ಜ್ಞಾಪಕಶಕ್ತಿಯನ್ನೇ ಕಳೆದುಕೊಂಡ "ಸಿಂಹಾದ್ರಿ ಸಿಂಹ" ನಟಿ..! ಯಾರನ್ನೂ ಗುರುತು ಹಿಡಿಯುತ್ತಿಲ್ಲ.. ಏನೂ ನೆನಪಿಲ್ಲ..

Actress Bhanupriya : ಭವಿಷ್ಯ ಯಾರಿಗೆ ಗೊತ್ತಿರುತ್ತೆ ಹೇಳಿ.. ದೇವರ ಆಟ ಬಲ್ಲವರಾರು..? ಎನ್ನುವಂತೆ ಅವನು ಆಡಿಸಿದಂತೆ ಆಡುವ ಗೊಂಬೆಗಳು ನಾವು.. ಯಾರಿಗೆ ಯಾವಾಗ ಏನಾಗುತ್ತೆ..? ಎನ್ನುವ ಅರಿವು ಇರುವುದೇ ಇಲ್ಲ.. ಅದರಂತೆ ಒಂದು ಕಾಲದಲ್ಲಿ ಸ್ಟಾರ್‌ ಆಗಿ ಮೆರೆದಿದ್ದ ಈ ನಟಿ ಇದೀಗ ಸ್ಮರಣಾಶಕ್ತಿ ಕಳೆದುಕೊಂಡು ನೋವು ಅನುಭವಿಸುತ್ತಿದ್ದಾರೆ. ಯಾರವರು..? ಬನ್ನಿ ನೋಡೋಣ..
 

1 /8

ನಟರಂತೆ.. ನಟಿಯರೂ ಸಹ ಹಿಟ್ ಸಿನಿಮಾಗಳನ್ನು ನೀಡಿದಾಗ, ಸಾಕಷ್ಟು ಅಭಿಮಾನಿಗ ಬಳಗ ಸೃಷ್ಟಿಯಾಗುತ್ತದೆ. ಅವರನ್ನು ನೋಡಲು ತಮ್ಮ ಪ್ರಾಣವನ್ನೇ ನೀಡುವ ಪ್ರೇಕ್ಷಕರೂ ಇದ್ದಾರೆ.. ಆದರೆ ಅವರು ವಯಸ್ಸಾದಂತೆ, ತೆರೆಮರೆಯಲ್ಲಿ ಹೋದರೆ.. ಅವರು ಸತ್ತರೂ ಅವರನ್ನು ನೋಡಲು ಯಾರೂ ಇರುವುದಿಲ್ಲ... ಕೆಲವು ಕಲಾವಿದರು ಬೀದಿಗೆ ಬಿದ್ದಿ ಅನಾಥರಂತೆ ಸತ್ತ ಉದಾರಹಣೆಗಳೂ ನಮ್ಮ ಮುಂದಿವೆ..   

2 /8

ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಖ್ಯಾತ ಶಾಸ್ತ್ರೀಯ ನರ್ತಕಿ, ನಟಿ ಭಾನುಪ್ರಿಯಾ, ತಮ್ಮ ನಟನೆಯಿಂದ ಮಾತ್ರವಲ್ಲದೆ ನೃತ್ಯದಿಂದಲೂ ಪ್ರೇಕ್ಷಕರನ್ನು ಮೋಡಿ ಮಾಡಿದ್ದರು..   

3 /8

1994 ರಲ್ಲಿ ರವಿಚಂದ್ರನ್ ಅವರ 'ರಸಿಕ' ಚಿತ್ರದ ಮೂಲಕ ಈ ಚೆಲುವೆ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ತಮ್ಮ ಸೌಂದರ್ಯ ಮತ್ತು ನಟನೆಯ ಮೂಲಕ ಮೊದಲ ಸಿನಿಮಾದಿಂದಲೇ ಕನ್ನಡ ಸಿನಿ ಪ್ರೇಕ್ಷಕರಿಗೆ ಇಷ್ಟವಾದರು. ಅದರ ನಂತರ.. 'ದೇವರ ಮಗ', 'ಸಿಂಹಾದ್ರಿ ಸಿಂಹ', 'ಕದಂಬ', 'ಮೇಸ್ಟ್ರು' ಹೀಗೆ ಮುಂತಾದ ಚಿತ್ರಗಳಲ್ಲಿ ನಟಿಸಿದರು.  

