Rudraksha Benefits: ಪೌರಾಣಿಕ ನಂಬಿಕೆಗಳ ಪ್ರಕಾರ ಶಿವನ ಕಣ್ಣೀರಿನ ಹನಿಗಳಿಂದ ರುದ್ರಾಕ್ಷ ಉತ್ಪತ್ತಿಯಾಗಿದೆ ಎನ್ನಲಾಗುತ್ತದೆ. ಶಿವನಿಗೆ ಪ್ರಿಯವಾದ ರುದ್ರಾಕ್ಷದ ಹಲವು ಲಾಭಗಳಿವೆ. ಬಹುತೇಕರಿಗೆ ಇದರ ಲಾಭಗಳು ತಿಳಿದಿಲ್ಲ.
Rudraksha Benefits: ಪೌರಾಣಿಕ ನಂಬಿಕೆಗಳ ಪ್ರಕಾರ ಶಿವನ ಕಣ್ಣೀರಿನ ಹನಿಗಳಿಂದ ರುದ್ರಾಕ್ಷ ಉತ್ಪತ್ತಿಯಾಗಿದೆ ಎನ್ನಲಾಗುತ್ತದೆ. ಶಿವನಿಗೆ ಪ್ರಿಯವಾದ ರುದ್ರಾಕ್ಷದ ಹಲವು ಲಾಭಗಳಿವೆ. ಬಹುತೇಕರಿಗೆ ಇದರ ಲಾಭಗಳು ತಿಳಿದಿಲ್ಲ. ಶಿವಪುರಾಣದಲ್ಲಿ ಒಟ್ಟು 16 ರೀತಿಯ ರುದ್ರಾಕ್ಷಗಳ ಕುರಿತು ಉಲ್ಲೇಖಿಸಲಾಗಿದೆ ಮತ್ತು ಅವುಗಳು ತನ್ನದೇ ಆದ ವಿಶೇಷತೆಯನ್ನು ಹೊಂದಿವೆ. ಯಾವುದೇ ಒಂದು ರುದ್ರಾಕ್ಷವನ್ನು ಪ್ರತಿಯೊಬ್ಬರೂ ಧರಿಸಲು ಸಾಧ್ಯವಿಲ್ಲ. ಜೋತಿಷ್ಯ ಪಂಡಿತರ ಸಲಹೆಯನ್ನು ಪಡೆದು ರುದ್ರಾಕ್ಷವನ್ನು ಧರಿಸಬೇಕು ಎನ್ನಲಾಗುತ್ತದೆ. ಇಂದು ನಾವು ಏಕ ಮುಖಿ ರುದ್ರಕ್ಷದ ಕುರಿತು ತಿಳಿದುಕೊಳ್ಳೋಣ.
ಇದನ್ನೂ ಓದಿ-ಈ ದಿನಾಂಕದಲ್ಲಿ ಜನಿಸಿದವರು 35 ವರ್ಷದ ನಂತರ ಯಶಸ್ಸು ಕಾಣುತ್ತಾರೆ..!
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ಧನ ಪ್ರಾಪ್ತಿಗಾಗಿ ಧರಿಸಬಹುದು- ರುದ್ರಾಕ್ಷ ಧರಿಸುವುದರಿಂದ ವ್ಯಕ್ತಿ ತನ್ನ ಇಂದ್ರಿಯಗಳ ಮೇಲೆ ಜಯ ಸಾಧಿಸಬಹುದು ಎನ್ನಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಧನ ಪ್ರಾಪ್ತಿಗಾಗಿ ರುದ್ರಾಕ್ಷ ಧರಿಸಬಹುದು. ವಿದ್ಯಾರ್ಥಿಗಳ ಪಾಲಿಗೂ ಕೂಡ ಇದನ್ನು ಅತ್ಯಂತ ಲಾಭಕಾರಿ ಎಂದು ಹೇಳಲಾಗಿದೆ. ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯಲು ಏಕಮುಖಿ ರುದ್ರಾಕ್ಷ ಧರಿಸಲು ಸಲಹೆ ನೀಡಲಾಗುತ್ತದೆ.
2. ರೋಗಗಳಿಂದ ಮುಕ್ತಿ ಸಿಗುತ್ತದೆ - ರುದ್ರಾಕ್ಷ ಧರಿಸುವುದರಿಂದ ವ್ಯಕ್ತಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ಯಾವುದೇ ಓರ್ವ ವ್ಯಕ್ತಿಯ ಕುಂಡಲಿ ಅಥವಾ ಜಾತಕದಲ್ಲಿ ಸೂರ್ಯ ದುರ್ಬಲನಾಗಿದ್ದರೆ, ಏಕಮುಖಿ ರುದ್ರಾಕ್ಷ ಧರಿಸಲು ಸಲಹೆ ನೀಡಲಾಗುತ್ತದೆ. ಇದು ಬ್ಲಡ್ ಪ್ರೆಶರ್ ಹಾಗೂ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಂದಲೂ ಕೂಡ ರಕ್ಷಣೆ ನೀಡುತ್ತದೆ.
