ಬಿಗ್‌ ಬಾಸ್‌ ಸ್ಪರ್ಧಿ ಕಾಲು ಮುರಿತ..! ನಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿ ನಟಿ... ಏನಾಯ್ತು..?

Bigg Boss Divi Vaidya : ಈ ಬಿಗ್‌ ಬಾಸ್‌ ಸ್ಪರ್ಧಿ ಮನೆಯಲ್ಲಿ ಇದ್ದಾಗಲೂ ಕ್ರೇಜ್‌ ಹೊಂದಿದ್ದರು.. ದೊಡ್ಮನೆಯಿಂದ ಹೊರ ಬಂದ ನಂತರವಂತೂ ಸೋಷಿಯಲ್ ಮೀಡಿಯಾದಲ್ಲಿ ಸಖತ್‌ ಫೇಮಸ್ ಆಗಿದ್ದಾರೆ. ಕೆಲವು ವರ್ಷಗಳ ಹಿಂದೆ, ಈ ಚೆಲುವೆ ಸಿನಿಮಾಗಳಲ್ಲಿ ಸಣ್ಣ ಪಾತ್ರಗಳನ್ನು ನಿರ್ವಹಿಸಿ, ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾದರು.  ಸಧ್ಯ ನಟಿ ಕಾಲಿಗೆ ಬೆಟ್ಟಗಾಗಿದ್ದು ಬೆಡ್‌ ರೆಸ್ಟ್‌ ಪಡೆಯುತ್ತಿದ್ದಾರೆ.. 
 

1 /6

ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿದ್ದ ಸುಂದರಿ ಸಧ್ಯ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟಿವ್‌ ಆಗಿದ್ದು, ನಿಯಮಿತವಾಗಿ ಫೋಟೋಶೂಟ್, ವಿಡಿಯೋಗಳನ್ನು ಶೇರ್ ಮಾಡುತ್ತ ಟ್ರೇಂಡ್‌ ಕ್ರಿಯೇಟ್‌ ಮಾಡುತ್ತಿದ್ದಾಳೆ..  

2 /6

ಆದರೆ ಈಗ ಇದ್ದಕ್ಕಿದ್ದಂತೆ ಈ ಸುಂದರಿಯ ಪೋಸ್ಟ್ ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ... ಹೌದು.. ನಟಿ ದೇವಿ ವೈದ್ಯ... ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಮೇಲೆ ಈಕೆ ಕ್ರೇಜ್ ಹೆಚ್ಚಾಯಿತು. ದೊಡ್ಮನೆ ಸೇರುವುದಕ್ಕಿಂತ ಮೊದಲು ಕೆಲವು ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದ್ದರು.   

3 /6

ಕೆಲವು ಜಾಹೀರಾತುಗಳನ್ನೂ ಮಾಡಿದ್ದಾರೆ. ಮಹೇಶ್ ಬಾಬು ಅಭಿನಯದ ಮಹರ್ಷಿ ಚಿತ್ರದ ದೃಶ್ಯವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.. ಬಿಗ್ ಬಾಸ್ ರಿಯಾಲಿಟಿ ಶೋ ನಂತರ ತೆಲುಗಿನಲ್ಲಿ ದೇವಿಗೆ ಆಫರ್‌ಗಳು ಹೆಚ್ಚಾದವು. ಆದರೆ, ಸರಿಯಾದ ಬ್ರೇಕ್ ಕೊಡುವ ಪಾತ್ರಗಳು ಸಿಗಲಿಲ್ಲ.   

4 /6

ಆದರೆ ಬಂದ ಪ್ರತಿಯೊಂದು ಅವಕಾಶವನ್ನೂ ಚನ್ನಾಗಿ ಬಳಸಿಕೊಳ್ಳುತ್ತಾರೆ. ವೆಬ್ ಸೀರೀಸ್ ಕೂಡ ಹಾಗೆಯೇ. ಹರಿಕಥಾ ಎಂಬ ಇತ್ತೀಚೆಗಿನ ವೆಬ್ ಸೀರಿಸ್ ನಲ್ಲಿ ನಟಿಸಿ ಜನ ಮೆಚ್ಚುಗೆಗೆ ಪಾತ್ರರಾದರು. ಅಷ್ಟೇ ಅಲ್ಲ, ದಿವಿ ಸೋಷಿಯಲ್ ಮೀಡಿಯಾದಲ್ಲಿ ಗ್ಲಾಮರ್ ಶೋ ಮೂಲಕ ಪಡ್ಡೆ ಹುಡುಗರ ಮನ ಗೆಲ್ಲುತ್ತಿರುತ್ತಾರೆ.  

5 /6

ಸದಾ ಕ್ರೇಜಿ ಫೋಟೋಗಳನ್ನು ಶೇರ್ ಮಾಡುವ ದೇವಿ ಕ್ರಿಸ್‌ಮಸ್ ದಿನದಂದು ಕಾಲಿಗೆ ಗಾಯವಾಗಿರುವ ಪೋಸ್ಟ್ ಹಂಚಿಕೊಂಡಿದ್ದಾರೆ.. ಸುಂದರಿಯ ಕಾಲಿಗೆ ಸಿಮೆಂಟ್ ಪಟ್ಟಿಯನ್ನು ಹಾಕಲಾಗಿದ್ದು ನಡೆದಾಡುವ ಸ್ಥಿತಿಯಲ್ಲಿ ಇಲ್ಲ ಎನಿಸುತ್ತದೆ.. ಸಧ್ಯ ಈ ಚಿತ್ರವನ್ನು ನೋಡಿದ ಈಕೆಯ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.  

6 /6

ಸದ್ಯ ದೇವಿ ಶೇರ್ ಮಾಡಿರುವ ಫೋಟೋಗಳು ವೈರಲ್ ಆಗುತ್ತಿದ್ದಂತೆ ಫಾಲೋವರ್ಸ್ ಗಾಬರಿಯಾಗಿದ್ದಾರೆ. ದಿವಿಗೆ ಏನಾಯಿತು ಅಂತ ಕಾಮೆಂಟ್ ಮಾಡಿ ಪ್ರಶ್ನೆ ಮಾಡುತ್ತಿದ್ದಾರೆ.. ಅಲ್ಲದೆ ಬೇಗ ಚೇತರಿಸಿಕೊಳ್ಳಿ ಅಂತ ವಿಶ್‌ ಮಾಡುತ್ತಿದ್ದಾರೆ.. ಸಧ್ಯ ನಟಿ ಕಾಲಿಗೆ ಪೆಟ್ಟಾಗಿರುವ ಕಾರಣ ಕೆಲ ವರ್ಷಗಳ ಕಾಲ ಶೂಟಿಂಗ್ ಗೆ ಬ್ರೇಕ್ ಬೀಳಲಿದೆ.