7th Pay Commission: ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ, ಬರುವ ಮಾರ್ಚ್ ತಿಂಗಳಿನಲ್ಲಿಯೇ ಘೋಷಣೆ!

7th Pay Commission Update: ಶೀಘ್ರದಲ್ಲಿಯೇ ಕೇಂದ್ರ ನೌಕರರಿಗೆ ಸಿಗುವ ತುಟ್ಟಿಭತ್ಯೆಯಲ್ಲಿ ಹೆಚ್ಚಳವಾಗಲಿದೆ ಎನ್ನಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಮಾರ್ಚ್ 1 ರಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಸರ್ಕಾರ ಡಿಎ ಹೆಚ್ಚಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಯನ್ನು ವರ್ತಿಸಲಾಗಿದೆ. 
 

7th Pay Commission Update: ಶೀಘ್ರದಲ್ಲಿಯೇ ಕೇಂದ್ರ ನೌಕರರಿಗೆ ಸಿಗುವ ತುಟ್ಟಿಭತ್ಯೆಯಲ್ಲಿ ಹೆಚ್ಚಳವಾಗಲಿದೆ ಎನ್ನಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಮಾರ್ಚ್ 1 ರಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಸರ್ಕಾರ ಡಿಎ ಹೆಚ್ಚಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಯನ್ನು ವರ್ತಿಸಲಾಗಿದೆ. ಈ ಬಾರಿ ಸರ್ಕಾರ ತುಟ್ಟಿಭತ್ಯೆಯನ್ನು ಶೇ.4ರಷ್ಟು ಹೆಚ್ಚಿಸಬಹುದು ಎಂದು ಮಾಧ್ಯಮ ವರದಿಯಲ್ಲಿ ನಿರೀಕ್ಷೆ ವ್ಯಕ್ತಪಡಿಸಲಾಗಿದೆ. ಇದು ಸಂಭವಿಸಿದಲ್ಲಿ, ನೌಕರರ ತುಟ್ಟಿಭತ್ಯೆ 38% ರಿಂದ 42% ಕ್ಕೆ ಹೆಚ್ಚಾಗಲಿದೆ. ಇದರಿಂದ ಸುಮಾರು 52 ಲಕ್ಷ ಕೇಂದ್ರ ನೌಕರರು ಮತ್ತು 60 ಲಕ್ಷ ಪಿಂಚಣಿದಾರರಿಗೆ ಭಾರಿ ಅನುಕೂಲವಾಗಲಿದೆ.

 

ಇದನ್ನೂ ಓದಿ-ಹಿರಿಯ ನಾಗರಿಕರಿಗೆ ಇದಕ್ಕಿಂತ ಅತ್ಯುತ್ತಮ ಯೋಜನೆ ಮತ್ತೊಂದಿಲ್ಲ! ಬೇಗ ಅಪ್ಲೈ ಮಾಡಿ ತಿಂಗಳಿಗೆ 5 ಸಾವಿರ ಪಡೆಯಿರಿ

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

1 ತುಟ್ಟಿ ಭತ್ಯೆ ಎಂದರೇನು?: ತುಟ್ಟಿಭತ್ಯೆ ಎಂದರೆ ಹಣದುಬ್ಬರದ ಹೆಚ್ಚಳದ ಹೊರತಾಗಿಯೂ ತಮ್ಮ ಜೀವನ ಮಟ್ಟವನ್ನು ಕಾಪಾಡಿಕೊಳ್ಳಲು ಸರ್ಕಾರಿ ನೌಕರರಿಗೆ ನೀಡಲಾಗುವ ಹಣ ಎಂದರ್ಥ. ಈ ಹಣವನ್ನು ಸರ್ಕಾರಿ ನೌಕರರು, ಸಾರ್ವಜನಿಕ ವಲಯದ ನೌಕರರು ಮತ್ತು ಪಿಂಚಣಿದಾರರಿಗೆ ನೀಡಲಾಗುತ್ತದೆ. ಪ್ರಸ್ತುತ ದೇಶದಲ್ಲಿ ಇರುವ ಹಣದುಬ್ಬರಕ್ಕೆ ಅನುಗುಣವಾಗಿ ತುತ್ತಿಭತ್ಯೆಯ ಲೆಕ್ಕಾಚಾರವನ್ನು ಪ್ರತಿ 6 ತಿಂಗಳಿಗೊಮ್ಮೆ ನಡೆಸಲಾಗುತ್ತದೆ. ಆಯಾ ವೇತನ ಶ್ರೇಣಿಯ ಆಧಾರದ ಮೇಲೆ ನೌಕರರ ಮೂಲ ವೇತನದ ಪ್ರಕಾರ ಇದನ್ನು ಲೆಕ್ಕಹಾಕಲಾಗುತ್ತದೆ. ನಗರ, ಅರೆ-ನಗರ ಅಥವಾ ಗ್ರಾಮೀಣ ಪ್ರದೇಶಗಳಲ್ಲಿನ ಉದ್ಯೋಗಿಗಳಿಗೆ ತುಟ್ಟಿ ಭತ್ಯೆ ವಿಭಿನ್ನವಾಗಿರಬಹುದು.  