3. ಈ ಜನರು ರುದ್ರಾಕ್ಷವನ್ನು ಧರಿಸಬೇಕು - ಜೋತಿಷ್ಯ ಶಾಸ್ತ್ರದ ಪ್ರಕಾರ, ಏಕ ಮುಖಿ ರುದ್ರಾಕ್ಷವನ್ನು ಯಾರು ಬೇಕಾದರೂ ಧರಿಸಬಹುದು. ಆದರೆ, ಇದರ ಸಂಬಂಧ ಸೂರ್ಯ ಗ್ರಹದ ಜೊತೆ ಇರುವ ಕಾರಣ, ಸಿಂಹ ರಾಶಿಯ ಜನರಿಗೆ ಇದು ವಿಶೇಷ ಫಲದಾಯಿ ಸಾಬೀತಾಗಲಿದೆ. ಇತರ ರಾಶಿಯ ಜನರೂ ಕೂಡ ಜೋತಿಷ್ಯ ಪಂಡಿತರ ಸಲಹೆ ಪಡೆದು ಇದನ್ನು ಧರಿಸಬಹುದು.
4. ಈ ರೀತಿ ಅಸಲಿ ರುದ್ರಾಕ್ಷವನ್ನು ಗುರುತಿಸಿ- ಏಕ ಮುಖಿ ರುದ್ರಾಕ್ಷ ಅಸಲಿಯಾಗಿದೆಯೋ ಅಥವಾ ನಕಲಿಯಾಗಿದೆಯೋ ಎಂಬುದನ್ನು ತಿಳಿಯಲು ಅದನ್ನು ಸಾಸಿವೆ ಎಣ್ಣೆಯಲ್ಲಿ ಹಾಕಿ. ಒಂದು ವೇಳೆ ಅದು ಮೊದಲಿಗಿಂತ ಹೆಚ್ಚು ಗಾಢ ಬಣ್ಣಕ್ಕೆ ತಿರುಗಿದರೆ, ರುದ್ರಾಕ್ಷ ಅಸಲಿಯಾಗಿದೆ ಎಂದರ್ಥ. ಏಕ ಮುಖಿ ರುದ್ರಾಕ್ಷದಲ್ಲಿ ಒಂದೇ ಗೆರೆ ಇರುತ್ತದೆ. ಬಿಸಿನೀರಿನಲ್ಲಿ ಕುದಿಸಿದಾಗ ಒಂದು ವೇಳೆ ಅದು ತನ್ನ ಬಣ್ಣವನ್ನು ತ್ಯಜಿಸಿದರೆ, ಅದು ನಕಲಿಯಾಗಿದೆ ಎಂದರ್ಥ
5. ಏಕಮುಖಿ ರುದ್ರಾಕ್ಷ ಧರಿಸುವುದರ ಲಾಭಗಳು- ಶಿವ ಪುರಾಣದ ಪ್ರಕಾರ, ರುದ್ರಾಕ್ಷವನ್ನು ಧರಿಸುವುದರಿಂದ ವ್ಯಕ್ತಿ ತನ್ನನ್ನು ತಾನು ಶಿವನ ಸನೀಹಕ್ಕೆ ಇರುವ ಅನುಭವ ಪಡೆಯುತ್ತಾನೆ. ಇದನ್ನು ಧರಿಸುವುದರಿಂದ ವ್ಯಕ್ತಿಗೆ ಜನ್ಮ-ಮರಣದ ಚಕ್ರದಿಂದ ಮುಕ್ತಿ ಸಿಗುತ್ತದೆ ಎನ್ನಲಾಗುತ್ತದೆ. ಅಂದರೆ, ಮೋಕ್ಷ ಪ್ರಾಪ್ತಿಗೆ ಇದೊಂದು ಸರಳ ಸಾಧ್ಯ ಎಂದು ನಂಬಲಾಗಿದೆ. ಇದನ್ನು ಧರಿಸುವುದರಿಂದ ಧಾರ್ಮಿಕ ಕಾರ್ಯಗಳಲ್ಲಿ ವ್ಯಕ್ತಿಯ ಅಭಿರುಚಿ ಹೆಚ್ಚಾಗುತ್ತದೆ ಎನ್ನಲಾಗುತ್ತದೆ.