Ananth Ambani Wedding Cost :ಅನಂತ್ ಮತ್ತು ರಾಧಿಕಾ ಮದುವೆ ಕಾರ್ಡ್ ಗಾಗಿಯೇ ನೀರಿನಂತೆ ಹಣ ಹರಿಸಲಾಗಿದೆ.ಒಂದು ಕಾರ್ಡ್ ಬೆಲೆಯಲ್ಲಿ ಒಂದು ಅದ್ದೂರಿ ಮದುವೆಯೇ ನಡೆಯಬಹುದಿತ್ತು.
Ananth Ambani Wedding Cost : ಅನಂತ್ ಅಂಬಾನಿ ಮದುವೆ ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಪ್ರಪಂಚದಾದ್ಯಂತದ ವಿವಿಐಪಿ ಸೆಲೆಬ್ರಿಟಿಗಳು ಈ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ಮದುವೆಗೆ ಹಣದ ಹೊಳೆಯೇ ಹರಿದಿದೆ. ಇದು ವಿಶ್ವದ ಅತ್ಯಂತ ದುಬಾರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಜುಲೈ 12 ರಂದು ಅನಂತ್ ಮತ್ತು ರಾಧಿಕಾ ಸಪ್ತಪದಿ ತುಳಿದಿದ್ದಾರೆ.ಈ ಮದುವೆಯಲ್ಲಿ ನೀರಿನಂತೆ ಹಣ ಖರ್ಚಾಗಿದೆ.ಅಂಬಾನಿ ಮನೆಯ ಈ ಮದುವೆ ಜಗತ್ತಿನ ಅತ್ಯಂತ ದುಬಾರಿ ಮದುವೆ. ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಈ ಮದುವೆ ನಡೆದಿದೆ.
ಅನಂತ್ ಮತ್ತು ರಾಧಿಕಾ ಮದುವೆಯ ತಯಾರಿ ವರ್ಷಗಳಿಂದಲೇ ನಡೆಯುತ್ತಿತ್ತು. ಮದುವೆಯ ಎಲ್ಲಾ ಜವಾಬ್ದಾರಿಯನ್ನು ಡಿಎನ್ಎ ಎಂಟರ್ಟೈನ್ಮೆಂಟ್ ವಹಿಸಿಕೊಂಡಿತ್ತು. ಹಲವು ಬಿಸಿಸಿಐ ಮತ್ತು ಐಪಿಎಲ್ ಕಾರ್ಯಕ್ರಮಗಳನ್ನು ಆಯೋಜಿಸಿರುವ ಈ ಸಂಸ್ಥೆ ಮುಖೇಶ್ ಅಂಬಾನಿ ಮನೆ ಆಂಟಿಲಿಯಾದ ಅಲಂಕಾರದ ಜವಾಬ್ದಾರಿ ವಹಿಸಿತ್ತು.
ಈ ಮದುವೆಯಲ್ಲಿ ಸುಮಾರು 2,500 ಬಗೆ ಖಾದ್ಯಗಳು ಇತ್ತು ಎಂದು ಹೇಳಲಾಗಿದೆ. ಸ್ಥಳೀಯ ಆಹಾರದಿಂದ ಹಿಡಿದು ವಿದೇಶಿ ಐಟಂ ವರೆಗೆ ಎಲ್ಲವೂ ಈ ಮೆನುವಿನಲ್ಲಿತ್ತು.
ಅನಂತ್ ಅಂಬಾನಿ ಮದುವೆಯಲ್ಲಿ ಡಾಲಿಗೆ ಸ್ಟೈಲಿಂಗ್ ಜವಾಬ್ದಾರಿ ಸಿಕ್ಕಿತ್ತು.ಡಾಲಿ ಒಬ್ಬ ಪ್ರಸಿದ್ಧ ಸೆಲೆಬ್ರಿಟಿ ಡ್ರಾಪಿಂಗ್ ಕಲಾವಿದೆ.ಅಂಬಾನಿ ಕುಟುಂಬವು ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಬಟ್ಟೆಗಳನ್ನು ಧರಿಸಿದ್ದರು.ಒಮ್ಮೆ ಸೀರೆ ಉಡಿಸುವುದಕ್ಕೆ ಡಾಲಿ 25 ಸಾವಿರದಿಂದ 1.5 ಲಕ್ಷ ದವರೆಗೆ. ಚಾರ್ಜ್ ಮಾಡುತ್ತಾರೆ.
