ಕರ್ನಾಟಕದ ಹೆಮ್ಮೆ... ಸ್ವಾದಿಷ್ಟಮಯ ಮೈಸೂರ್‌ ಪಾಕ್‌ ಮೊಟ್ಟಮೊದಲ ಬಾರಿಗೆ ಕಂಡುಹಿಡಿದಿದ್ದು ಯಾರು ಗೊತ್ತಾ? ಇದರ ಇತಿಹಾಸವೇನು?

Mysore Pak History: "ಮೈಸೂರು ಪಾಕ್" ಇಷ್ಟಪಡದವರುಂಟೇ? ಅದರಲ್ಲೂ ಕರ್ನಾಟಕದ ಜನರಿಗೆ ಮೈಸೂರ್‌ ಪಾಕ್‌ ಕೇವಲ ಸ್ವೀಟ್‌ ಆಗಿ ಉಳಿದಿಲ್ಲ, ಬದಲಾಗಿ ಹೆಮ್ಮೆ ಪ್ರತಿಷ್ಠೆಯಾಗಿದೆ. ಇನ್ನು ಇದರ ಹೆಸರೇ ಸೂಚಿಸುವಂತೆ ಈ ಸಿಹಿತಿಂಡಿ ಹುಟ್ಟಿದ್ದು ಮೈಸೂರಿನಲ್ಲಿ. ಐತಿಹಾಸಿಕ ನಗರಿ ಮೈಸೂರಿನಲ್ಲಿ ಮೊದಲ ಬಾರಿಗೆ ತಯಾರಿಸಲ್ಪಟ್ಟ ಈ ಮೈಸೂರು ಪಾಕ್ ಹಿಂದೆ ಒಂದು ಕುತೂಹಲಕಾರಿಯಾದ ಕಥೆಯಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

"ಮೈಸೂರು ಪಾಕ್" ಇಷ್ಟಪಡದವರುಂಟೇ? ಅದರಲ್ಲೂ ಕರ್ನಾಟಕದ ಜನರಿಗೆ ಮೈಸೂರ್‌ ಪಾಕ್‌ ಕೇವಲ ಸ್ವೀಟ್‌ ಆಗಿ ಉಳಿದಿಲ್ಲ, ಬದಲಾಗಿ ಹೆಮ್ಮೆ ಪ್ರತಿಷ್ಠೆಯಾಗಿದೆ. ಇನ್ನು ಇದರ ಹೆಸರೇ ಸೂಚಿಸುವಂತೆ ಈ ಸಿಹಿತಿಂಡಿ ಹುಟ್ಟಿದ್ದು ಮೈಸೂರಿನಲ್ಲಿ. ಐತಿಹಾಸಿಕ ನಗರಿ ಮೈಸೂರಿನಲ್ಲಿ ಮೊದಲ ಬಾರಿಗೆ ತಯಾರಿಸಲ್ಪಟ್ಟ ಈ ಮೈಸೂರು ಪಾಕ್ ಹಿಂದೆ ಒಂದು ಕುತೂಹಲಕಾರಿಯಾದ ಕಥೆಯಿದೆ.

2 /7

ಇನ್ನು ಮೈಸೂರ್‌ ಪಾಕ್‌ನ್ನು ಆವಿಷ್ಕರಿಸಿದ ಬಾಣಸಿಗ ಕುಟುಂಬದ 5ನೇ ತಲೆಮಾರಿನವರು ಇಂದಿಗೂ ಮೈಸೂರು ಪಾಕ್ ತಯಾರಿಕಾ ಉದ್ಯಮದಲ್ಲಿದ್ದಾರೆ ಎಂಬುದು ಗಮನಾರ್ಹ.  

