Bottle Gourd For Premature White Hair: ಬಿಳಿ ಕೂದಲನ್ನು ಮತ್ತೆ ಗಾಢ ಕಪ್ಪು ಬಣ್ಣಕ್ಕೆ ತಿರುಗಿಸಲು ಈ ನೈಸರ್ಗಿಕ ವಿಧಾನವನ್ನು ಅಳವಡಿಸಬಹುದು. ಈ ಪರಿಹಾರ ಬಿಳಿ ಕೂದಲಿಗೆ ಶಾಶ್ವತ ಕಪ್ಪು ಬಣ್ಣ ನೀಡುತ್ತದೆ.
Bottle Gourd For Premature White Hair: ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗುವುದು ಈಗ ಸಾಮಾನ್ಯವಾಗಿ ಬಿಟ್ಟಿದೆ. ಹದಿ ಹರೆಯದ ಮಕ್ಕಳನ್ನೇ ಈ ಸಮಸ್ಯೆ ಕಾಡುತ್ತಿದೆ. ಬಿಳಿ ಕೂದಲನ್ನು ಮರೆಮಾಚಲು ಅನೇಕರು ಹೇರ್ ಡೈ ಬಳಸುತ್ತಾರೆ. ಆದರೆ ಇದರಿಂದ ಕೂದಲು ಹಾಳಾಗುವ ಅಪಾಯ ಇದ್ದೇ ಇರುತ್ತದೆ. ಹೀಗಿರುವಾಗ ಬಿಳಿಯಾದ ಕೂದಲನ್ನು ಮತ್ತೆ ನೈಸರ್ಗಿಕವಾಗಿಯೇ ಕಪ್ಪಾಗಿಸುವ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕೂದಲಿನ ಆರೋಗ್ಯಕ್ಕೂ ಸೋರೆಕಾಯಿಗೂ ಬಹಳ ಸಂಬಂಧವಿದೆ. ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ದುಬಾರಿ ಉತ್ಪನಗಳನ್ನು ಬಳಸುವ ಬದಲು ಸೋರೆಕಾಯಿಯನ್ನು ಒಮ್ಮೆ ಬಳಸಿ ನೋಡಿ.
ಬಿಳಿ ಕೂದಲನ್ನು ಮತ್ತೆ ಕಪ್ಪು ಮಾಡಲು ಸೋರೆಕಾಯಿಯನ್ನು ಬಳಸಬಹುದು.ಇದು ಎಲ್ಲಾ ಋತುವಿನಲ್ಲಿಯೂ ಸಿಗುವ ತರಕಾರಿ. ಇದನ್ನು ತಿನ್ನುವುದರಿಂದ ನೈಸರ್ಗಿಕವಾಗಿ ಕೂದಲು ಕಪ್ಪಾಗುವುದಲ್ಲದೆ, ಕೂದಲು ಆರೋಗ್ಯಕರವಾಗಿ ಕಾಂತಿಯುತವಾಗಿ ಬೆಳೆಯುತ್ತದೆ. ಆದ್ದರಿಂದ ಈ ತರಕಾರಿಯನ್ನು ನಿಯಮಿತವಾಗಿ ಸೇವಿಸಿ.
ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು, ಸೋರೆಕಾಯಿಯ ಸಹಾಯದಿಂದ ವಿಶೇಷ ಎಣ್ಣೆಯನ್ನು ತಯಾರಿಸಬಹುದು.ಅದನ್ನು ತಯಾರಿಸಲು ತೆಂಗಿನ ಎಣ್ಣೆಯ ಅಗತ್ಯವಿರುತ್ತದೆ.
ಸೋರೆಕಾಯಿಯನ್ನು ಸಿಪ್ಪೆಯೊಂದಿಗೆ ಕತ್ತರಿಸಿ ಸುಮಾರು 5 ದಿನಗಳವರೆಗೆ ಸೂರ್ಯನ ಕಡು ಬಿಸಿಲಿನಲ್ಲಿ ಒಣಗಿಸಿ. ಒಂದು ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ತೆಂಗಿನ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಈ ಎಣ್ಣೆಗೆ ಒಣಗಿದ ಸೋರೆಕಾಯಿಯನ್ನು ಹಾಕಿ ಕುದಿಸಿ. ಸುಮಾರು 15 ರಿಂದ 20 ನಿಮಿಷಗಳ ಕಾಲ ಬೇಯಿಸಿದ ನಂತರ, ಅದನ್ನು ಗ್ಯಾಸ್ ಸ್ಟೌವ್‌ನಿಂದ ತೆಗೆದುಹಾಕಿ ಈಗ ಈ ಎಣ್ಣೆಯನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. ನಂತರ ಈ ಎಣ್ಣೆಯನ್ನು ಗಾಜಿನ ಬಾಟಲಿಯಲ್ಲಿ ಹಾಕಿಡಿ.
ರಾತ್ರಿ ಮಲಗುವ ಮುನ್ನ ಇದನ್ನು ಕೂದಲಿಗೆ ಹಚ್ಚಿಕೊಳ್ಳಿ. ನಂತರ ಬೆಳಗ್ಗೆ ಎದ್ದ ನಂತರ ಶುದ್ಧ ನೀರಿನಿಂದ ಕೂದಲನ್ನು ತೊಳೆಯಿರಿ.
ನಿಯಮಿತವಾಗಿ ಈ ಪ್ರಕ್ರಿಯೆಯನ್ನು ಮಾಡಿದರೆ, ಬಿಳಿ ಕೂದಲು ಕೆಲವೇ ದಿನಗಳಲ್ಲಿ ಮತ್ತೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ.ಅದು ಕೂಡಾ ನೈಸರ್ಗಿಕವಾಗಿ. ಮಾತ್ರವಲ್ಲ ಇದು ಬಿಳಿ ಕೂದಲು ಬೆಳೆಯುವುದನ್ನು ಕೂಡಾ ತಡೆಯುತ್ತದೆ.
(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು,ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)