್ದರು.  

4 /9

ಆದರೆ, ಇದೀಗ ಎಂ.ಬಿ. ಪಾಟಿಲ್‌ ಅವರು ಕೊಟ್ಟಿರುವ ಹೇಳಿಕೆ ಕೆಲವು ಮಹಿಳೆಯರಲ್ಲಿ ನಿರಾಸೆ ಮೂಡಿಸಿದೆ. ಇಂದು ಮಾತನಾಡಿದ ಎಂ.ಬಿ. ಪಾಟಿಲ್‌ ಅವರು ಶ್ರೀಮಂತ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಹಾಕುವುದನ್ನು ನಿಲ್ಲಿಸಬೇಕು ಎಂದಿದ್ದಾರೆ.  

5 /9

ಹೌದು, ಗೃಹಲಕ್ಷ್ಮಿ ಹನದ ವಿಚಾರವಾಗಿ ಮಾಧ್ಯಮದ ಜೊತೆ ಮಾತನಾಡಿದ ಅವರು ರಾಜ್ಯಡ ಶ್ರೀಮಂತ ಮಹಿಳೆಯರ ಖಾತೆ ಸೇರುತ್ತಿರುವ 2000 ರೂ. ಹಣ ನಿಲ್ಲಿಸಬೇಕು.  

6 /9

ಶ್ರೀಮಂತರಿಗೆ ನೀಡುತ್ತಿರುವ ಹಣವನ್ನು ನಿಲ್ಲಿಸಿ, ಮತ್ತಷ್ಟು ಬಡ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಖಾತೆ ಸೇರುವ ವ್ಯವಸ್ತೆ ಮಾಡಿಕೊಡಬೇಕು ಎಂದರು.  

7 /9

ಇನ್ನೂ, ಸರ್ಕಾರ ಎಂ.ಬಿ ಪಾಟಿಲ್‌ ಅವರು ಹೇಳಿರುವ ವಿಚಾರವನ್ನು ಪರಿಗಣನೆಗೆ ತೆಗೆದುಕೊಂಡು ಗೃಹಲಕ್ಷ್ಮಿ ಹಣದ ವಿಚಾರದಲ್ಲಿ ಬದಲಾವಣೆ ಮಾಡುತ್ತಾ ಎನ್ನುವುದನ್ನು ನೋಡಬೇಕಿದೆ.  

8 /9

ಈ ಹಿಂದೆಯಷ್ಟೆ, ರಾಜ್ಯ ಸರ್ಕಾರ ರೇಷನ್‌ ಕಾರ್ಡ್‌ ರದ್ದುಗೊಳಿಸುವ ಮೂಲಕ ರಾಜ್ಯದ ಹಲವು ಕುಟುಂಬಗಲಿಗೆ ಶಾಕ್‌ ಕೊಟ್ಟಿತ್ತು. ಇದೀಗ ಗೃಹಲಕ್ಷ್ಮಿ ವಿಚಾರದಲ್ಲೂ ಜನರು ನಿರಾಸೆಗೊಂಡಿದ್ದು, ಹಣ ಮಹಿಳೆಯರ ಖಾತೆಗೆ ಯಾವಾಗ ಸೇರಲಿದೆ ಎಂಬುದನ್ನು ಇನ್ನು ಮುಂದಷ್ಟೆ ಕಾದು ನೋಡಬೇಕಿದೆ.  

9 /9

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಮೂಲಗಳ ಮಾಹಿತಿಯನ್ನು ಆಧರಿಸಿದೆ, ಇದನ್ನು ZEE KANNADA NEWS ಖಚಿತಪಡಿಸುವುದಿಲ್ಲ.