ಸತತ 5 ಪಂದ್ಯಗಳಲ್ಲಿ 4 ಶತಕ ಸಿಡಿಸಿದ ಮಯಾಂಕ್‌ ಅಗರ್ವಾಲ್‌; ಟೀಂ ಇಂಡಿಯಾದಲ್ಲಿ ಮತ್ತೆ ಸಿಗುತ್ತಾ ಅವಕಾಶ?

Vijay hazare trophy: ಕಳೆದ ಮೂರು ವರ್ಷಗಳಿಂದ ಟೀಂ ಇಂಡಿಯಾದಿಂದ ಹೊರಗುಳಿದಿರುವ ಆಟಗಾರನೊಬ್ಬ ದೇಶೀ ಕ್ರಿಕಟ್‌ನಲ್ಲಿ ಶತಕಗಳ ಮೇಲೆ ಶತಕ ಸಿಡಿಸಿ ಮಿಂಚುತ್ತಿದ್ದಾನೆ.

Mayank agarwal in vijay hazare trophy: ಒಂದೆಡೆ ಟೀಂ ಇಂಡಿಯಾದ ಬ್ಯಾಟ್ಸ್‌ಮನ್‌ಗಳು ಆಸ್ಟ್ರೇಲಿಯಾ ಪ್ರವಾಸದಲ್ಲಿ ರನ್‌ ಕಲೆ ಹಾಕಲು ಪರದಾಡುತ್ತಿದ್ದಾರೆ. ಇದರ ಫಲವಾಗಿ ಟೆಸ್ಟ್‌ ಸರಣಿಯಲ್ಲಿ ಹೀನಾಯ ಸೋಲು ಕಂಡು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಿಂದ ಹೊರಬಿದ್ದಿದ್ದಾರೆ. ಇನ್ನೊಂದೆಡೆ ಮೂರು ವರ್ಷಗಳಿಂದ ತಂಡದಿಂದ ಹೊರಗುಳಿದಿರುವ ಆಟಗಾರನೊಬ್ಬ ದೇಶೀ ಕ್ರಿಕಟ್‌ನಲ್ಲಿ ಶತಕಗಳ ಮೇಲೆ ಶತಕ ಸಿಡಿಸಿ ಮಿಂಚುತ್ತಿದ್ದಾನೆ. ಆತ ಬೇರ್ಯಾರು ಅಲ್ಲ. ಕರ್ನಾಟಕ ತಂಡ ನಾಯಕತ್ವ ವಹಿಸುತ್ತಿರುವ ಮತ್ತು ವಿಜಯ್‌ ಹಜಾರೆ ಟ್ರೋಫಿಯಲ್ಲಿ ರನ್‌ಗಳ ಸುರಿಮಳೆಯನ್ನೇ ಸುರಿಸುತ್ತಿರುವ ಮಯಾಂಕ್‌ ಅಗರ್ವಾಲ್...‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ವಿಜಯ್‌ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಈಗಾಗಲೇ ಹ್ಯಾಟ್ರಿಕ್‌ ಶತಕ ಸಿಡಿರುವ ಮಯಾಂಕ್‌ ಅಗರ್ವಾಲ್‌ ಇದೀಗ ಸತತ 5 ಪಂದ್ಯಗಳಲ್ಲಿ ನಾಲ್ಕನೇ ಶತಕ ಬಾರಿಸಿ ಸಂಚನಲ ಮೂಡಿಸಿದ್ದಾರೆ. 

2 /5

ನಾಗಾಲ್ಯಾಂಡ್‌ ವಿರುದ್ಧ ನಡೆದ ಪಂದ್ಯದಲ್ಲಿ ಮಯಾಂಕ್‌ 119 ಎಸೆಗಳಲ್ಲಿ 116 ರನ್‌ ಗಳಿಸಿ ತಂಡಕ್ಕೆ 9 ವಿಕೆಟ್‌ಗಳ ಭರ್ಜರಿ ಜಯ ತಂದುಕೊಟ್ಟರು.

3 /5

ಮಯಾಂಕ್‌ ಈ ಟೂರ್ನಿಯಲ್ಲಿ ಆಡಿರುವ 7 ಪಂದ್ಯಗಳಲ್ಲಿ 4 ಶತಕ ಮತ್ತು 1 ಅರ್ಧಶತಕ ಸೇರಿದಂತೆ 153 ಸರಾಸರಿಯೊಂದಿಗೆ ಗರಿಷ್ಠ 613 ರನ್‌ ಗಳಿಸಿದ್ದಾರೆ. 

4 /5

ಈ 33 ವರ್ಷದ ಬ್ಯಾಟ್ಸ್‌ಮನ್‌ ಭಾರತದ ಪರ ತನ್ನ ಕೊನೆಯ ಟೆಸ್ಟ್‌ ಪಂದ್ಯವನ್ನು ಮಾರ್ಚ್‌ 2022ರಲ್ಲಿ ಮತ್ತು ಕೊನೆಯ ಏಕದಿನ ಪಂದ್ಯವನ್ನು ನವೆಂಬರ್‌ 2020ರಲ್ಲಿ ಆಡಿದ್ದರು. 

5 /5

ಇದೀಗ ದೇಶೀ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡತ್ತಿರುವ ಮಯಾಂಕ್‌ ಅಗರ್ವಾಲ್‌ಗೆ ಮತ್ತೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.