3 /7

1902 ರಿಂದ 1940 ರವರೆಗೆ ಮೈಸೂರನ್ನು ಆಳಿದ 24ನೇ ಮಹಾರಾಜ ಕೃಷ್ಣರಾಜ ಒಡೆಯರ್ IV ಆಹಾರಪ್ರಿಯರು. ಪ್ರತೀದಿನ ಊಟಕ್ಕೆ ಕುಳಿತಾಗ ವಿಶೇಷ ಭಕ್ಷ್ಯಗಳು ಅವರ ಮುಂದಿರುತ್ತಿದ್ದವು. ಇನ್ನು "ಕಾಕಾಸುರ ಮಾದಪ್ಪ" ರಾಜಮನೆತನದ ಜನಾನದ ಮುಖ್ಯ ಅಡುಗೆಯವರು. ಒಂದೊಮ್ಮೆ ಇವರು ತಮ್ಮ ಮಹಾರಾಜರಿಗೆ ಹೊಸ ಖಾದ್ಯವನ್ನು ತಯಾರಿಸಿಕೊಡಬೇಕೆಂದು ಯೋಚಿಸಿ, ಅಡುಗೆಮನೆಯಲ್ಲಿನ ಅತ್ಯಲ್ಪ ಸಾಮಾಗ್ರಿಗಳೊಂದಿಗೆ ಅಂದರೆ ಕಡಲೆಹಿಟ್ಟು, ಸಕ್ಕರೆ, ತುಪ್ಪ ಮತ್ತು ಏಲಕ್ಕಿ ಸೇರಿಸಿ ಸಿಹಿಯೊಂದನ್ನು ತಯಾರಿಸಿದರು. ಇದರ ರುಚಿ ಮಹಾರಾಜರಿಗೆ ಬಹಳ ಇಷ್ಟವಾಗಿತ್ತು. ಆಗ ಮಹಾರಾಜರು ಇದರ ಹೆಸರೇನು ಎಂದು ಕೇಳಿದಾಗ, ಮಾದಪ್ಪನವರು ಏನು ಹೇಳಬೇಕೆಂದು ತೋಚದೆ ʼಸಕ್ಕರೆ ಪಾಕಕ್ಕೆ ಕಡಲೆ ಹಿಟ್ಟು ಸೇರಿಸಿ ಮೈಸೂರು ಪಾಕʼ ಎಂದು ಹೇಳಿದರು, ಅದಾದ ನಂತರ ಈ ಸಿಹಿ ಪ್ರಖ್ಯಾತಿ ಪಡೆದಿದ್ದು ನಮ್ಮ ಮೈಸೂರಿನ ಹೆಸರಿನಿಂದಲೇ.  

4 /7

ಮೈಸೂರು ಪಾಕ್‌ನ ರುಚಿ ಕೇವಲ ಜನಾನಕ್ಕೆ ಮಾತ್ರ ಸೀಮಿತವಾಗದೆ ಎಲ್ಲ ಜನರಿಗೂ ತಿಳಿಯುವಂತಾಗಲು ಮಹಾರಾಜ ಕೃಷ್ಣರಾಜ ಒಡೆಯರ್ ಅವರು ಮಾದಪ್ಪನವರಿಗೆ ತಮ್ಮ ಅರಮನೆಯ ಬಳಿ ಅಂಗಡಿ  ಸ್ಥಾಪಿಸಲು ಸಲಹೆ ನೀಡಿದರು. ಆ ನಂತರ ಪ್ರಸಿದ್ಧ "ಗುರು ಸ್ವೀಟ್ಸ್" ಅಂಗಡಿಯನ್ನು 1935 ರಲ್ಲಿ ರಾಜಮನೆತನದ ಮುಖ್ಯ ಬಾಣಸಿಗ ಮಾದಪ್ಪ ಅವರು ಪ್ರಾರಂಭಿಸಿದರು. ಒಡೆಯರ್‌ ಈ ಸಿಹಿತಿಂಡಿಯನ್ನು ಬ್ರಿಟಿಷರಿಗೆ ಉಡುಗೊರೆಯಾಗಿ ಕಳುಹಿಸಿದರು. ಅವರಿಗೂ ಈ ಸಿಹಿ ಬಹಳಷ್ಟು ಇಷ್ಟವಾಗಿತ್ತು.  

