ವೇತನ ಆಯೋಗದ ಬದಲಿಗೆ ವೇತನ ಲೆಕ್ಕಾಚಾರದ ಹೊಸ ವ್ಯವಸ್ಥೆಯನ್ನು ಪರಿಚಯಿಸಲಾಗುವುದು ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ, ಖಾಸಗಿ ಕಂಪನಿಗಳಲ್ಲಿರುವಂತೆ ಕಾರ್ಯಕ್ಷಮತೆ ಆಧಾರಿತ ವೇತನ ವ್ಯವಸ್ಥೆಯನ್ನು ನೀಡಲಾಗುವುದು.
ವೇತನ ಆಯೋಗದ ಬದಲಿಗೆ ವೇತನ ಲೆಕ್ಕಾಚಾರದ ಹೊಸ ವ್ಯವಸ್ಥೆಯನ್ನು ಪರಿಚಯಿಸಲಾಗುವುದು ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ, ಖಾಸಗಿ ಕಂಪನಿಗಳಲ್ಲಿರುವಂತೆ ಕಾರ್ಯಕ್ಷಮತೆ ಆಧಾರಿತ ವೇತನ ವ್ಯವಸ್ಥೆಯನ್ನು ನೀಡಲಾಗುವುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿಯೊಂದು ಕಾದಿದೆ. ತುಟ್ಟಿಭತ್ಯೆ ಹೆಚ್ಚಳದ ಹೊರತಾಗಿ, ಬಾಕಿ ತುಟ್ಟಿಭತ್ಯೆ, ವೇತನ ಶ್ರೇಣಿ, ವೇತನ ರಚನೆಗೆ ಸಂಬಂಧಿಸಿದ ಅನೇಕ ಸುದ್ದಿಗಳು ಕಾಯುತ್ತಿದೆ .
ಅಕ್ಟೋಬರ್ 16, 2024 ರಂದು, ದೀಪಾವಳಿಯ ಮೊದಲು, ಕೇಂದ್ರ ಸಚಿವ ಸಂಪುಟವು 7 ನೇ ವೇತನ ಆಯೋಗದ ಅಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ 3% ತುಟ್ಟಿಭತ್ಯೆ ಹೆಚ್ಚಳವನ್ನು ಅನುಮೋದಿಸಿತು.ಇದು ಕಳೆದ ವರ್ಷದ ಕೊನೆಯ ಏರಿಕೆಯಾಗಿದೆ. .
12 ತಿಂಗಳ ಅವಧಿಯಲ್ಲಿ AICPI ಸೂಚ್ಯಂಕವನ್ನು ಆಧರಿಸಿ ತುಟ್ಟಿಭತ್ಯೆಯ ಶೇಕಡಾವಾರು ಹೆಚ್ಚಳವನ್ನು ಲೆಕ್ಕಹಾಕಲಾಗುತ್ತದೆ. ಸಾಮಾನ್ಯವಾಗಿ ಜನವರಿ ಮತ್ತು ಜುಲೈನಲ್ಲಿ ಅಂದರೆ ವರ್ಷದಲ್ಲಿ 2 ಬಾರಿ ಈ ದರವನ್ನು ಹೆಚ್ಚಿಸಲಾಗುತ್ತದೆ.
ಜುಲೈ 2024 ರಿಂದ ಡಿಸೆಂಬರ್ 2024 ರವರೆಗೆ AICPI ಸೂಚ್ಯಂಕ ಸಂಖ್ಯೆಗಳ ಆಧಾರದ ಮೇಲೆ ಜನವರಿ 2024ರ ಡಿಎ ಹೆಚ್ಚಳವನ್ನು ಲೆಕ್ಕಹಾಕಲಾಗುತ್ತದೆ. ಇಲ್ಲಿಯವರೆಗೆ ನವೆಂಬರ್ ವರೆಗಿನ ಡೇಟಾ ಲಭ್ಯವಿದೆ. ಫೆಬ್ರವರಿ 2025ರಲ್ಲಿ, ಡಿಸೆಂಬರ್ ಡೇಟಾವನ್ನು ನಿರೀಕ್ಷಿಸಲಾಗಿದೆ. ಇದರ ನಂತರ ಡಿಎ ಎತ್ತರವನ್ನು ನಿರ್ಧರಿಸಲಾಗುತ್ತದೆ.
