ಚಂದನ್‌ ಶೆಟ್ಟಿ ನಿವೇದಿತಾ ಡಿವೋರ್ಸ್‌ಗೆ ನಾನೇ ಕಾರಣ ಅಂದ್ರು.. ಮಂಗಳೂರಲ್ಲಿ ನಮ್ಮ ಮದ್ವೆನೂ ಆಗಿತ್ತು: ಕ್ಲಾರಿಟಿ ಕೊಟ್ಟ ಖ್ಯಾತ ನಟಿ

Sanjana Anand : ಚಂದನ್ ಶೆಟ್ಟಿಯಿಂದ ನಿವೇದಿತಾ ದೂರಾದ ಬಳಿಕ ನಟಿಯೊಬ್ಬರ ಜೊತೆ ಡೇಟಿಂಗ್‌ ಮಾಡ್ತಿದಾರೆ ಎನ್ನಲಾಗಿತ್ತು. ಈ ಬಗ್ಗೆ ಖುದ್ದು ಆ ನಟಿಯೇ ಸ್ಪಷ್ಟನೆ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /9

Sanjana Anand : ಬಿಗ್‌ ಬಾಸ್‌ ಮನೆಯಲ್ಲಿ ಶುರುವಾಗಿದ್ದ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಲವ್‌ ಸ್ಟೋರಿ ಮದುವೆ ವರೆಗೂ ಬಂದಿತ್ತು. ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

2 /9

ಇವರಿಬ್ಬರನ್ನು ಕನ್ನಡ ಕಿರುತೆರೆಯಲ್ಲಿ ಕ್ಯೂಟ್‌ ಜೋಡಿ ಎಂದೇ ಕರೆಯಲಾಗುತ್ತಿತ್ತು. ಆದರೆ ನಾಲ್ಕು ವರ್ಷಗಳ ಬಳಿಕ ಇಬ್ಬರೂ ಪರಸ್ಪರ ಒಪ್ಪಿಗೆಯ ಮೇಲೆ ವಿಚ್ಛೇದನ ಪಡೆದುಕೊಂಡರು.

3 /9

ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಡಿವೋರ್ಸ್ ವಿಚಾರದ ನಡುವೆ ಓರ್ವ ನಟಿಯ ಹೆಸರು ತಳಕು ಹಾಕಿಕೊಂಡಿತ್ತು. ಅನೇಕ ಗಾಸಿಪ್‌ಗಳು ಹರಿದಾಡಿದ್ದವು. 

4 /9

ಚಂದನ್ ಶೆಟ್ಟಿಯಿಂದ ನಿವೇದಿತಾ ದೂರಾದ ಬಳಿಕ ನಟಿಯೊಬ್ಬರ ಜೊತೆ ಡೇಟಿಂಗ್‌ ಮಾಡ್ತಿದಾರೆ ಎನ್ನಲಾಗಿತ್ತು. ಈ ನಟಿಯ ಜೊತೆಗೆ ಚಂದನ್ ಶೆಟ್ಟಿ ಎರಡನೇ ಮದುವೆ ಕೂಡ ಆಗಲಿದ್ದಾರೆ ಎನ್ನುವ ಕೆಲವು ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದವು. 

5 /9

ಇದೀಗ ಈ ಎಲ್ಲ ಗಾಳಿ ಸುದ್ದಿಗಳಿಗೆ ಖುದ್ದು ಆ ನಟಿಯೇ ಸ್ಪಷ್ಟನೆ ನೀಡಿದ್ದಾರೆ. ಸಲಗ ಸಿನಿಮಾ ಖ್ಯಾತಿಯ ನಟಿ ಸಂಜನಾ ಆನಂದ್‌ ಅವರ ಹೆಸರು ಚಂದನ್‌ ಶೆಟ್ಟಿ ಜೊತೆ ತಳಕು ಹಾಕಿಕೊಂಡಿತ್ತು. ಈ ಗಾಸಿಪ್‌ಗೆ ಖುದ್ದು ನಟಿ ಸಂಜನಾ ಆನಂದ್‌ ಸ್ಪಷ್ಟನೆ ನೀಡಿದ್ದಾರೆ.

6 /9

ನಟಿ ಸಂಜನಾ ಆನಂದ್‌ ತಮ್ಮ ಬಗ್ಗೆ ಕೇಳಿ ಬಂದ ಗಾಸಿಪ್‌ಗಳ ಬಗ್ಗೆ ಖಾಸಗಿ ವಾಹಿನಿಯ ಇಂಟರ್‌ವೀವ್‌ನಲ್ಲಿ ಮಾತನಾಡಿದ್ದಾರೆ . ನನಗೆ ಮತ್ತು ಚಂದನ್‌ ಶೆಟ್ಟಿಗೆ ಮದುವೆಯಾಗಿತ್ತು ಎನ್ನುವ ವದಂತಿ ಒಂದು ಹಬ್ಬಿತ್ತು ಎಂದು ಹೇಳಿದ್ದಾರೆ. 

7 /9

ಅವರ ಡಿವೋರ್ಸ್‌ಗೆ ನಾನು ಕಾರಣ ಅಂತಾ ಹೇಳಿದ್ರು. ನನ್ನ ಸಂಬಂಧಿಕರು ಸಹ ನನಗೆ ಕಾಲ್‌ ಮಾಡಿ ಕೇಳೋಕೆ ಶುರು ಮಾಡಿದ್ದರು. ಆ ಮಟ್ಟಕ್ಕೆ ಈ ಸುದ್ದಿ ವೈರಲ್‌ ಆಗಿತ್ತು ಎಂದು ಸಂಜನಾ ಆನಂದ್‌ ಹೇಳಿದ್ದಾರೆ. 

8 /9

ಆದರೆ ನನಗೆ ಆ ಸುದ್ದಿ ಗೊತ್ತೇ ಇರಲಿಲ್ಲ. ಪ್ರೋಡ್ಯೂಸರ್‌ಗಳು ಕೂಡ ಕಾಲ್‌ ಮಾಡಿ ಕೇಳಿದರು. ಆಮೇಲೆ ನನಗೆ ಈ ವಿಚಾರ ಇಷ್ಟು ದೊಡ್ಡದಾಗಿದೆ ಅಂತ ಗೊತ್ತಾಯ್ತು. ಸ್ವಲ್ಪ ದಿನ ಹೋದರೆ ನಿಲ್ಲುತ್ತದೆ ಅಂತಾ ಸುಮ್ಮನಾಗಿ ಬಿಟ್ಟೆ. ಆದರೆ ಅದು ನಿಲ್ಲುವ ಹಾಗೇ ಕಾಣಲೇ ಇಲ್ಲ ಎಂದು ಸಂಜನಾ ಆನಂದ್‌ ಹೇಳಿದ್ದಾರೆ.  

9 /9

AI ನಲ್ಲಿ ನಮ್ಮಿಬ್ಬರಿಗೂ ಮದುವೆ ಡ್ರೆಸ್‌ ಹಾಕಿಸಿ ಮಂಗಳೂರಿನಲ್ಲಿ ಮದುವೆ ಅಂತೆಲ್ಲಾ ಪೋಸ್ಟ್‌ ಹಾಕಿದರು. ಆಗ ಸ್ವಲ್ಪ ಸೀರಿಯಸ್‌ ಆಗಿ ತಗೊಂಡೆ. ಇದೆಲ್ಲಾ ಸುಳ್ಳು ಅಂತಾ ಸ್ಪಷ್ಟನೆ ಕೊಟ್ಟೆ ಎಂದು ಸಂಜನಾ ಆನಂದ್‌ ಹೇಳಿದ್ದಾರೆ.