Gadag Zoo: ಹುಟ್ಟುಹಬ್ಬಕ್ಕೆ ಬೂದು ತೋಳವನ್ನು ದತ್ತು ಪಡೆದ ಒಂದು ವರ್ಷದ ಮಗು..!

ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಹುಟ್ಟುಹಬ್ಬವನ್ನು ಹಲವು ಬಗೆಯಲ್ಲಿ ಆಚರಿಸಿಕೊಳ್ಳುವುದುಂಟು, ಅದಕ್ಕಾಗಿಯೇ ಸಾವಿರಾರು ರೂಗಳನ್ನು ವ್ಯಯ ಮಾಡಿರುವುದನ್ನು ನಾವು ಪ್ರತಿದಿನ ನೋಡಿರುತ್ತೇವೆ.

Written by - Zee Kannada News Desk | Last Updated : Sep 30, 2022, 07:24 PM IST
  • ಇಲ್ಲೊಂದು ಮಗು ಈಗ ತನ್ನ ಮೊದಲ ವರ್ಷದ ಹುಟ್ಟುಹಬ್ಬವನ್ನು ಸಾಕಷ್ಟು ಅರ್ಥಪೂರ್ಣವಾಗಿ ಆಚರಿಸಿಕೊಂಡಿದೆ.
Gadag Zoo: ಹುಟ್ಟುಹಬ್ಬಕ್ಕೆ ಬೂದು ತೋಳವನ್ನು ದತ್ತು ಪಡೆದ ಒಂದು ವರ್ಷದ ಮಗು..! title=
Photo Courtsey: Facebook

ಗದಗ: ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಹುಟ್ಟುಹಬ್ಬವನ್ನು ಹಲವು ಬಗೆಯಲ್ಲಿ ಆಚರಿಸಿಕೊಳ್ಳುವುದುಂಟು, ಅದಕ್ಕಾಗಿಯೇ ಸಾವಿರಾರು ರೂಗಳನ್ನು ವ್ಯಯ ಮಾಡಿರುವುದನ್ನು ನಾವು ಪ್ರತಿದಿನ ನೋಡಿರುತ್ತೇವೆ.

ಆದರೆ ಇಲ್ಲೊಂದು ಮಗು ಈಗ ತನ್ನ ಮೊದಲ ವರ್ಷದ ಹುಟ್ಟುಹಬ್ಬವನ್ನು ಸಾಕಷ್ಟು ಅರ್ಥಪೂರ್ಣವಾಗಿ ಆಚರಿಸಿಕೊಂಡಿದೆ. ಹೌದು, ಈ ಮಗು ವಿಜ್ರಂಭಣೆಯಿಂದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಬದಲು ಗದುಗಿನ ಬಿಂಕದಕಟ್ಟಿಯಲ್ಲಿರುವ ಮೃಗಾಲಯದಲ್ಲಿ ಬೂದು ಬಣ್ಣದ ತೋಳವನ್ನು ದತ್ತು ತೆಗೆದುಕೊಳ್ಳುವ ಮೂಲಕ ಅರ್ಥಪೂರ್ಣವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದೆ.

ಈಗ ಗದುಗಿನ ಮೃಗಾಲಯವು ಮಗುವಿನ ನಡೆಯನ್ನು ಶ್ಲಾಘಿಸುತ್ತಾ " ನಮ್ಮ ಮೃಗಾಲಯದ ಚೋಟಾ ರಾಯಭಾರಿ ಎಂದು ಹೇಳಿದೆ. "ದಿಶಾ ಮಹೇಶ ಕರಿಕಟ್ಟಿ ನಮ್ಮ ಮೃಗಾಲಯದ ಚೋಟಾ ರಾಯಭಾರಿ.ಅವರು ತಮ್ಮ 1 ನೇ ವರ್ಷದ ಹುಟ್ಟುಹಬ್ಬದಂದು 30000₹ ಚೆಕ್ ಅನ್ನು  ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೈ ಮೇಡಂ ಅವರಿಗೆ ನೀಡುವ ಮೂಲಕ ಭಾರತೀಯ ಬೂದು ತೋಳವನ್ನು ದತ್ತು ತೆಗೆದುಕೊಳ್ಳುತ್ತಿದ್ದಾರೆ. ಶುಕ್ರವಾರ ಅಂದರೆ 30/9/2022 ರಂದು ಆಕೆಗೆ ಒಂದು ವರ್ಷ ತುಂಬುತ್ತಿದೆ.ಆಕೆಯ ತಂದೆ ಮಹೇಶ ಕರಿಕಟ್ಟಿ ಬೆಂಗಳೂರಿನ ವಿಎಂ ವೇರ್ ಸಾಫ್ಟ್‌ವೇರ್ ಲಿಮಿಟೆಡ್‌ನಲ್ಲಿ ವ್ಯಾಪಾರ ವಿಶ್ಲೇಷಕರಾಗಿ ಕೆಲಸ ಮಾಡುತ್ತಿದ್ದಾರೆ.ಭಾರತೀಯ ಬೂದು ತೋಳವು ಮುಖ್ಯವಾಗಿ ಡೆಕ್ಕನ್ ಪ್ರಸ್ಥಭೂಮಿ ಪ್ರದೇಶದಲ್ಲಿ ಹುಲ್ಲುಗಾವಲು, ಕುರುಚಲು ಕಾಡುಗಳಿಗೆ ಸೀಮಿತವಾಗಿದೆ.  ಭಾರತೀಯ ವನ್ಯಜೀವಿ ಸಂರಕ್ಷಣೆಯ ಪ್ರಕಾರ ಇದು ಹೆಚ್ಚು ಅಳಿವಿನಂಚಿನಲ್ಲಿದೆ, ಇದು ಶುಷ್ಕ ಪ್ರದೇಶದ ಪ್ರಮುಖ ಜಾತಿಯಾಗಿದೆ." ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ.

ಗದುಗಿನ ಮೃಗಾಲಯವು ಕಳೆದ ಎರಡು ವರ್ಷಗಳಿಂದ ಆನ್ ಲೈನ್ ಹಾಗೂ ಆಫ್ ಲೈನ್ ಮೂಲಕ ಪ್ರಾಣಿಗಳನ್ನು ದತ್ತು ಸ್ವೀಕಾರ ಮಾಡುವುದಕ್ಕೆ ಅವಕಾಶ ಕಲ್ಪಿಸಿದೆ.ಅದರ ಭಾಗವಾಗಿ ಈಗ ಯುವಕರು ಮಕ್ಕಳು ಈಗ ದತ್ತು ಸ್ವೀಕಾರಕ್ಕೆ ಮುಂದಾಗುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News