ಈ ಮದುವೆಯಲ್ಲಿ ಭಾಗವಹಿಸಿದ್ದ ಅತಿಥಿಗಳು ಕೋಟಿಗಟ್ಟಲೆ ರಿಟರ್ನ್ ಗಿಫ್ಟ್ ಪಡೆದಿದ್ದಾರೆ.ವಿವಿಐಪಿ ಅತಿಥಿಗಳಿಗೆ ಕೋಟ್ಯಂತರ ಮೌಲ್ಯದ ವಾಚ್‌ಗಳನ್ನು ಉಡುಗೊರೆಯಾಗಿ ನೀಡಲಾಗಿದೆ.
ಅಂಬಾನಿ ಮದುವೆಯಲ್ಲಿ ಬಾಲಿವುಡ್ ಮತ್ತು ಹಾಲಿವುಡ್ ಕಲಾವಿದರು ಕೂಡಾ ಪ್ರದರ್ಶನ ನೀಡಿದ್ದಾರೆ. ಈ ಎಲ್ಲಾ ಶೋ ಗಳಿಗಾಗಿ ಹರಿಸಿದ್ದು ಕೋಟಿ ಕೋಟಿ ಹಣ.
ಅನಂತ್ ಮತ್ತು ರಾಧಿಕಾ ಮದುವೆ ಕಾರ್ಡ್ ಗಾಗಿಯೇ ನೀರಿನಂತೆ ಹಣ ಹರಿಸಲಾಗಿದೆ. ಪ್ರತಿ ಅತಿಥಿಗೂ ಗೋಲ್ಡನ್ ವೆಡ್ಡಿಂಗ್ ಕಾರ್ಡ್ ಜೊತೆಗೆ ವಿಶೇಷ ಉಡುಗೊರೆಯನ್ನು ಕಳುಹಿಸಲಾಯಿತು.ಮದುವೆ ಕಾರ್ಡ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ದೇವರ ವಿಗ್ರಹಗಳಿದ್ದವು.ಈ ಮದುವೆಯ ಒಂದು ಕಾರ್ಡ್‌ಗೆ ಅಂಬಾನಿ 6 ರಿಂದ 7 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ ಎನ್ನಲಾಗಿದೆ.
ಎರಡು ಪೂರ್ವ ವಿವಾಹಗಳೊಂದಿಗೆ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹವು ವಿಶ್ವದ ಅತ್ಯಂತ ದುಬಾರಿ ಮದುವೆ ಎಂದು ಹೇಳಲಾಗುತ್ತದೆ.ಈ ಮದುವೆಗೆ ಸುಮಾರು 320 ಮಿಲಿಯನ್ ಡಾಲರ್ ವೆಚ್ಚವಾಗಿದೆ. ಇಲ್ಲಿಯವರೆಗೆ ವಿಶ್ವದ ಅತ್ಯಂತ ದುಬಾರಿ ಮದುವೆಯೆಂದರೆ ಮೇಡ್ಲೈನ್ ಬ್ರಾಕ್ವೇ ಮತ್ತು ಜಾಕೋಬ್ ಲಾಗ್ರೋನ್.ವರದಿಯ ಪ್ರಕಾರ, ನವೆಂಬರ್ 2023 ರಲ್ಲಿ ಉದ್ಯಮಿ ಮೇಡ್‌ಲೈನ್ ಬ್ರಾಕ್ವೇ ಮತ್ತು ಜಾಕೋಬ್ ಲಾಗ್ರೋನ್ ಅವರ ವಿವಾಹಕ್ಕೆ 59 ಮಿಲಿಯನ್ ಡಾಲರ್‌ಗಳು ಅಂದರೆ ಸುಮಾರು 489 ಕೋಟಿ ರೂಪಾಯಿ ವೆಚ್ಚವಾಗಿತ್ತು. ಇದಕ್ಕೆ ಹೋಲಿಸಿದರೆ ರಾಧಿಕಾ ಮತ್ತು ಅನಂತ್ ಮದುವೆ ಇದುವರೆಗಿನ ಅತ್ಯಂತ ದುಬಾರಿ ಮದುವೆ.