5 /7

ಇನ್ನು ಈ ಸಿಹಿತಿಂಡಿ ಮಾಡಲು ಮಾಡಲು ಬೇಕಾಗುವ ಸಾಮಾಗ್ರಿಗಳು ಬಹಳ ಕಡಿಮೆ. ಸಕ್ಕರೆ ಮತ್ತು ನೀರನ್ನು ಸಮಾನ ಪ್ರಮಾಣದಲ್ಲಿ ಬೆರೆಸಿ ಪಾಕ ತಯಾರಿಸಬೇಕು. ಸರಿಯಾದ ಹದಕ್ಕೆ ಬಂದಾಗ ಅದಕ್ಕೆ ಕಡಲೆಹಿಟ್ಟು ಮತ್ತು ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಅದಾದ ನಂತರ ಮೈಸೂರ್‌ ಪಾಕ್‌ ತಳ ಹಿಡಿಯದಂತೆ ಕೊಂಚ ಕೊಂಚವೇ ತುಪ್ಪ ಸೇರಿಸಬೇಕು. ಸರಿಯಾಗಿ ಮಿಶ್ರಣವಾಗಿ ತಳ ಬಿಟ್ಟಾಗ ಅದನ್ನು ತುಪ್ಪ ಸವರಿದ ತಟ್ಟೆಗೆ ಸುರಿದು ಬೇಕಾದ ಆಕಾರದಲ್ಲಿ ತುಂಡು ಮಾಡಬೇಕು. ಹೀಗೆ ಮಾಡಿದರೆ ಮೈಸೂರು ಪಾಕ್ ರೆಡಿ.  

6 /7

ಮೈಸೂರು ಮಹಾರಾಜರ ಸೂಚನೆ ಮೇರೆಗೆ 90 ವರ್ಷಗಳ ಹಿಂದೆ ಕಾಕಾಸುರ ಮಾದಪ್ಪ ಆರಂಭಿಸಿದ “ಗುರು ಸ್ವೀಟ್ಸ್” ಇಂದಿಗೂ ಚಾಲ್ತಿಯಲ್ಲಿದೆ. ಅಂಗಡಿಯನ್ನು ಅವರ ಕುಟುಂಬದ ಐದನೇ ತಲೆಮಾರಿನವರು ನಡೆಸುತ್ತಿದ್ದಾರೆ. ಶಿವಾನಂದ ಮತ್ತು ಕುಮಾರ್ ಕುಟುಂಬದ ಮುಖ್ಯಸ್ಥರು. ಈ 90 ವರ್ಷಗಳಲ್ಲಿ ಮೈಸೂರು ಪಾಕ್ ನಲ್ಲಿ ಹಲವು ತಳಿಗಳು ಬಂದು ಸೇರಿಕೊಂಡಿವೆ. ಸದ್ಯ ಮಾದಪ್ಪ ತಯಾರಿಸಿದ ಒರಿಜಿನಲ್ ಮೈಸೂರ್ ಪಾಕ್ ಜೊತೆಗೆ ಇನ್ನೂ ಏಳು ಫ್ಲೇವರ್‌ಗಳಲ್ಲಿ ಈ ಸ್ವೀಟ್ ಮಾಡಲಾಗುತ್ತಿದೆ.  

7 /7

ಈ ಗುರು ಸ್ವೀಟ್ ಶಾಪ್‌ ಮೈಸೂರು ಅರಮನೆ ಬಳಿಯ ದೇವರಾಜ ಮಾರುಕಟ್ಟೆಯ ಸಯ್ಯಾಜಿ ರಾವ್ ರಸ್ತೆಯಲ್ಲಿದೆ. ಬೆಳಗ್ಗೆಯಿಂದ ರಾತ್ರಿ 10ರವರೆಗೆ ತೆರೆದಿರುವ ಈ ಅಂಗಡಿ ಮುಂದೆ ಗ್ರಾಹಕರ ಉದ್ದನೆಯ ಸರತಿ ಸಾಲು ಇರುತ್ತದೆ. ಅಲ್ಲದೇ ಮೈಸೂರಿಗೆ ಬರುವ ಪ್ರವಾಸಿಗರು ಮೈಸೂರು ಅರಮನೆ ಹಾಗೂ ಗುರು ಸ್ವೀಟ್ಸ್ ಶಾಪ್ ಗೆ ಭೇಟಿ ನೀಡಿ ಮೈಸೂರು ಪಾಕ್ ಖರೀದಿಸುತ್ತಾರೆ.