ಎಂದಿನಂತೆ, ಜನವರಿ 2025 ರ ದರ ಹೆಚ್ಚಳವನ್ನು ಹೋಳಿ ಆಸುಪಾಸಿನಲ್ಲಿ ಅಂದರೆ ಮಾರ್ಚ್ನಲ್ಲಿ ಘೋಷಿಸುವ ನಿರೀಕ್ಷೆಯಿದೆ. ಆದರೆ ಜನವರಿಯಿಂದ ಡಿಎ ಅರಿಯರ್ ಮೊತ್ತವು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಲಭ್ಯವಿರುತ್ತದೆ.
ಈ ವೇತನ ಹೆಚ್ಚಳ ಮತ್ತು ಪಿಂಚಣಿ ಹೆಚ್ಚಳವು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಬೆಲೆಗಳು ಮತ್ತು ಹಣದುಬ್ಬರವನ್ನು ನಿಯಂತ್ರಿಸಲು ದೊಡ್ಡ ರೀತಿಯಲ್ಲಿ ಸಹಾಯ ಮಾಡುತ್ತದೆ.
ಒಂದು ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ವೇತನ ಮತ್ತು ಪಿಂಚಣಿ ಬದಲಾವಣೆಗೆ ಶಿಫಾರಸು ಮಾಡುವ 8ನೇ ವೇತನ ಆಯೋಗಕ್ಕಾಗಿ ನೌಕರರ ಸಂಘಗಳು ಸರ್ಕಾರಕ್ಕೆ ಒತ್ತಡ ಹೇರಿವೆ. ಆದರೆ ಈ ತಿಂಗಳ ಆರಂಭದಲ್ಲಿ, 8ನೇ ವೇತನ ಆಯೋಗವನ್ನು ರಚಿಸಲು ಕೇಂದ್ರವು ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಹಣಕಾಸು ಸಚಿವಾಲಯ ಘೋಷಿಸಿತು.
ವೇತನ ಆಯೋಗದ ಬದಲಿಗೆ ವೇತನ ಲೆಕ್ಕಾಚಾರದ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಖಾಸಗಿ ಕಂಪನಿಗಳಲ್ಲಿರುವಂತೆ ಕಾರ್ಯಕ್ಷಮತೆ ಆಧಾರಿತ ವೇತನ ವ್ಯವಸ್ಥೆಯನ್ನು ನೀಡಲಾಗುವುದು. ನೌಕರರು ಅವರ ಕಾರ್ಯಕ್ಷಮತೆಯ ಆಧಾರದ ಮೇಲೆ ವೇತನ ಹೆಚ್ಚಳವನ್ನು ಪಡೆಯುತ್ತಾರೆ. ಇದು ಅವರ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ.
ತಜ್ಞರು ಮತ್ತು ಸರ್ಕಾರಿ ಮೂಲಗಳ ಪ್ರಕಾರ, ಸರ್ಕಾರವು ಐಕ್ರಿಯೋಡ್ ಫಾರ್ಮುಲಾವನ್ನು ಜಾರಿಗೆ ತರಲು ಪರಿಗಣಿಸಬಹುದು. ಈ ಹೊಸ ಸೂತ್ರದಿಂದ ಉದ್ಯೋಗಿಗಳು ಗಣನೀಯವಾಗಿ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ. ಈ ಹೊಸ ವೇತನ ವ್ಯವಸ್ಥೆಯ ಸಂಪೂರ್ಣ ರೂಪರೇಖೆಯನ್ನು ಫೆಬ್ರವರಿಯಲ್ಲಿ ಕೇಂದ್ರ ಬಜೆಟ್ 2025 (ಬಜೆಟ್ 2025) ನಲ್ಲಿ ಮಂಡಿಸಲಾಗುವುದು ಎಂದು ಹೇಳಲಾಗುತ್ತದೆ.