ಒಂದು ರೂಪಾಯಿ ಖರ್ಚು ಇಲ್ಲದೆ ನಿಮ್ಮ ಕಿಡ್ನಿಯಲ್ಲಿನ ಕಲ್ಲುಗಳನ್ನು ಕರಗಿಸುತ್ತೆ ʻಈʼ ಪುಟ್ಟ ಗಿಡ..!

Bryophyllum pinnatum: ಆಯುರ್ವೇದದಲ್ಲಿ ನಮ್ಮ ಆರೋಗ್ಯಕ್ಕೆ ಅಮೃತದಂತೆ ಕೆಲಸ ಮಾಡುವ ಅದೆಷ್ಟೋ ಸಸ್ಯಗಳ ಕುರಿತು ಉಲ್ಲೇಖಿಸಲಾಗಿದೆ. ಆದರೆ, ಆ ಗಿಡಗಳು ನಮ್ಮ ಸುತ್ತಲೂ ಇದ್ದರೂ ಕೂಡ ಅವುಗಳ ಪ್ರಯೋಜನ ಏನು ಎಂಬುದು ನಮಗೆ ತಿಳಿದಿರುವುದಿಲ್ಲ. 
 

1 /8

Bryophyllum pinnatum: ಆಯುರ್ವೇದದಲ್ಲಿ ನಮ್ಮ ಆರೋಗ್ಯಕ್ಕೆ ಅಮೃತದಂತೆ ಕೆಲಸ ಮಾಡುವ ಅದೆಷ್ಟೋ ಸಸ್ಯಗಳ ಕುರಿತು ಉಲ್ಲೇಖಿಸಲಾಗಿದೆ. ಆದರೆ, ಆ ಗಿಡಗಳು ನಮ್ಮ ಸುತ್ತಲೂ ಇದ್ದರೂ ಕೂಡ ಅವುಗಳ ಪ್ರಯೋಜನ ಏನು ಎಂಬುದು ನಮಗೆ ತಿಳಿದಿರುವುದಿಲ್ಲ.   

2 /8

ಕಿಡ್ನಿಯಲ್ಲಿನ ಕಲ್ಲುಗಳು ಅನೇಕರನ್ನು ಕಾಡುವ ಸಮಸ್ಯೆ, ಜನರು ತಮ್ಮ ಕಿಡ್ನಿಗಳಲ್ಲಿನ ಕಲ್ಲಿನ ಸಮಸ್ಯೆಯನ್ನು ನಿವಾರಿಸಲು, ಅಥವಾ ತೆಗೆದು ಹಾಕಲು ಶಸ್ತ್ರ ಚಿಕಿತ್ಸೆಯ ಮೊರೆ ಹೋಗುತ್ತಾರೆ. ಆದರೆ, ಒಂದು ರೂಪಾಯಿ ಕೂಡ ಖರ್ಚು ಮಾಡದೆ, ನಿಮ್ಮ ಕಿಡ್ನಿಯಲ್ಲಿನ ಕಲ್ಲುಗಳನ್ನು ತೆಗೆದು ಹಾಕಲು ನೀವು ಈ ಆಹಾರವನ್ನು ಸೇವಿಸಿದರೆ ಸಾಕು.  

3 /8

ಬ್ರಯೋಫಿಲ್ಲಮ್ ಪಿನ್ನಟಮ್, ಪಾಷಾಣಭೇದಿ, ಪತ್ರಬೀಜಂ ಎಂದೂ ಕರೆಯಲ್ಪಡುವ ಈ ಎಲೆಯನ್ನು ಸೇವಿಸುವುದರಿಂದ ನೀವು ನಿಮ್ಮ ಕಿಡ್ನಿಯಲ್ಲಿನ ಕಲ್ಲುಗಳನ್ನು ತೆಗೆದು ಹಾಕಬಹುದು.   

4 /8

ಆಯುರ್ವೇದದಲ್ಲಿ ರಣಪಾಲಕ್ಕೆ ವಿಶೇಷ ಸ್ಥಾನವಿದೆ. ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಇದನ್ನು ಬಳಸಲಾಗುತ್ತದೆ. ಮೂತ್ರದ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಇದು ವಿಶೇಷವಾಗಿ ಕಾರ್ಯನಿರ್ವಹಿಸುತ್ತದೆ.  

5 /8

ಮೂತ್ರಪಿಂಡದ ಕಲ್ಲುಗಳು, ಮೂತ್ರನಾಳದ ಸೋಂಕುಗಳು, ಮೂತ್ರ ವಿಸರ್ಜನೆಯಲ್ಲಿ ತೊಂದರೆ ಮುಂತಾದ ಸಮಸ್ಯೆಗಳಿಗೆ ಇದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಈ ಎಲೆಗಳ ರಸವನ್ನು ಗಾಯಗಳು ಮತ್ತು ಹುಣ್ಣುಗಳ ಮೇಲೆ ಹಚ್ಚುವುದರಿಂದ ಅವು ಬೇಗನೆ ಗುಣವಾಗುತ್ತವೆ.  

6 /8

ರಣಪಾಲ ಎಲೆಗಳು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಎಸ್ಜಿಮಾ ಮತ್ತು ತುರಿಕೆಯಂತಹ ಚರ್ಮದ ಸಮಸ್ಯೆಗಳಿಗೂ ಇದನ್ನು ಬಳಸಲಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.  

7 /8

ದೇಹದಲ್ಲಿ ಕಡಿಮೆ ನೀರಿನ ಅಂಶ. ಆಹಾರ ಪದ್ಧತಿ ಮತ್ತು ಕೆಲವು ರೀತಿಯ ಔಷಧಗಳ ಬಳಕೆ ಕಿಡ್ನಿಯಲ್ಲಿನ ಕಲ್ಲು ಉತ್ಪತ್ತಿಯಾಗಲು ಮುಖ್ಯ ಕಾರಣವಾಗಿರಬಹುದು. ರಣಪಾಲ ಸಸ್ಯವು ಮೂತ್ರಪಿಂಡದ ಕಲ್ಲುಗಳನ್ನು ಕರಗಿಸಲು ಸಹಾಯ ಮಾಡುತ್ತದೆ, ಇದು ಮೂತ್ರ ವಿಸರ್ಜನೆಯನ್ನು ಹೆಚ್ಚಿಸಿ, ಮೂತ್ರಪಿಂಡದಲ್ಲಿ ಸಂಗ್ರಹವಾಗಿರುವ ಲವಣಗಳು ಮತ್ತು ಖನಿಜಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.   

8 /8

ರಣಪಾಲ ಎಲೆಗಳನ್ನು ನೇರವಾಗಿ ಅಥವಾ ರಸವನ್ನು ಸೇವಿಸಬಹುದು. ಈ ಎಲೆಗಳನ್ನು ನೀರಿನಲ್ಲಿ ಕುದಿಸಿ ಕಷಾಯ ತಯಾರಿಸಬಹುದು. ಇದರ ಎಲೆಗಳನ್ನು ಒಣಗಿಸಿ ಪುಡಿ ಮಾಡಿಟ್ಟು, ಇದನ್ನು ನೀರಿನಲ್ಲಿ ಅಥವಾ ಚೂರ್ಣದಂತೆ ಸೇವಿಸಬಹುದು. ಸಾಮಾನ್ಯವಾಗಿ ದಿನಕ್ಕೆ 2-3 ಎಲೆಗಳನ್ನು ತಿನ್ನಬಹುದು ಅಥವಾ 30-60 ಮಿಲಿ ಕಷಾಯವನ್ನು ತೆಗೆದುಕೊಳ್ಳಬಹುದು.