ನವದೆಹಲಿ: ತುರ್ತು ವಿಚಾರಣೆಯ ಅಗತ್ಯವಿಲ್ಲದ ಪ್ರಕರಣಗಳನ್ನು ಸುಪ್ರಿಂಕೋರ್ಟ್ ಬಳಿ ತಂದಿದ್ದೆ ಆದಲ್ಲಿ ಮುಂದೊಂದು ದಿನ ವಕೀಲರು ತುರ್ತು ಕೇಸ್ ಗಳನ್ನು ಉಲ್ಲೇಖಿಸುವ ಸೌಲಭ್ಯವನ್ನು ಕಳೆದುಕೊಳ್ಳಲಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ತಿಳಿಸಿದ್ದಾರೆ.
ಇಂದು ಮುಖ್ಯನ್ಯಾಯಮೂರ್ತಿ ಹಾಗೂ ಎಸ್.ಕೆ ಕೌಲ್ ಅವರನ್ನು ಒಳಗೊಂಡ ಪೀಠ ವಕೀಲರಿಗೆ ತುರ್ತು ವಿಚಾರಣೆ ಅಗತ್ಯವಿರುವ ಕೇಸ್ ಗಳನ್ನು ಮಾತ್ರ ಮಾತ್ರ ವಿಚಾರಣೆಗೆ ತನ್ನಿ ಇಲ್ಲದೆ ಹೋದರೆ ಸದ್ಯ ವಕೀಲರಿಗೆ ಇರುವ ಉಲ್ಲೇಖಿಸುವ ಸವಲತ್ತನ್ನು ಅವರು ಕಳೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಬಿಸಿಸಿಐನ ಅಕ್ಟೋಬರ್ 29 ಕ್ಕೆ ಇರುವ ಪಂದ್ಯದ ವಿಚಾರವಾಗಿ ಅರ್ಜಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಸುಪ್ರಿಂಕೋರ್ಟ್ ಪೀಠ ಈ ಅಭಿಪ್ರಾಯಪಟ್ಟಿದೆ.