4 /8

ಪ್ರಸಿದ್ಧ ಕೂಚಿಪುಡಿ ನೃತ್ಯಗಾರ್ತಿ ಭಾನುಪ್ರಿಯಾ ಅವರಿಗೆ ನೃತ್ಯದ ಬಗ್ಗೆ ಅಪಾರ ಆಸಕ್ತಿ ಇದೆ. ಈಗ 58 ವರ್ಷ ವಯಸ್ಸಿನ ನಟಿ, ಅತಿ ದೊಡ್ಡ ದುರಂತವನ್ನು ಎದುರಿಸುತ್ತಿದ್ದಾರೆ. ಸ್ಮರಣಶಕ್ತಿ ಸಂಪೂರ್ಣವಾಗಿ ಕಳೆದುಕೊಂಡು.. ಹಲವಾರು ದುರಂತಗಳನ್ನು ಎದುರಿಸಿ.. ಕೊನೆಗೆ ಚಿತ್ರರಂಗದಿಂದ ದೂರ ಸರಿದರು.  

5 /8

90 ರ ದಶಕದಲ್ಲಿ ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಅತ್ಯಂತ ಬೇಡಿಕೆಯ ನಟಿ ಎಂದು ಗುರುತಿಸಲ್ಪಟ್ಟ ಭಾನುಪ್ರಿಯಾ 1998 ರಲ್ಲಿ, ಛಾಯಾಗ್ರಾಹಕ ಆದರ್ಶ್ ಕೌಶಲ್ ಅವರನ್ನು ವಿವಾಹವಾದರು. 2005 ರಲ್ಲಿ ವಿಚ್ಛೇದನದ ವರದಿಗಳು ಬಂದವು. ಇದಕ್ಕೆ ನಟಿ ಪ್ರತಿಕ್ರಿಯಿಸಿ, "ನಾವಿಬ್ಬರೂ ಚೆನ್ನಾಗಿದ್ದೇವೆ" ಎಂದು ಹೇಳಿದರು.   

6 /8

ನಾವು ಯಾವುದೋ ಕಾರಣಕ್ಕಾಗಿ ಬೇರೆ ಬೇರೆ ಸ್ಥಳಗಳಲ್ಲಿ ವಾಸಿಸುತ್ತೇವೆ. ವಿಚ್ಛೇದನ ಆಗಲಿಲ್ಲ. ವಿಚ್ಛೇದನ ಸುದ್ದಿ ಸುಳ್ಳು ಎಂದೂ ಅವರು ಹೇಳಿದರು. ಆದರೆ 2018 ಭಾನುಪ್ರಿಯಾ ಅವರ ಜೀವನದಲ್ಲಿ ಅತಿ ದೊಡ್ಡ ಆಘಾತವಾಗಿ ಪರಿಣಮಿಸಿತು. ಅವರ ಪತಿ ಆದರ್ಶ್ ಹೃದಯಾಘಾತದಿಂದ ನಿಧನರಾದರು.   

7 /8

ಪತಿಯ ಮರಣದ ನಂತರ ನಟಿ ಭಾನುಪ್ರಿಯಾ ಖಿನ್ನತೆಗೆ ಒಳಗಾಗಿದ್ದರು. ಈಗ, ಅದೇ ಆಘಾತದಿಂದಾಗಿ ಸ್ಮರಣಶಕ್ತಿಯನ್ನು ಕಳೆದುಕೊಂಡಿರುವ ನಟಿಗೆ ಯಾರನ್ನೂ ನೆನಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಿಂದಿನ ಸಂದರ್ಶನವೊಂದರಲ್ಲಿ, ನಟಿ ತನ್ನ ಪತಿಯ ಮರಣದ ನಂತರ, ಚಲನಚಿತ್ರಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿದ್ದೇನೆ ಎಂದು ಹೇಳಿದ್ದರು.   

8 /8

ಮನಸ್ಸಿಗೆ ಶಾಂತಿ ಇಲ್ಲ.. ಅವರ ಸಾವಿನಿಂದ ಚೇತರಿಸಿಕೊಳ್ಳುವುದು ನನಗೆ ತುಂಬಾ ಕಷ್ಟಕರವಾಗಿತ್ತು. ಆರೋಗ್ಯ ಸಮಸ್ಯೆಗಳು ಪ್ರಾರಂಭವಾದವು.. ನನ್ನ ಸ್ಮರಣಶಕ್ತಿ ಈಗ ಕ್ರಮೇಣ ಕ್ಷೀಣಿಸುತ್ತಿದೆ ಎಂದು ನಟಿ ಭಾನುಪ್ರಿಯಾ ಹೇಳಿದರು. ಈ ಸುದ್ದಿ ಅಭಿಮಾನಿಗಳಿಗೆ ಶಾಕ್ ನೀಡಿತ್ತು. .