2 /4

2. ತುಟ್ಟಿಭತ್ಯೆಯನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?: ತುಟ್ಟಿಭತ್ಯೆಯನ್ನು ನಿರ್ಧರಿಸಲು ಸೂತ್ರವೊಂದನ್ನು ರೂಪಿಸಲಾಗಿದೆ. ಕೇಂದ್ರ ಸರ್ಕಾರಿ ನೌಕರರಿಗೆ, ಸೂತ್ರವು [(ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕದ (AICPI) ಕಳೆದ 12 ತಿಂಗಳ ಸರಾಸರಿ - 115.76)/115.76]×100. ಈಗ ನಾವು PSU (ಸಾರ್ವಜನಿಕ ವಲಯದ ಘಟಕಗಳು) ನಲ್ಲಿ ಕೆಲಸ ಮಾಡುವ ಜನರ ತುಟ್ಟಿಭತ್ಯೆಯ ಬಗ್ಗೆ ಹೇಳುವುದಾದೆ, ಅದರ ಲೆಕ್ಕಾಚಾರದ ವಿಧಾನ ತುಟ್ಟಿಭತ್ಯೆ ಶೇಕಡಾವಾರು = (ಕಳೆದ 3 ತಿಂಗಳ ಗ್ರಾಹಕರ ಬೆಲೆ ಸೂಚ್ಯಂಕದ ಸರಾಸರಿ (ಆಧಾರ ವರ್ಷ 2001 = 100)- 126.33) x100  

3 /4

3. ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ ಎಂದರೇನು?: ಭಾರತದಲ್ಲಿ ಹಣದುಬ್ಬರದಲ್ಲಿ ಎರಡು ವಿಧಗಳಿವೆ. ಒಂದು ಚಿಲ್ಲರೆ ಹಣದುಬ್ಬರ ಮತ್ತು ಇನ್ನೊಂದು ಸಗಟು ಹಣದುಬ್ಬರ. ಚಿಲ್ಲರೆ ಹಣದುಬ್ಬರ ದರವು ಸಾಮಾನ್ಯ ಗ್ರಾಹಕರು ಉಲ್ಲೇಖಿಸಿದ ಬೆಲೆಗಳನ್ನು ಆಧರಿಸಿದೆ. ಇದನ್ನು ಗ್ರಾಹಕ ಬೆಲೆ ಸೂಚ್ಯಂಕ (CPI) ಎಂದೂ ಕರೆಯುತ್ತಾರೆ.  

4 /4

4. ಡಿಎ ನಂತರ ಎಷ್ಟು ಲಾಭ?: ಇದಕ್ಕಾಗಿ ಈ ಕೆಳಗಿನ ಸೂತ್ರದಲ್ಲಿ ನಿಮ್ಮ ಸಂಬಳವನ್ನು ಭರ್ತಿ ಮಾಡಿ..(ಮೂಲ ವೇತನ + ಗ್ರೇಡ್ ಪೇ) × DA % = DA ಮೊತ್ತ. ನೀವು ಸರಳ ಭಾಷೆಯಲ್ಲಿ ಅರ್ಥಮಾಡಿಕೊಂಡರೆ, ಮೂಲ ವೇತನಕ್ಕೆ ಗ್ರೇಡ್ ವೇತನವನ್ನು ಸೇರಿಸಿದ ನಂತರ ಮಾಡುವ ಸಂಬಳದಲ್ಲಿ ತುಟ್ಟಿ ಭತ್ಯೆಯ ದರವನ್ನು ಗುಣಿಸಲಾಗುತ್ತದೆ. ಬರುವ ಫಲಿತಾಂಶವನ್ನು ತುಟ್ಟಿ ಭತ್ಯೆ (ಡಿಎ) ಎಂದು ಕರೆಯಲಾಗುತ್ತದೆ. ಈಗ ಇದನ್ನೂ ಒಂದು ಉದಾಹರಣೆ ಮೂಲಕ ಅರ್ಥಮಾಡಿಕೊಳ್ಳೋಣ, ನಿಮ್ಮ ಮೂಲ ವೇತನ 10 ಸಾವಿರ ರೂಪಾಯಿ ಮತ್ತು ಗ್ರೇಡ್ ಪೇ 1000 ರೂಪಾಯಿ ಎಂದು ಭಾವಿಸೋಣ. ಎರಡನ್ನೂ ಸೇರಿಸಿ ಒಟ್ಟು 11 ಸಾವಿರ ರೂ. ಈಗ ಹೆಚ್ಚಿದ 42% ತುಟ್ಟಿಭತ್ಯೆಯ ಪ್ರಕಾರ 4,620 ರೂ. ನಿಮ್ಮ ತುಟ್ಟಿ ಭತ್ಯೆ ಆಗುತ್ಗ್ತದೆ. ನಿಮ್ಮ ಒಟ್ಟು ಸಂಬಳವನ್ನು ಸೇರಿಸಿ 15,620 ರೂ. ಈ ಹಿಂದೆ, 38% ಡಿಎ ಪ್ರಕಾರ, ನೀವು ರೂ 15,180 ಸಂಬಳ ಪಡೆಯುತ್ತಿದ್ದೀರಿ. ಅಂದರೆ ಶೇ.4ರಷ್ಟು ಡಿಎ ಹೆಚ್ಚಿಸಿದ ನಂತರ ಪ್ರತಿ ತಿಂಗಳು 440 ರೂ.ಗಳ ಲಾಭ ಸಿಗಲಿದೆ.