ಎಂ.ಟಿ.ಆರ್ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಹೌದು,ನಮ್ಮ ಬೆಂಗಳೂರಿನ ಮೂಲದ ಕಂಪನಿ ಶುದ್ಧ ಶಾಕಾಹಾರಿ ತಿಂಡಿ ತಿನಸುಗಳು, ಸ್ವೀಟ್ಸ್ ಗಳ ತಯಾರಿಕೆಗೆ ಜಗತ್ತಿನೆಲ್ಲೆಡೆ ಹೆಸರುವಾಸಿಯಾಗಿದೆ.ಈಗ ಇಂತಹ ಅಪ್ಪಟ ಕನ್ನಡ ಮೂಲದ ಕಂಪನಿಯ ಜಗತ್ತಿನಲ್ಲೆಡೆ ತನ್ನದೇ ಲೋಗೋ ಹೊಂದುವ ಮೂಲಕ ಜಾಗತಿಕ ಕಂಪನಿಯಾಗಿದ್ದು ಹೇಗೆ ಎನ್ನುವುದನ್ನು ತಿಳಿಯೋಣ ಬನ್ನಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಪರಂಪಲ್ಲಿ ಯಜ್ಞನಾರಾಯಣ ಮಯ್ಯ,' ಹಾಗೂ ಅವರ ಸೋದರರು ಪರಂಪಲ್ಲಿ ಯಜ್ಞನಾರಾಯಣಮಯ್ಯ ಮತ್ತು ಸೋದರರು ಸೇರಿ ೧೯೨೪ ರಲ್ಲಿ, 'ಮಾವಳ್ಳಿ ಟಿಫಿನ್ ರೂಮ್', ಸ್ಥಾಪನೆ ಮಾಡಿದರು.
ಸುಮಾರು ೭೦ ರ ದಶಕದ ಮಧ್ಯದಲ್ಲಿ, ಭಾರತದಲ್ಲಿ ತುರ್ತು ಪರಿಸ್ಥಿತಿಯನ್ನು ಆಗಿನ ಪ್ರಧಾನಿಯವರಾಗಿದ್ದ, 'ಇಂದಿರಾಜಿ' ಯವರು ಘೋಷಿಸಿದಾಗ ಆಹಾರ ನಿಯಂತ್ರಣ ಕಾಯ್ದೆಯನ್ನು ಖಡ್ಡಾಯವಾಗಿ, ಆಹಾರ ಮಾರಾಟಗಾರರ ಮೇಲೆ ಲಾಗುಮಾಡಲಾಯಿತು. ತಿನ್ನುವ ಆಹಾರಗಳನ್ನು ಕಡಿಮೆ ದರದಲ್ಲಿ ಗ್ರಾಹಕರಿಗೆ, ಮಾರಾಟ ಮಾಡಬೆಕೆನ್ನುವ ಸುಗ್ರೀವಾಜ್ಞೆಯನ್ನು ಆಗಿನ ಸರಕಾರ ಹೊರಡಿಸಿತು.
ತಿನ್ನುವ ಆಹಾರಗಳನ್ನು ಕಡಿಮೆ ದರದಲ್ಲಿ ಗ್ರಾಹಕರಿಗೆ, ಮಾರಾಟ ಮಾಡಬೆಕೆನ್ನುವ ಸುಗ್ರೀವಾಜ್ಞೆಯನ್ನು ಆಗಿನ ಸರಕಾರ ಹೊರಡಿಸಿತು.
'ಎಮ್.ಟಿ. ಆರ್' ಹೋಟೆಲ್, ತನ್ನ ಆಹಾರಸಾಮಗ್ರಿಗಳ ಉತ್ಪಾದನೆಯ ಗುಣಮಟ್ಟವನ್ನು ಉಳಿಸಿಕೊಂಡು, ಸರಕಾರ ಹೇಳಿದ ಸೋವಿ ದರದಲ್ಲಿ ಮಾರುವ ಸಾಹಸ ಮಾಡಬೇಕಾಯಿತು. ಈ ವ್ಯವಸ್ಥೆ ಹೆಚ್ಚು ದಿನ ನಡೆಯಲಿಲ್ಲ. ಯಜ್ಞ ನಾರಾಯಣ ಮಯ್ಯನವರು ತಮ್ಮ ವ್ಯಾಪಾರದಲ್ಲಿ ಸ್ವಲ್ಪ ಮಾರ್ಪಾಡುಗಳನ್ನು ಮಾಡಿಕೊಂಡರು.
'ರೆಡಿಮೇಡ್ ವಸ್ತುಗಳನ್ನು ಪ್ಯಾಕೆಟ್ ಗಳಲ್ಲಿ ಶೇಖರಿಸಿ ಮಾರುವ' ಹೊಸ ವಿಧಾನವನ್ನು ಅವರು ಎಚ್ಚರಿಕೆಯಿಂದ ಗಮನಿಸಿದರು. ಮಾರುಕಟ್ಟೆಯಲ್ಲಿ ಆಗ ಕೆಲವು ಕಂಪೆನಿಗಳು ಇದನ್ನು ಯಶಸ್ವಿಯಾಗಿ ಶುರುಮಾಡಿದ್ದರು. ಅದೇ ರೀತಿ, ಮಯ್ಯರವರೂ ತಯಾರಿಸಿ ಪ್ಯಾಕ್ ಮಾಡಿದ ಭಕ್ಷಗಳ ಪ್ಯಾಕೇಟ್ ಗಳ, ಮಾರಾಟ ಮಾಡಲು ಪ್ರಾರಂಭಿಸಿದರು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, ಚಟ್ನಿ ಮತ್ತು ರಸಂ ಮತ್ತಿತರೆ ಸಾಂಬಾರ ಪದಾರ್ಥಗಳು, 'ಎಮ್.ಟಿ.ಆರ್,' ನ ಕೌಂಟರ್ ಗಳಲ್ಲಿ ಸಿಗುತ್ತಿದ್ದವು.
ಇದರ ಬಗ್ಗೆ ಎಲ್ಲಾ ವಿವರಗಳನ್ನೂ ಜಾಹಿರಾತುಗಳಲ್ಲಿ ಮತ್ತು ವಿಶ್ವಪರ್ಯಟಕರ ದಿನಚರಿಯ ಪಟ್ಟಿಗಳಲ್ಲಿ ಸೇರಿಸಲಾಯಿತು. ವಾಯುಯಾನ ಮತ್ತು ರೈಲು ಪ್ರಯಾಣ, ಬಸ್ಸು ಪ್ರಯಾಣಿಕರ, 'ಗ್ಲೋಬ್ ಟ್ರೆಕ್ಕರ್ ಬುಕ್ ಲೆಟ್ ,' ಗಳಲ್ಲಿ, ಆಕರ್ಷಕವಾದ ಚಿತ್ರಗಳಿಂದ ಪ್ರಕಟವಾಗುವ 'ಆಡ್' ಗಳ ಮುಖಾಂತರ, 'ಮುಖಪತ್ರ,' ಗಳಲ್ಲಿ ಭಾರತೀಯ ಮನೆಯಲ್ಲಿ ಮಾಡಿದ ತಾಜಾ-ಖಾದ್ಯಗಳ ಪರಿಚಯ, ಹಾಗೂ ತಿಳಿಸಿದ ವಸ್ತುಗಳ ಲಭ್ಯತೆಯ ಬಗ್ಗೆ ವಿವರಗಳು, ಸಮರ್ಪಕವಾಗಿ ವಿವರಿಸಲಾಗಿತ್ತು. ಎಮ್.ಟಿ.ಆರ್,' ಹೋಟೆಲ್ ನಲ್ಲಿ, " ಮಸಾಲ ದೋಸೆ," ತಿನ್ನಲು 'ಕ್ಯೂ' ನಲ್ಲಿ ನಿಂತು ಪಡೆಯುವ ಸಂದರ್ಭಗಳೇ ಹೆಚ್ಚು. ಒಮ್ಮೆ ಚೀಫ್ ಮಿನಿಸ್ಟರ್ ಕೂಡ , ಲೈನ್ ನಲ್ಲಿ ನಿಂತು ತಿಂದಿರುವ ಸಂದರ್ಭಗಳಿವೆ.ಅಷ್ಟರ ಮಟ್ಟಿಗೆ ಎಂ ಟಿ ಆರ್ ಪ್ರಸಿದ್ದಿ ಪಡೆದಿದೆ.